ಬಾಯ್ಕಾಟ್ ಅಂಬಾನಿ-ಅದಾನಿ; ಕಾರ್ಪೊರೇಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವುದೇಕೆ ಸುವರ್ಣ ನ್ಯೂಸ್‌?

ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ನೀತಿಗಳ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದದೆ. ಇಂದಿನಿಂದ (ಡಿ.14) ರೈತರು ದೆಹಲಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಅಲ್ಲದೆ, ಈ ನೀತಿಗಳು ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ ಕುಣಿಗೆ ಸಿಕ್ಕಿಸುತ್ತವೆ. ಇವು ಬಿಜೆಪಿಯ ಮಿತ್ರರಾದ ಅಂಬಾನಿ-ಅದಾನಿಗಳಿಗಾಗಿ ಜಾರಿಗೆ ತರಲಾಗಿದೆ ಎಂದು ಆರೋಪಿಸಿರುವ ರೈತರು ಬಾಯ್ಕಾಟ್ ಅಂಬಾನಿ-ಅದಾನಿ ಅಭಿಯಾನಕ್ಕೆ ಕರೆಕೊಟ್ಟಿದ್ದಾರೆ.

ಸುಮಾರು 19 ದಿನಗಳನ್ನು ದಾಟಿರುವ ರೈತರ ಹೋರಾಟದ ಬಗ್ಗೆ ಬಹುತೇಕ ಗೋದಿ ಮಿಡೀಯಾಗಳು ಭಯೋತ್ಪಾದಕರು, ಖಲಿಸ್ಥಾನಿಗಳು ಎಂದು ಹಣೆಪಟ್ಟಿ ಕಟ್ಟುತ್ತಿದೆ. ರೈತರ ಹೋರಾಟ ದೆಹಲಿಯದ್ದು ಎಂದು ಭಾವಿಸಿರುವ ಕನ್ನಡ ಮಾಧ್ಯಮಗಳಂತೂ ರೈತ ಹೋರಾಟದ ಬಗೆಗೆ ಸುದ್ದಿಯನ್ನೇ ಮಾಡಲು ಮುಂದಾಗಿಲ್ಲ.

ಆದರೆ, ರೈತರು ಬಾಯ್ಕಾಟ್‌ ಜಿಯೋ-ಅಂಬಾನಿ-ಅದಾನಿ ಎಂದ ತಕ್ಷಣ ಸುವರ್ಣ ಟಿವಿಯ ಅಜಿತ್‌ ಹನುಮಕ್ಕನವರ್‌ಗೆ ಭಾರೀ ಬೇಸರವಾದಂತಿದೆ. ರೈತರ ಪ್ರತಿಭಟನೆಗೂ, ಬಾಯ್ಕಾಟ್‌ ಅಂಬಾನಿ-ಅದಾನಿಗೂ ಏನು ಸಂಬಂಧ, ಈ ಕರೆ ಯಾಕೆ. ಯಾರಾದರೂ ನನಗೆ ವಿವರಿಸಿ ಎಂದು ಅಜಿತ್‌ ಪ್ರಶ್ನೆ ಹಾಕಿದ್ದಾರೆ.

ಒಂದು ಚಾನೆಲ್‌ನ ಸಂಪಾದಕನಾಗಿರುವ ಅಜಿತ್‌ಗೆ ಇಷ್ಟು ಗೊತ್ತಿಲ್ಲ ಅಂದ್ರೆ ಹೇಗೆ ಅಂತ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಕಿಚಾಯಿಸಿದ್ದಾರೆ.

ಬಹುಶಃ ಆತನಿಗೆ ಗೊತ್ತಿಲ್ಲಾ ಅಂದ್ರು ತಪ್ಪೇನು ಇಲ್ಲ. ಮಾನ್ಸೂನ್‌ ಅಧಿವೇಶನದ ಸಂದರ್ಭದಲ್ಲಿ ಎಪಿಎಂಸಿ ತಿದ್ದುಪಡಿ ಕಾಯ್ದೆಯ ವಿರುದ್ಧ ಕರ್ನಾಟಕದಲ್ಲಿ ಹೋರಾಟ ನಡೆಯುತ್ತಿದ್ದಾಗ, ನಾವು ಅನ್ನ ತಿನ್ನಲ್ಲ, ಚಪಾತಿ ತಿನ್ನುತ್ತೇವೆ ಎಂದಿದ್ದ ಮೂರ್ಖ ಆತ. ಚಪಾತಿಗೆ ಗೋಧಿಯನ್ನು ಸುವರ್ಣ ನ್ಯೂಸ್‌ ಕಚೇರಿಯಲ್ಲಿ ಬೆಳೆಯಲ್ಲ, ಅದನ್ನೂ ರೈತನೇ ಬೆಳೆಯೋದು ಎಂದು ಟ್ರೋಲ್‌ ಅಗಿದ್ದವರು ಅಜಿತ್‌ ಹನುಮಕ್ಕನವರ್‌.

ಅಲ್ಲದೆ, ಅಂಬಾನಿ ಒಡೆತನದ ರಿಲಯನ್ಸ್‌ ಕಂಪನಿಯ ಜಿಯೋ ಸಿಮ್‌ನಿಂದಾಗಿ ನಾವು ಇಂದು ನಮ್ಮ ಮಕ್ಕಳನ್ನು ಆನ್‌ಲೈನ್‌ ಕ್ಲಾಸ್‌ಗಳಿಗೆ ಕಳಿಸಲು ಸಾಧ್ಯವಾಗುತ್ತಿದೆ. ಡೇಟಾ ನೆಟ್‌ವರ್ಕ್ ಕ್ಷೇತ್ರದಲ್ಲಿ ಅಂಬಾನಿ ಮಾಡಿದ ಕ್ರಾಂತಿಯಿಂದ ಇದು ಸಾಧ್ಯವಾಗಿದೆ ಎಂದು ಜನರ ಮೇಲೆ ಎಮೋಷನಲ್‌ ಆಗಿ ಪ್ರಭಾವ ಬೀರುವ ಮಾತುಗಳನ್ನು ಅಜಿತ್‌ ಎಸೆದಿದ್ದಾರೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರೆಂದ ‘ಗೋದಿ ಮೀಡಿಯಾ’; ಮಾಧ್ಯಮಗಳ ವರ್ತನೆ ಹೀಗಿದೆ ನೋಡಿ!

ಅಂದಹಾಗೆ, ಅಂಬಾನಿ ಏನು ದೇಶದ ಜನರ ಉದ್ದಾರಕ್ಕಾಗಿ ಜಿಯೋ ಸಿಮ್‌-ನೆಟ್‌ವರ್ಕ್‌ ತರಲಿಲ್ಲ. ಈಗಾಗಲೇ ದೊಡ್ಡ ಜಾಲವಾಗಿ ಬೆಳೆದಿದ್ದ ಮೊಬೈಲ್‌ ಸಿಮ್‌ಗಳ ವಿರುದ್ಧದ ಕಾಂಪಿಟೇನ್‌ನಲ್ಲಿ ತಾನು ಹೆಚ್ಚು ಜಾಗ ಮಾಡಿಕೊಳ್ಳುವ ಮತ್ತು ಉಳದಿ ನೆಟ್‌ವರ್ಕ್‌ಗಳನ್ನು ಮುಳುಗಿಸುವ ಉದ್ದೇಶದಿಂದ ಜಾರಿಗೆ ಬಂದದ್ದು, ಇದರಿಂದಾಗಿ ಅಂಬಾನಿ ತನ್ನ ಪ್ರಭಾವವನ್ನು ಹೆಚ್ಚಿಕೊಳ್ಳಲು ಸಾಧ್ಯವಾಗಿದೆ.

ಈಗಾಗಲೇ, ಜಿಯೋ ಬಿಟ್ಟರೆ ಮತ್ತಾವ ನೆಟ್‌ವರ್ಕ್ ಸರಿಯಿಲ್ಲ ಎನ್ನುವಂತಹ ಸ್ಥಿತಿಗೆ ವ್ಯವಸ್ಥಿತವಾಗಿ ಉಳಿದ ಕಂಪನಿಗಳನ್ನು ಮುಳುಗಿಸಲಾಗುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ನೆಲಕಚ್ಚಿದೆ. ಮುಂದಿನ ದಿನಗಳಲ್ಲಿ ನೆಟ್‌ವರ್ಕ್‌ ಕ್ಷೇತ್ರವನ್ನು ಸಂಪೂರ್ಣ ವಶಪಡಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದ್ದು, ನಂತರದಲ್ಲಿ ತನ್ನದೇ ದರ್ಬಾರು ನಡೆಯಲಿದ್ದು, ತಾವು ಮಾಡಿದ್ದೇ ರೂಲ್ಸ್‌ ಎಂಬಂತೆ ಅಂಬಾನಿ ಹೇಳುವ ಬೆಲೆಯನ್ನು ಡೇಟಾ ಪ್ಯಾಕ್‌ಗಾಗಿ ನಾವು ತೆರಬೇಕಾದ ಸಂದರ್ಭ ನಿರ್ಮಾಣವಾಗಲಿದೆ. ಇದು ಪಾಪ ಸುವರ್ಣ ಟಿವಿಯ ಅಜಿತ್‌ಗೆ ಅರ್ಥವಾದಂತಿಲ್ಲ ಎಂಬುದು ಜಾಲತಾಣಿಗರ ಅಭಿಪ್ರಾಯ.

ಅಂಬಾನಿ-ಅದಾನಿಗೂ, ಕೃಷಿ ನೀತಿಗಳಿಗೂ ಏನು ಸಂಬಂಧ?

ರೈತ ಹೋರಾಟದಲ್ಲಿ ಬಾಯ್ಕಾಟ್‌ ಅಂಬಾನಿ ಅದಾನಿ ಕರೆ ಏಕೆ? ಅವರಿಗೂ ಕೃಷಿ ನೀತಿಗಳು ಏನು ಸಂಬಂಧ? ಎಂದು ಅಜಿತ್ ಪ್ರಶ್ನಿಸಿದ್ದಾರೆ. ಮೋದಿ ಸರ್ಕಾರ ಜಾರಿಗೆ ತಂದಿರುವ ಹೊಸ ಮೂರು ಕೃಷಿ ಕಾನೂನುಗಳು ಕಾರ್ಪೊರೇಟ್‌ಗಳಿಗೆ ಹೆಚ್ಚು ಅನುಕೂಲಕರವಾಗಿವೆ ಎಂಬುದು ಆ ಕಾನೂನುಗಳ ಮೇಲೆ ಕಣ್ಣಾಡಿಸಿದರೇ ತಿಳಿಯುತ್ತದೆ.

ಮೋದಿ ಸರ್ಕಾರ ಹೇಳುತ್ತಿರುವಂತೆ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವಂತೆ ಮಾರುಕಟ್ಟೆಯನ್ನು ಮುಕ್ತಗೊಳಿಸುತ್ತೇವೆ ಎಂದು ಹೇಳುತ್ತಿದೆ. ಅಕ್ಷರ ಸಹ ಇದು ಎಂಪಿಎಂಸಿಗಳನ್ನು ಸಂಪೂರ್ಣವಾಗಿ ಮುಚ್ಚುತ್ತದೆ. ಜೊತೆಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಕೂಡ ರದ್ದಾಗುತ್ತದೆ.

ಇದರಿಂದಾಗಿ, ರೈತರು ಒಂದಷ್ಟು ದಿನಗಳ ಕಾಲ ಎಲ್ಲಿ ಬೇಕಾದರೂ ತಮ್ಮ ಬೆಳೆಯನ್ನು ಮಾರಾಟ ಮಾಡಬಹುದಾದರೂ, ಆಗಲೂ ಬೆಲೆಯನ್ನು ನಿಗದಿ ಮಾಡುವವರು ಈ ಕಾರ್ಪೊರೇಟ್‌ (ಅಂಬಾನಿ-ಅದಾನಿ)ಗಳೇ ಆಗಿರುತ್ತಾರೆ.

ಸರ್ಕಾರ ಮಾರುಕಟ್ಟೆಗಳಾದ ಎಪಿಎಂಸಿಗಳಲ್ಲಿಯೇ ರೈತರಿಗೆ ಸರಿಯಾದ ಬೆಲೆ ನಿಗದೇ ಇದ್ಧಾಗ, ಖಾಸಗೀ ಮಾರುಕಟ್ಟೆಗಳಲ್ಲಿ ಉತ್ತಮ ಬೆಲೆಯನ್ನು ನಿರೀಕ್ಷಿಸಲು ಸಾಧ್ಯವೇ? ಅದೂ ಎಂಎಸ್‌ಪಿ ಯೂ ಇಲ್ಲದೆ.

ಇದನ್ನೂ ಓದಿ: ಶೇಮ್‌ ಆನ್ ಮೀಡಿಯಾ: ರೈತರು ಮಾಧ್ಯಮಗಳನ್ನು ತಿರಸ್ಕರಿಸುತ್ತಿರುವುದೇಕೆ?

ಅಲ್ಲದೆ, ಹೊಸ ಕೃಷಿ ಕಾನೂನಿನಲ್ಲಿ ಧಾನ್ಯಗಳ ಸಂಗ್ರಹ ಮಿತಿಯನ್ನು ಹೆಚ್ಚಿಸಲು (ರದ್ದುಗೊಳಿಸಲು) ಸರ್ಕಾರ ಮುಂದಾಗಿದೆ. ಇದರಿಂದಾಗಿ ಯಾರು ಎಷ್ಟು ಬೇಕಾದರೂ ಧಾನ್ಯಗಳನ್ನು ಸಂಗ್ರಹಿಸಿಕೊಳ್ಳಲು ನೆರವಾಗುತ್ತದೆ. ರೈತರು ತಮ್ಮ ಜೀವನ ಸಾಗಬೇಕೆಂದರೆ ಬೆಳೆದ ಬೆಳೆಗಳನ್ನು ಮಾರಾಟ ಮಾಡಲೇ ಬೇಕು. ಹಾಗದ್ದರೆ, ಸಂಗ್ರಹಿಸಿಕೊಳ್ಳುವವರು ಯಾರು? ರೈತರೇ? ಖಂಡಿತಾ ಇಲ್ಲ, ಧಾನ್ಯಗಳನ್ನು ಸಾವಿರಾರು ಟನ್‌ಗಟ್ಟಲೇ ಶೇಖರಿಸಿಟ್ಟುಕೊಳ್ಳಲುವವರು ಇದೇ ಕಾರ್ಪೋರೇಟ್‌ಗಳು.

ಕಳೆದ ಸುಮಾರು ತಿಂಗಳುಗಳ ಹಿಂದೆ ತೊಗರಿ ಬೇಳೆಯ ಬೆಲೆ ಹೆಚ್ಚಾಗಿತ್ತು. ಏಕೆಂದರೆ, ಬೆಳೆಯ ಇಳುವರಿಯೇನೂ ಕಡಿಮೆಯಾಗಿರಲಿಲ್ಲ. ಬದಲಾಗಿ ತೊಗರಿ ಬೇಳೆ ಎಲ್ಲವೂ ಅಂಬಾನಿಯ ಗುಜರಾತ್‌ನಲ್ಲಿರು ಗೋಡೋನ್‌ ಸೇರಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಬೇಳೆಗೆ ಅಭಾವ ಹೆಚ್ಚಾಗಿ, ಬೆಲೆ ಗಗನ ಮುಟ್ಟಿತ್ತು. ನಂತರ,ಗೋಡೋನ್‌ ಹಂತಹಂತವಾಗಿ ಮಾರುಕಟ್ಟೆಗೆ ಸರಬರಾಜು ಮಾಡಿದ ಅಂಬಾನಿ ತನ್ನ ಖಜಾನೆ ತುಂಬಿಸಿಕೊಂಡಿದ್ದ.

ಇಂತಹ, ದರೋಡೆಗೆ ಸರ್ಕಾರ ಕಾನೂನಾತ್ಮಕವಾಗಿ ಅವಕಾಶ ಕೊಡಲು ಮುಂದಾಗಿದೆ. ಈ ನೀತಿಗಳು ಜಾರಿಗೆ ಬರುತ್ತವೆ ಎಂಬ ಭರವಸೆಯಿಂದ ಈಗಗಲೇ, ಅದಾನಿ ಪಂಜಾಬ್‌ ಸೇರಿದಂತೆ ಹಲವು ರಾಜ್ಯಗಳಲ್ಲಿ ದೊಡ್ಡ ದೊಡ್ಡ ಬೃಹತ್ ಗೋಡೋನ್‌ಗಳನ್ನು ಕಟ್ಟಿಕೊಂಡಿದ್ದಾರೆ.

ಮೋದಿ ಸರ್ಕಾರದ ಹೊಸ ಕಾನೂನುಗಳು ಜಾರಿಗೆ ಬಂದರೆ, ರೈತರ ಬೆಳೆಗಳೆಲ್ಲೂ ಇದೇ ಅಂಬಾನಿ-ಅದಾನಿಗಳ ಗೋಡೋನ್‌ ಸೇರುತ್ತವೆ. ಬೆಲೆಗಳು ಗಗನ ಮುಟ್ಟುತ್ತವೆ. ಸಾಮಾನ್ಯ ಜನರು ಆಹಾರ ಧಾನ್ಯಗಳನ್ನೂ ಕೊಳ್ಳಲಾಗದ ಸ್ಥಿತಿ ನಿರ್ಮಾಣವಾಗುತ್ತದೆ.

ಈ ಕಾರಣಕ್ಕಾಗಿಯೇ ಈ ಕೃಷಿ ನೀತಿಗಳನ್ನು ಅಂಬಾನಿ-ಅದಾನಿಗಳ ಕಾನೂನು ಎಂದು ರೈತರು ಹೇಳುತ್ತಿದ್ದಾರೆ. ಇವರಿಗೆ ಬಿಸಿ ಮುಟ್ಟಿಸಲು ಬಾಯ್ಕಾಟ್‌ ಜಿಯೋ-ಅಂಬಾನಿ-ಅದಾನಿ ಎಂದು ಕರೆಕೊಟ್ಟಿದ್ದಾರೆ.

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗಬೇಕು. ಅದಕ್ಕಾಗಿ ಎಂಎಸ್‌ಪಿ ಖಾತ್ರಿಯಲ್ಲಿರಬೇಕು. ದೇಶದ ಮಾರುಕಟ್ಟೆಯಲ್ಲಿ ಧಾನ್ಯಗಳು ಸಿಗಬೇಕು ಎಂದರೆ ಕೃಷಿ ಮಾರುಕಟ್ಟೆ ಕಾರ್ಪೊರೇಟ್‌ ಶಕ್ತಿಗಳ ಹಿಡಿಕ್ಕೆ ಸಿಗಬಾರದು ಎಂದು ರೈತರು ಹೇಳಿದ್ದಾರೆ.

ಇದನ್ನೂ ಓದಿ: ಗೋದಿ ಮೀಡಿಯಾ ವಿರುದ್ಧ ಪರ್ಯಾಯ ಕಂಡುಕೊಂಡ ಪಂಜಾಬ್ ಯುವಜನರು!

ಆದರೆ, ಇದಾವುದನ್ನೂ ಅರಿಯದ ಅಜಿತ್‌ ಹನುಮಕ್ಕನವರ್ ಅಂಬಾನಿಗಳ ಪರ ಬ್ಯಾಂಟಿಂಗ್‌ ಮಾಡಲು ಒಂದು ಸ್ಟೋರಿಯನ್ನೇ ಬರೆದು ಜನರಲ್ಲಿ ಆನ್‌ಲೈನ್‌ ಕ್ಲಾಸ್‌ಗೆ ಅಂಬಾನಿಯೇ ನೆರವಾಗಿದ್ದಾನೆ ಎಂದು ಸಿಂಪತಿ ಸೃಷ್ಠಿಸಲು ಭಾರೀ ಕಸರತ್ತು ನಡೆಸಿದ್ದಾರೆ. ಸಾರ್ವಜನಿಕರ ಹಿತಕ್ಕಾಗಿ ರಚನೆಯಾಗುವ ಸರ್ಕಾರವೇ ಸರ್ಕಾರಿ ಸ್ವಾಮ್ಯದ ನೆಟ್‌ವರ್ಕ್‌ ಬಿಎಸ್‌ಎನ್‌ಎಸ್‌ ಅನ್ನು ಹಳ್ಳ ಹಿಡಿಸಿರುವಾಗ, ವ್ಯಾಪಾರಕ್ಕಾಗಿ ಕಂಪನಿ ನಡೆಸುವ ಅಂಬಾನಿ ಜನರಿಗಾಗಿ ಕೆಲಸ ಮಾಡುತ್ತಾನೆಯೇ?

ಆದರೆ, ಸುವರ್ಣ ಟಿವಿಯ ಅಜಿತ್‌ಗೆ ಅಂಬಾನಿ ದೇವರಂತೆ ಕಾಣಿಸುತ್ತಿದ್ದಾನೆ. ಮೋದಿಗಿಂತಲೂ ಅಂಬಾನಿಯೇ ದಯಾಳು ಎಂಬಂತೆ ಅಜಿತ್‌ ಬ್ಯಾಂಟಿಂಗ್‌ ಮಾಡಿದ್ದಾರೆ. ಮೋದಿ ವಿರುದ್ಧ ಮಾತನಾಡುವ ಧೈರ್ಯ ಹೇಗೂ ಅಜಿತ್‌ಗೆ ಇಲ್ಲಾ, ಹಾಗಾಗಿ ಮೋದಿ ಹೆಸರು ಅಲ್ಲಿ ಪ್ರಸ್ಥಾಪಿಸಿಲ್ಲ.

ಅಜಿತ್‌ ಹೇಳಲಾಗದ ಮಾತನ್ನು ಪ್ರತಿಭಟನಾ ನಿರತ ರೈತರೇ ಹೇಳಿದ್ದಾರೆ. ಎಲ್ಲವನ್ನೂ ಅಂಬಾನಿಯೇ ನಡೆಸುವುದಾದರೆ ಮಧ್ಯ ದಳ್ಳಾಳಿಯಂತೆ ಮೋದಿ ಯಾಕೆ ಬೇಕು? ಮೋದಿಯನ್ನು ಕಿತ್ತು ಅಂಬಾನಿಯನ್ನೇ ಪ್ರಧಾನಿ ಮಾಡಿ ಎಂದು..

ಮೋದಿ ಸರ್ಕಾರ ಹೇಳುತ್ತಿರುವುದೂ ರೈತರು ಮತ್ತು ಕೊಳ್ಳುವವರ ಮಧ್ಯೆ ದಳ್ಳಾಳಿಗಳನ್ನು ಕಿತ್ತೆಸೆಯುತ್ತೇವೆ ಎಂದು. ಹಾಗಾಗಿ ಕೊಳ್ಳುವ ಅಂಬಾನಿ ಮತ್ತು ರೈತರ ನಡುವೆ ಮೋದಿ ಎಂಬ ದಳ್ಳಾಳಿಯ ಅಗತ್ಯವೂ ರೈತರಿಲ್ಲ, ಹೇಗೂ ಅಂಬಾನಿಯೇ ದೇಶದ ಎಲ್ಲಾ ಕ್ಷೇತ್ರದಲ್ಲಿಯೂ ಹಿಡಿತ ಹೊಂದಿದ್ದಾನೆ. ಅತ ಹೇಳಿದಂತೆ ಸರ್ಕಾರಗಳು ಕೇಳುತ್ತಿವೆ. ಹೀಗಿರುವಾಗ ಪ್ರಧಾನಿಯಾಗಿ ಮೋದಿ ಏಕೆ ಅಂಬಾನಿಯನ್ನೇ ಪ್ರಧಾನಿ ಮಾಡಿಬಿಡಿ ಅವನಿಷ್ಟ ಬಂದಂತೆ ಆತನೇ ಕಾನೂನುಗಳನ್ನು ಮಾಡಿಕೊಳ್ಳುತ್ತಾನೆ ಎಂದು.

ಸುವರ್ಣ ಟಿವಿಯ ಅಜಿತ್‌ ಕೂಡ ಅಂಬಾನಿಯೇ ದಯಾಳು, ಕರುಣಾಮಯಿ ಆತನಿಂದಲೇ ಎಲ್ಲಾ ಎಂದು ಹೇಳಲು ಮುಂದಾಗಿದ್ದಾರೆ. ರೈತ ಪ್ರತಿಭಟನೆಯ ವಿರುದ್ಧವಾಗಿ ಸುದ್ದಿಗಳನ್ನು ಮಾಡುತ್ತಿರುವ ಸುವರ್ಣ ನ್ಯೂಸ್‌ಗೆ ಅಂಬಾನಿಯೇ ಪ್ರಧಾನಿಯದರೂ ಅಡ್ಡಿಯಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಕ್ರೋಶ ವ್ಯಕ್ತವಾಗಿದೆ.


ಇದನ್ನೂ ಓದಿ: ರೈತರು ಮತ್ತು ‘ಗೋದಿ ಮೀಡಿಯಾ’: ನ್ಯೂಸ್‌ ಚಾನೆಲ್‌ಗಳ ಧೋರಣೆಗಳೇನು ಓದಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights