ಬೊಮ್ಮಾಯಿ ಸಂಪುಟ : ಒಕ್ಕಲಿಗ ಕೋಟಾದಲ್ಲಿ 7 ಮಂದಿಗೆ ಮಂತ್ರಿಗಿರಿ : ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು!

ಕೊನೆಗೂ ರಾಜ್ಯದ ನೂತನ ಸಚಿರ ಪಟ್ಟಿ ಬಿಡುಗಡೆಯಾಗಲಿದ್ದು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ 29 ಸಚಿವರು ಸೇರಿಕೊಳ್ಳಲಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ, “ಇಂದು ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಾಗುವುದು. ಸಚಿವರ ಪಟ್ಟಿಯನ್ನು ವರಿಷ್ಠರು ಕುಳಿತು ಸಮರ್ಘವಾಗಿ ಚರ್ಚೆ ಬಳಿಕ ತೀರ್ಮಾನ ಮಾಡಿದ್ದೇವೆ. ನಡ್ಡಾ, ಮೋದಿ, ಅಮಿತ್ ಶಾ ಮಾರ್ಗದರ್ಶನದಲ್ಲಿ ಜನ ಪರ ಆಡಳಿತ ಕೊಡುವ ಮತ್ತು ಬರುವ ಚುನಾವಣೆ ಸವಾಲು ಎದುರಿಸುವ ಹಿನ್ನೆಲೆಯಲ್ಲಿ ಈ ಸಚಿವ ಸಂಪುಟ ರಚನೆಯಾಗಿದೆ. ಇವರು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಜನರ ಸಮಸ್ಯೆಗಳನ್ನು ಸ್ಪಂದಿಸಿ ಜನರ ವಿಶ್ವಾಸ ಗಳಿಸಿ ಒಳ್ಳೆ ಆಡಳಿತ ಕೊಡುತ್ತಾರೆಂದು ನಾವೆಲ್ಲ ತೀರ್ಮಾನ ಮಾಡಿದ್ದೇವೆ. 8 ಲಿಂಗಾಯಿತ, 7 ಒಕ್ಕಲಿಗ, 7 ಓಬಿಸಿ, 3 ಎಸ್ಸಿ, 1 ಎಸ್ಟಿ, 1 ರೆಡ್ಡಿ, 1 ಮಹಿಳಾ,1 ಬ್ರಾಹ್ಮಣ ಸಮುದಾಯದ ಒಟ್ಟು 29 ಸಚಿವರು ಸಂಪುಟ ಸೇರಿಕೊಳ್ಳಲಿದ್ದಾರೆ ” ಎಂದು ಹೇಳಿದರು.

ಸಚಿವರ ಪಟ್ಟಿಯಲ್ಲಿ ಬಿವೈ ವಿಯಜೇಂದ್ರ ಹೆಸರು ಇಲ್ಲ. ಈ ಬಗ್ಗೆ ವರಿಷ್ಠ ನೇರವಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರನ ಜೊತೆಗೆ ಮಾತನಾಡಿದ್ದಾರೆ ಎಂದರು. ಇನ್ನೂ ಬಾರಿ ಡಿಸಿಎಂ ಸ್ಥಾನ ಇರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬೊಮ್ಮಾಯಿ ಸಂಪುಟದಲ್ಲಿ ಒಕ್ಕಲಿಗರ ಕೋಟಾದಲ್ಲಿ 7 ಮಂದಿಗೆ ಮಂತ್ರಿಗಿರಿ ಸಿಕ್ಕಿದೆ. ಡಾ. ಅಶ್ವತ್ಥ್ ನಾರಾಯಾಣ , ಕೆಸಿ ನಾರಾಯಣ ಗೌಡ, ಅಗರ ಜ್ಞಾನೇಂದ್ರ, ಎಸ್ ಟಿ ಸೋಮಶೇಖರ್, ಆರ್ ಅಶೋಕ್, ಡಾ.ಕೆ ಸುಧಾಕರ್, ಕೆ ಗೋಪಾಲಯ್ಯ ಬೊಮ್ಮಾಯಿ ಸಂಪುಟ ಸೇರಿದ್ದಾರೆ.

ಬೊಮ್ಮಾಯಿ ಸಂಪುಟದಲ್ಲಿ ಲಿಂಗಾಯತ ಸಮುದಾಯಕ್ಕೆ ಸಿಂಹಪಾಲು ನೀಡಲಾಗಿದೆ. ವಿ. ಸೋಮಣ್ಣ, ಮುರುಗೇಶ್ ನಿರಾಣಿ, ಮಾಧುಸ್ವಾಮಿ, ಬಿಸಿ ಪಾಟೀಲ್ , ಉಮೇಶ್ ಕತ್ತಿ, ಶಶಿಕಲಾ ಜೊಲ್ಲೆ, ಶಂಕರ ಪಾಟೀಲ್ ಮುನೇನಿ ಕೊಪ್ಪ, ಸಿಸಿ ಪಾಟೀಲ್ ಅವರಿಗೆ ಲಿಂಗಾಯತ ಕೋಟಾದಲ್ಲಿ ಸ್ಥಾನ ನೀಡಲಾಗಿದೆ.

ಇನ್ನೂ ಜಗದೀಶ್ ಶೆಟ್ಟರ್, ಸುರೇಶ್ ಕುಮಾರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಯೋಗೇಶ್ವರ್, ಆರ್.ಶಂಕರ್, ಶ್ರೀಮಂತ ಪಾಟೀಲ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ.

ಜೊತೆಗೆ ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ, ಕೋಲಾರ, ಯಾದಗಿರಿ, ಚಿಕ್ಕಮಗಳೂರು ಸೇರಿದಂತೆ ಒಟ್ಟು 13 ಜಿಲ್ಲೆಗಳಿಗೆ ಸಚಿವಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಆರು ಜಿಲ್ಲೆಗಳಿಂದ ತಲಾ ಇಬ್ಬರಿಗೆ ಮಂತ್ರಿ ಸ್ಥಾನ ಸಿಕ್ಕಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights