Bollywood : ಕಂಗನಾ ರಣಾವತ್ ಪದ್ಮಶ್ರೀ ಮತ್ತು ತುಕ್ಡೇಗ್ಯಾಂಗ್ ವಿವಾದಗಳು……

ಮೊನ್ನೆಯಷ್ಟೇ ಕೇಂದ್ರ ಸರ್ಕಾರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪ್ರತಿಷ್ಠಿತ ಗೌರವದ ಪ್ರಶಸ್ತಿಗಳನ್ನು ನೀಡಿ ಹಲವರನ್ನು ಗೌರವಿಸಿದೆ. ಅದರಲ್ಲಿ ಇಡೀ ದೇಶದ ಗಮನ ಸೆಳೆದದ್ದು ಸಿನಿಮಾ ಕ್ಷೇತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವುದು. ಅಂದಹಾಗೆ ಕಂಗನಾ ಇತ್ತೀಚೆಗಷ್ಟೇ ಸಿನಿಮಾ ಇಂಡಸ್ಟ್ರಿಗೆ ಬಂದವರು. ಅಂತಹ ಗಮನಾರ್ಹವಾದ, ವಿಭಿನ್ನವಾದ ಸಿನಿಮಾಗಳನ್ನೇನೂ ಆಕೆ ಮಾಡಿಲ್ಲ.

ನಟಿಸಿರುವುದು ಸುಮಾರು 34 ಸಿನಿಮಾಗಳಷ್ಟೇ. ಹಾಗೆ ನೋಡಿದರೆ ನೂರಾರು ಸಿನಿಮಾಗಳನ್ನು ಮಾಡಿ, ಸಿನಿಮಾರಂಗಕ್ಕೆ ಮೆರಗು ತಂದುಕೊಟ್ಟು, ತಮ್ಮದೇ ಆದ ಛಾಪು ಮೂಡಿಸಿರುವ ಹಲವಾರು ಸ್ಟಾರ್‍ಗಳು ಇನ್ನೂ ನಮ್ಮ ಮಧ್ಯದಲ್ಲೇ ಇದ್ದಾರೆ. ಕೆಲವರು ನಮ್ಮನ್ನೆಲ್ಲಾ ಅಗಲಿದ್ದಾರೆ. ಅವರಾರಿಗೂ ಸಿಗದ ಪದ್ಮಶ್ರೀ ಪ್ರಶಸ್ತಿ ಕಂಗನಾಗೆ ಮಾತ್ರ ಏಕೆ ಎಂಬುದು ಸಿನಿ ಅಭಿಮಾನಿಗಳಿಂದ ಹಿಡಿದು ಹಲವರ ಪ್ರಶ್ನೆ. ಇಂತಹ ಪ್ರಶ್ನೆಗಳಿಗೆ ಉತ್ತರವೂ ನಮ್ಮೆದುರಿಗೇ ಇದೆ. ಇತ್ತೀಚೆಗೆ ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ಸಂಘಿ ಭಯೋತ್ಪಾದಕರು ನಡೆಸಿದ ಹಲ್ಲೆಯನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ದೀಪಿಕಾ ಭಾಗವಹಿಸಿದ್ದರು. ಕಪ್ಪುಡುಗೆ ಧರಿಸಿ ಏನು ಮಾತನಾಡದೆ ಪ್ರತಿಭಟನೆಯಲ್ಲಿ ಭಾಗವಹಿಸಿ ಬಂದಿದ್ದ ದೀಪಿಕಾ ಮೌನವಾಗಿಯೇ ದೇಶಕ್ಕೆ ಸಂದೇಶ ರವಾನಿಸಿದ್ದರು.

ಇದೇ ವಿಚಾರವಾಗಿ ಸಂದರ್ಶನವೊಂದರಲ್ಲಿ ಕಂಗನಾಗೆ ದೀಪಿಕಾ ನಡೆಯ ಬಗ್ಗೆ ಕೇಳಿದ್ದ ಪ್ರಶ್ನೆಗೆ ದೀಪಿಕಾ ಬಗ್ಗೆ ನಾನೇನು ಹೇಳುವುದಿಲ್ಲ. ಆದರೆ ತುಕಡೆ ಗ್ಯಾಂಗ್ ಜೊತೆ ನಾನು ಹೋಗಿನಿಲ್ಲುವುದಿಲ್ಲ, ಅವರನ್ನು ನಾನು ವಿರೋಧಿಸುತ್ತೇನೆ ಎಂದು ಕಂಗನಾ ಹೇಳಿದ್ದರು. ಈ ಹೇಳಿಕೆಯೊಂದೇ ಸಾಕಾಗಿತ್ತು ಆಕೆ ಕೇಂದ್ರದ ಕೃಪಾಕಟಾಕ್ಷಕ್ಕೆ ಪಾತ್ರರಾಗಲು.

 

ಅಂದಹಾಗೆ ಕಂಗನಾಗೆ ಆ ಮುಂಚೆ ಮತ್ತೊಂದು ಮಾಹಿತಿ ಗೊತ್ತಿರಲಿಲ್ಲ. ಕೇಂದ್ರ ಗೃಹಸಚಿವಾಲಯ ದೇಶದಲ್ಲಿ ಯಾವುದೇ ತುಕಡೇ ಗ್ಯಾಂಗ್‍ಗಳು ಇಲ್ಲವೆಂದು ಹೇಳುತ್ತದೆಂದು. ಏನೇ ಇರಲಿ ತುಕಡೇ ಗ್ಯಾಂಗ್ ಎಂಬ ಒಂದು ಪದದ ಉಚ್ಚಾರ ಕಂಗನಾರ ಜೀವಮಾನದ ಗಮನಾರ್ಹ ಸಾಧನೆಯಾಗಿ ಪರಿಣಮಿಸಿ ಪದ್ಮಶ್ರೀ ಒಲಿಯುವಂತೆ ಮಾಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights