ಮಾಗಡಿ ರಸ್ತೆಯ ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ್ : ಇಬ್ಬರು ಸಾವು – ಮೂವರಿಗೆ ಗಂಭೀರ ಗಾಯ!

ಬೆಂಗಳೂರಿನ ಮಾಗಡಿ ರಸ್ತೆಯ ಎಂಎಂ ಫುಡ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಪೋಟ್ ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮೂವರಿಗೆ ಗಂಭೀರ ಗಾಯವಾಗಿದೆ.

ಮಧ್ಯಾಹ್ನ 1.30ಗಂಟೆಗೆ ಘಟನೆ ಸಂಭವಿಸಿದೆ. ಬಿಹಾರ್ ಮೂಲದ ಮನೀಶ್ ಮತ್ತು ಗೌರವ್ ಮೃತ ದುರ್ದೈವಿಗಳು. ಸ್ಪೋಟದ ತೀವ್ರತೆಗೆ ಮಾಲೀಕ ಸಚಿನ್ ಮತ್ತು ಶಾಂತಿ ಹಾಗೂ ಧನಲಕ್ಷ್ಮಿ ಎಂಬ ಇಬ್ಬರು ಮಹಿಳೆಯರ ಸ್ಥಿತಿ ಗಂಭೀರವಾಗಿದೆ.

ಇಬ್ಬರು ಮಹಿಳೆಯರು ಪಕ್ಕದ ಮನೆಯಲ್ಲಿದ್ದರು ಎನ್ನಲಾಗುತ್ತಿದೆ. ಸದ್ಯ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಜಯ್ ಮೆಹೆತ ಮತ್ತು ಸಚಿನ್ ಸಹಭಾಗಿತ್ವದಲ್ಲಿ ಈ ಫ್ಯಾಕ್ಟರಿ ನಡೆಯುತ್ತಿತ್ತು ಎನ್ನಲಾಗಿದೆ.

ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಸ್ಪೋಟಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights