ಬಿಎಂಟಿಸಿ ಬಸ್ ಹತ್ತಿದ ಸಿಎಂ : ಸ್ವಯಂ ಘೋಷಿತ ಮಹಿಳಾ ಸಿಎಂನಿಂದ ಹೈಡ್ರಾಮಾ!
ಇಂದು ಬೆಳಿಗ್ಗೆ ಬೆಳಿಗ್ಗೆ ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮಹಿಳಾ ಸಿಎಂ ದರ್ಶನವಾಗಿದೆ. ಬಸ್ ಹತ್ತಿದ ಸಿಎಂ ಕಂಡು ಕಂಡ್ಯಾಕ್ಟರ್, ಡ್ರೈವರ್, ಪ್ರಯಾಣಿಕರು ಶಾಕ್ ಆಗಿದ್ದಾರೆ. ಟಿಕೇಟ್ ಕೇಳಿದ ಕಂಡ್ಯಾಕ್ಟರ್ ಗೆ ಸಿಎಂ ಹೇಳಿದ್ದೇನು ಗೊತ್ತಾ..?
ಏನಿದು ಯಾವ ನ್ಯೂಸ್ ಚಾನೆಲ್ ನಲ್ಲೂ ಸಿಎಂ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡಿದ ಸುದ್ದಿಗಳು ಬಂದೇ ಇಲ್ಲ. ಸಿಎಂ ಯಾವುದೋ ಕಾರ್ಯದಲ್ಲಿ ಬುಸಿಯಾಗಿದ್ದಾರೆ ಅಂತ ನೀವು ಯೋಚನೆ ಮಾಡ್ತಾಯಿದ್ರೆ ಕೊಂಚ ನಿಲ್ಲ. ಯಾಕೆಂದ್ರೆ ಬಿಎಂಟಿಸಿ ಬಸ್ ಹತ್ತಿದ್ದು ಸ್ವಯಂ ಘೋಷಿತ ಮಹಿಳಾ ಸಿಎಂ.
ಹೌದು.. ಮೆಜೆಸ್ಟಿಕ್ ನಿಂದ ವಿಧಾನಸೌಧಕ್ಕೆ ಹೋಗುತ್ತಿದ್ದ ಬಸ್ ನಲ್ಲಿ ಮಹಿಳೆ ಕಿರಿಕ್ ಮಾಡಿದ್ದಾಳೆ. ಸ್ವಯಂ ಘೋಷಿತ ಮಹಿಳಾ ಸಿಎಂ ಇಂದು ಬಸ್ ಹತ್ತಿ ಹೈಡ್ರಾಮಾ ಮಾಡಿದ್ದಾರೆ. ಆಕೆಗೆ ಟಿಕೇಟ್ ಕೇಳಿದ ಕಂಡ್ಯಾಕ್ಟರ್ ಗೆ ” ನಾನ್ ಸಿಎಂ. ನನಗೆ ಫ್ರೀ ಟಿಕೆಟ್ ಇದೆ. ಫ್ರೀ ಟ್ರಾವೆಲಿಂಗ್ ಇದೆ. ನಾನೇ ಹೇಳ್ತಾಯಿದಿನಿ. ನನಗೆ ಫ್ರೀಯಾಗಿ ಕರೆದುಕೊಂಡು ಹೋಗಿ. ಕೆಳಗೆ ಯಾಕೆ ಇಳಿಬೇಕು ನಾನು? ನಾನು ರಾಜ್ಯದ ಸಿಎಂ. ನನಗ ಟಿಕೇಟ್ ಇಲ್ಲ” ಎಂಬ ಮಾತುಗಳನ್ನಾಡಿದ್ದು ಈ ವೀಡಿಯೋ ಸಖತ್ ವೈರಲ್ ಆಗಿದೆ.
ಮಹಿಳೆಯ ಕ್ವಾಟ್ಲೆಗೆ ಬಸ್ ಪ್ರಯಾಣಿಕರು ಮಜಾ ತಗೋಂಡ್ರೆ ಇನ್ನೂ ಕೆಲವರಿಗೆ ಕಿರಿಕಿರಿಯಾಗಿದೆ. ಮತ್ತೊಂದು ದಿನವೂ ಕೂಡ ಇದೇ ರೀತಿ ಈ ಮಹಿಳೆ ಹೇಳಿಕೊಂಡಿದ್ದಾರೆ. ಮಹಿಳೆ ಹೇಳಿಕೆಯ ಈ ವೀಡಿಯೋ ಸದ್ಯ ಸಾಮಾಜಿಕ ಜಾಳತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.