ಸರ್ಕಾರದ ಧೋರಣೆ ಖಂಡಿಸಿ ಮತ್ತೆ ರಸ್ತೆಗಿಳಿದ ಬಿಎಂಟಿಸಿ ಕೆಎಸ್ಆರ್ಟಿಸಿ ನೌಕರರು!

ಸಾರಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದ ಸರ್ಕಾರದ ಗಡುವು ಮುಗಿಯುತ್ತಿದ್ದಂತೆ ಬಿಎಂಟಿಸಿ ಮತ್ತು ಕೆಎಸ್ ಆರ್ಟಿಸಿ ನೌಕರರು ಬೀದಿಗಿಳಿದು ಪ್ರತಿಭಟನೆಗೆ ಇಂದು ಮುಂದಾಗಿದ್ದಾರೆ. ಈ ಹಿಂದೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಕೂಡಲೇ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

ಸರ್ಕಾರಕ್ಕೆ ಕೊಟ್ಟಂತ ಡೆಡ್ ಲೈನ್ ಮುಗಿಯುತ್ತಿದ್ದಂತೆ ಮತ್ತೆ ಬಿಎಂಟಿಸಿ ನೌಕಕರ ಪ್ರೊಟೆಸ್ಟ್ ಮಾಡುತ್ತಿದ್ದಾರೆ. ಸಾರಿಗೆ ನೌಕರರು ಇಂದು ಮತ್ತೆ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ರಾಜಧಾನಿಯಲ್ಲಿಂದು ಪ್ರತಿಭಟನೆ ಮೇಲೆ ಪ್ರತಿಭಟನೆ ನಡೆಯುತ್ತಿವೆ. ಈ ಹಿಂದೆ 3 ತಿಂಗಳಾದರೂ ಸರ್ಕಾರ ಬೇಡಿಕೆ ಈಡೇರಿಸಿದ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ.

ಸರ್ಕಾರದ ಧೋರಣೆ ಖಂಡಿಸಿ ರಸ್ತೆಗಿಳಿಸಿದ ನೌಕರರು ಬೇಡಿಕೆ ಈಡೇರಿಸಲೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದು ಬಿಎಂಟಿಸಿ ಕೆಎಸ್ ಆರ್ ಟಿಸಿ ಸ್ತಬ್ಧವಾಗುವ ಸಾಧ್ಯತೆ ಇದೆ.

ಸಾರಿಗೆ ನೌಕರರ  ಬೇಡಿಕೆಗಳೇನು?

2020ರ ಡಿಸೆಂಬರ್​ 14ರಿಂದ ಈವರೆಗೂ ಸಾರಿಗೆ ನೌಕರರ ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ.

  • ಆರನೇ ವೇತನ ಆಯೋಗ ಶಿಫಾರಸ್ಸು ಸಾರಿಗೆ ನೌಕರರಿಗೆ ವಿಸ್ತರಿಸುವ ವಿಚಾರ
  • ಸರ್ಕಾರಿ ನೌಕರರಿಗೆ ಇರುವಂತ ಜ್ಯೋತಿ ಸಂಜೀವಿನಿ ಭಾಗ್ಯ ಏನಾಯ್ತು
  • ಸಾರಿಗೆ ನೌಕರರಿಗೆ ಸರ್ಕಾರಿ ಶಿಕ್ಷಕರಂತೆ ಅಂತರ್ ನುಗಮ ವರ್ಗಾವಣೆ ಪದ್ಧತಿ ಜಾರಿಗೆ ತರುವ ಬೇಡಿಕೆ ಏನಾಯ್ತು
  • ಇಲಾಖೆಗಳಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ಅಲ್ಲಲ್ಲಿ ನಡೆಯುತ್ತಲೇ ಇದೆ
  • ಬಾಟ ,ಭತ್ಯೆ ಮತ್ತು ಓಟಿ ನೀಡುವಂತೆ ಕೇಳಿದ ಬೇಡಿಕೆ
  • ಎನ್ ಐ ಎನ್ ಸಿ ಪದ್ಧತಿ ರದ್ದು ಮಾಡುವಂತೆ ಬೇಡಿಕೆ ಏನಾಯ್ತು
  • ಎಚ್ ಆರ್ ಎಂ ಎಸ್ ಪದ್ಧತಿ ಜಾರಿ ಮಾಡುವುದೇ ಏನಾಯ್ತು
  • ಕೊರೋನಾ ಸೋಂಕಿತನಿಂದ ಮೃತ ಪಟ್ಟಿರುವ ನೌಕರರಿಗರ 30 ಲಕ್ಷ ಜೀವ ವಿಮೆ ನೀಡುವುದು ಎಲ್ಲಿ ಹೋಯ್ತು
  • ಸಾರಿಗೆ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಎರಡು ವರ್ಷ ತರಬೇತಿ ಅವಧಿಯನ್ನು ಒಂದು ವರ್ಷಕ್ಕೆ ಕಡಿತ ಮಾಡುವ ಬೇಡಿಕೆ ಎಲ್ಲಿ ಹೋಯ್ತು
  • ಬಜೆಟ್ ನಲ್ಲಿ ಸಾರಿಗೆಗೆ ಹೆಚ್ಷು ಒತ್ತು ನೀಡಿ ಎಂದು ಆಗ್ರಹ
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights