ಊರಿನ ರಸ್ತೆಗಳಲ್ಲಿ ಹರಿದ ರಕ್ತದ ಬಣ್ಣದ ನೀರು; ವಿಡಿಯೋ ನೋಡಿ ದಂಗಾದ ನೆಟ್ಟಿಗರು!

ಊರಿನ ರಸ್ತೆಗಳ ತುಂಬೆಲ್ಲ ಏಕಾಏಕಿ ರಕ್ತದ ರೀತಿಯ ನೀರು ಹರಿದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವಿಡಿಯೋ ನೋಡಿದ ಜನರು ಇದಕ್ಕೆ ಕಾರಣವೇನು ಎಂದು ದಂದಾಗಿದ್ದಾರೆ.

ಇಂಡೋನೇಷಿಯಾದ ಪೆಕಾಲೊಂಗನ್ ಎಂಬ​​ ಊರಿನಲ್ಲಿ ಈ ರೀತಿಯ ನೀರು ಹರಿದಿದ್ದು, ವಿಡಿಯೋ ನೋಡಿದ ನೆಟ್ಟಿಗರು ಈ ಊರಿನಲ್ಲೇನೋ ಅಚಾತುರ್ಯ ಆಗಿದೆ ಎಂದು ಭಾವಿಸಿದ್ದಾರೆ. ಆದರೆ, ಈ ನೀರು ಆ ಹಳ್ಳಿಯ ಪಕ್ಕದಲ್ಲಿದ್ದ ಬಟ್ಟೆ ಉತ್ಪಾದನಾ ಕಾರ್ಖಾನೆಯಿಂದ ಹರಿದು ಬಂದ ನೀರು ಎಂಬುದು ಗೊತ್ತಾಗಿದೆ.

ಈ ಊರು ಬಟ್ಟೆ ತಯಾರಿಕೆಗೆ ಹೆಸರುವಾಸಿಯಾಗಿದೆ. ಹೀಗಾಗಿ ಪ್ರವಾಹ ಪರಿಸ್ಥಿತಿ ಉಂಟಾದ ಏರಿಯಾಗಳಲ್ಲಿ ಬಟ್ಟೆ ತಯಾರಕ ಕಂಪನಿಗಳೇ ಜಾಸ್ತಿ ಇದ್ದ ಕಾರಣ ನೀರಿನ ಬಣ್ಣದಲ್ಲಿ ಈ ರೀತಿಯ ಬದಲಾವಣೆ ಕಂಡು ಬಂದಿದೆ. ಪೆಕಾಲೊಂಗನ್​ ಒಂದು ಹಳ್ಳಿಯಾಗಿದ್ದು ಈ ಊರಿನಲ್ಲಿ ಬಟ್ಟೆ ತಯಾರು ಮಾಡಲು ಸಾಮಾನ್ಯ ಬಣ್ಣಗಳನ್ನ ಬಳಕೆ ಮಾಡುವ ಬದಲು ಮೇಣಗಳನ್ನ ಬಳಸಲಾಗುತ್ತದೆ.

ಇದನ್ನೂ ಓದಿ: ಉತ್ತರ ಖಂಡದ ಹಿಮನದಿಯಲ್ಲಿ ಭಾರೀ ಹಿಮ ಪ್ರವಾಹ; 150 ಜನರು ಕಣ್ಮರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights