BJPಯ 6-7 ಶಾಸಕ/ಸಂಸದರು TMC ಸೇರಲಿದ್ದಾರೆ: ಸಚಿವ ಜ್ಯೋತಿಪ್ರಿಯ ಮುಲ್ಲಿಕ್

ಈ ಹಿಂದೆ TMC ತ್ಯಜಿಸಿ ಕೇಸರಿ ಶಿಬಿರಕ್ಕೆ ಸೇರಿದ್ದ ಕನಿಷ್ಠ ಆರು ಬಿಜೆಪಿ ಸಂಸದರು ರಾಜ್ಯದ ವಿಧಾನಸಭಾ ಚುನಾವಣೆಗೆ ಮುನ್ನವೇ ಆಡಳಿತ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಬಂಗಾಳ ಸಚಿವ ಜ್ಯೋತಿಪ್ರಿಯ ಮುಲ್ಲಿಕ್ ಬುಧವಾರ ಹೇಳಿದ್ದಾರೆ.

ಬಿಜೆಪಿಗೆ ಸೇರಿದ್ದ ಶಾಸಕ ಬಂಕುರಾ ತುಷಾರ್ ಭಟ್ಟಾಚಾರ್ಯ ಮಂಗಳವಾರ ಮತ್ತೆ ಟಿಎಂಸಿಗೆ ಸೇರಿದಿದ್ದಾರೆ. ತಮ್ಮ ರಾಜಕೀಯವನ್ನು ಬಿಜೆಪಿಗೆ ವರ್ಗಾಯಿಸಿಕೊಂಡಿರುವ ಶಾಸಕರು  ಬಿಜೆಪಿಯೊಂದಿಗೆ ಹೊಂದಿಕೊಳ್ಳಲು ಅವರಿಗೆ ಕಷ್ಟವಾಗುತ್ತಿದ್ದು, ಪಕ್ಷಕ್ಕೆ ಹಿಂದಿರುಗಿ ಬರಲು ಸರದಿಯಲ್ಲಿದ್ದಾರೆ. ಅವರೆಲ್ಲರೂ, ಬಿಜೆಪಿಯಿಂದ ಹೊರಬರಲಿದ್ದಾರೆ ನಿರೀಕ್ಷಿಸಿ ನೋಡಿ ಎಂದು ಮುಲ್ಲಿಕ್ ಹೇಳಿದರು.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, “ಚುನಾವಣೆಗೆ ಮುನ್ನ ಮೇ ತಿಂಗಳ ಮೊದಲ ವಾರದೊಳಗೆ ಆರು-ಏಳು ಸಂಸದರು ಟಿಎಂಸಿಗೆ ಸೇರುತ್ತಾರೆ. ನಮ್ಮನ್ನು ತೊರೆದ ಎಲ್ಲ ಶಾಸಕರು ಕೂಡ ಮತ್ತೆ ವಾಪಸ್‌ ಬರಲು ಸರದಿಯಲ್ಲಿದ್ದಾರೆ. ಬಂಕುರಾದ ಶಾಸಕ ತುಷಾರ್ ಬಾಬು ಅವರು ನಿನ್ನೆ ಪಕ್ಷಕ್ಕೆ ಮರಳಿದ್ದಾರೆ” ಎಂದು ಹೇಳಿದ್ದಾರೆ.

ಕಳೆದ ತಿಂಗಳು (ಡಿಸೆಂಬರ್ 19 ರಂದು) ಪೂರ್ವ ಮಿಡ್ನಾಪೋರ್ ರ್ಯಾಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ  ಆರು ಟಿಎಂಸಿ ಶಾಸಕರು ಮತ್ತು ಓರ್ವ ಸಂಸದರು ಬಿಜೆಪಿಗೆ ಸೇರಿದ್ದಾರೆ.

2016 ರ ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ಶಿಬಿರವು ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೂ, ಪಕ್ಷವು ಈಗ 25 ಶಾಸಕರ ಬಲವನ್ನು ಹೊಂದಿದ್ದು, ಟಿಎಂಸಿ, ಲೆಫ್ಟ್ ಫ್ರಂಟ್ ಮತ್ತು ಕಾಂಗ್ರೆಸ್‌ ಪಕ್ಷಗಳಿಗೆ ಕೈಕೊಟ್ಟು ಬಂದವರನ್ನು ಬಿಜೆಪಿ ಸೇರಿಸಿಕೊಂಡಿದೆ.

“ಟಿಎಂಸಿ ಹಗಲುಗನಸು ಮಾಡುತ್ತಿದೆ. ನಿಜವಾದ ಚಿತ್ರ ಇದಕ್ಕೆ ತದ್ವಿರುದ್ಧವಾಗಿದೆ. ಶೀಘ್ರದಲ್ಲೇ ಆಡಳಿತ ಪಕ್ಷದಿಂದ ಭಾರಿ ಪ್ರಮಾಣದ ನಾಯಕರು ಹೊರಬರಲಿದ್ದಾರೆ. ಹಲವಾರು ಶಾಸಕರು ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದಾರೆ. ಅವರೆಲ್ಲರೂ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ” ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

ಇದನ್ನೂ ಓದಿ: ಮೋದಿಯ ವಿಶ್ವಾಸಿ, ಐಎಎಸ್ ಅಧಿಕಾರಿ ಸ್ವಯಂ ನಿವೃತ್ತಿ ಪಡೆದು BJPಗೆ ಸೇರ್ಪಡೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights