BJPಯಲ್ಲಿ ಭಿನ್ನಮತ : ಮಂತ್ರಿಗಿರಿ, ಟಿಕೆಟ್‌ಗಾಗಿ ಬೆಳಗಾವಿ ಬ್ಲಾಕ್‌ಮೇಲ್ ರಾಜಕಾರಣ, BSY ಪ್ರತಿತಂತ್ರ

ಬಿಜೆಪಿಯಲ್ಲಿ ಭಿನ್ನಮತದ ಹೆಸರಲ್ಲಿ ಬ್ಲಾಕ್‌ಮೇಲ್ ರಾಜಕಾರಣ ಜೋರಾಗಿ ಶುರುವಾಗಿದೆ ಎಂದುಮುಖ್ಯಮಂತ್ರಿ ಯಡಿಯೂರಪ್ಪ ಬಣ ಆರೋಪಿಸುತ್ತಿದೆ.. ,  ಈ ಎಲ್ಲ ಬೆಳಬಣಿಗೆಗಳಿಗೆ ಬಿಎಸ್ವೈ ಡೋಂಟ್ ಕೇರ್ ಎಂದಿದ್ದಾರೆ ಅನ್ನುವುದು ಅವರ ಅಭಿಪ್ರಾಯ…ಮಂತ್ರಿಗಿರಿ,  ಪರಿಷತ್ ಟಿಕೆಟ್‌ಗಾಗಿ ಒತ್ತಡ ಹೇರಲು ಬಿಜೆಪಿ ನಾಯಕರ ಭಿನ್ನಮತದ ಸೋಗು ಹಾಕುತ್ತಿದ್ದಾರೆ ಎನ್ನುತ್ತದೆ ಯಡ್ಡಿ ಬಣ..

ರಾಜ್ಯ ಬಿಜೆಪಿಯಲ್ಲಿ ಕಾಣಿಸಿಕೊಂಡಿದೆ ಎನ್ನಲಾಗಿರುವ ಭಿನ್ನಮತ ಕೇವಲ ಸ್ವಹಿತದ ಬ್ಲಾಕ್‌ಮೇಲ್ ತಂತ್ರವಷ್ಟೇ ಎಂದು ರಾಜಕೀಯ ವಲಯದಲ್ಲಿ ವಿಶ್ಲೀಷಿಸಲಾಗುತ್ತಿದೆ. ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಗೆ ಒತ್ತಡ ತರಲು ಕೆಲ ಶಾಸಕರು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ

ಆದರೆ ಇದು ಕೇವಲ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಬ್ಲಾಕ್‌ಮೇಲ್ ಅಲ್ಲದೇ ಮತ್ತಿನ್ನೇನೂ ಅಲ್ಲ ಎಂಬ ಮಾತು ಪಕ್ಷದ ವಲಯಗಳಲ್ಲಿಯೇ ಕೇಳಿಬರುತ್ತಿದೆ. ಸೋದರನಿಗೆ ರಾಜ್ಯಸಭಾ ಟಿಕೆಟ್‌ಗಾಗಿ ಅಥವಾ ತಮಗೆ ಸಚಿವಗಿರಿಗಾಗಿ ಉಮೇಶ್ ಕತ್ತಿ ಹಂಬಲಿಸುತ್ತಿದ್ದರೇ ಸಚಿವ ಸ್ಥಾನದ ಮೇಲೆ ಬಸನಗೌಡ ಯತ್ನಾಳ್ ಸಹ ಕಣ್ಣಿಟ್ಟಿದ್ದಾರೆ. ಇದಾವುದೂ ಹೊಸ ವಿಚಾರವಲ್ಲ ಎನ್ನುತ್ತಾರೆ ಹಿರಿಯ ನಾಯಕರು.

ಇದೇ ರೀತಿ ಇನ್ನೂ ಕೆಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು ಅದಕ್ಕೆ ಒತ್ತಡ ಹೇರುವ ತಂತ್ರವಾಗಿ ಗುಸುಗುಸು, ಗುಪ್ತ ಸಭೆಗಳನ್ನು ನಡೆಸುತ್ತಿದ್ದಾರೆ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮೇಲೆ ಒತ್ತಡ ಹಾಕಲು ಈ ತಂತ್ರಕ್ಕೆ ಮೊರೆ ಹೋಗಲಾಗಿದೆ. ಆದರೆ ಅದು ಎಷ್ಟರಮಟ್ಟಿಗೆ ನಡೆಯಲಿದೆ ಎಂಬ ಲೆಕ್ಕಾವಾರ ಇಗ  ಬಿಜೆಪಿಯಲ್ಲಿ ಶುರುವಾಗಿದೆ..

ಆದರೆ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಯಡಿಯೂರಪ್ಪ ಪರ ಭದ್ರವಾಗಿ ನಿಂತಿದ್ದು ಈ ಯಾವುದೇ ಬೇಡಿಕೆಗೆ ಸೊಪ್ಪು ಹಾಕುವುದಿಲ್ಲ ಎಂದು ಹೇಳಲಾಗಿದೆ. ಚುನಾವಣೆಗಳಿಗೆ ಸಂಬಂಧಿಸಿದಂತೆ ಹೈಕಮಾಂಡಿಗೆ ಕಳುಹಿಸಲು ಅಭ್ಯರ್ಥಿಗಳ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಸೇರಲಿದೆ ಎಂಬ ವರದಿಗಳ ಬೆನ್ನಲ್ಲಿಯೇ ಒತ್ತಡ ಹೇರುವ ಕಾರ್‍ಯ ಚುರುಕಾಗಿದೆ.

ಆದರೆ ಈ ಬಾರಿ ಭಿನ್ನಮತದ ಹೆಸರಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿರುವ ಶಾಸಕರು ಪ್ರಭಲರು, ಎಲ್ಲ ರೀತಿಯ ಭಲ ಉಳ್ಳವರು ಜೊತೆಗೆ ಉತ್ತರ ಕರ್ನಾಟಕ ಬಾಗಕ್ಕೆ ಸೆರಿದವರು ಇದಕ್ಕೆ ಬೆನ್ನೆಲಬಾಗಿ ಬಿಜೆಪಿಯ ಪ್ರಮುಖ ಬೆಂಬಲಿದರಾಗಿರುವ ಲಿಂಗಾಯತ ಕೋಮಿಗೆ ಸೆರಿದವರು, ಇವರಿಗೆ ಬಿಜೆಪಿ ಹೈಕಮಾಂಡ್ ನಲ್ಲಿರುವ ರಾಜ್ಯದ ಪ್ರಭಾವಿ ನಾಯಕರ ಸಪೋರ್ಟ್ ಇದೆ ಅನ್ನುವುದನ್ನು ಮರೆಯುವಹಾಗಿಲ್ಲ…

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights