ಮಮತಾ ಮೇಲೆ ಹಲ್ಲೆ ಪ್ರಕರಣ : ನಂದಿಗ್ರಾಮ್ನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ!

ಚುನಾಚಣಾ ಪ್ರಚಾರಕ್ಕೆ ನಂದಿಗ್ರಾಮಕ್ಕೆ ತೆರಳಿದ್ದ ವೇಳೆ ಸಿಎಂ ಮಮತಾ ಬ್ಯಾನರ್ಜಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿಕೊಂಡಿದ್ದು ಸುಳ್ಳು ಎಂದು ಬಿಜೆಪಿ ಕಾರ್ಯಕರ್ತರು ಟೈರ್ ಸುಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಮಾಧ್ಯಮದ ಮುಂದೆ ಮಮತಾ ಮಾತನಾಡಿ ತಮ್ಮ ಮೇಲೆ ನಾಲ್ಕೈದು ಜನರಿಂದ ಹಲ್ಲೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಬೇಸರಗೊಂಡ ನಂದಿಗ್ರಾಮದ ಜನ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದಾರೆ. ಮಮತಾ ದಾಳಿಯ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಇದು ನಂದಿಗ್ರಾಮದ ಜನತೆ ಮೇಲೆ ಮಾಡುತ್ತಿರುವ ಆರೋಪ ಎಂದು ದೂರಿದ್ದಾರೆ. ಮಮತಾ ವಿರುದ್ಧ ಪ್ರತಿಭಟಿಸುವಾಗ ಕೆಲವು ಟೈರ್ಗಳಿಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನಾ ನಿರತ ಬಿಜೆಪಿ ಬೆಂಬಲಿಗರು ಮಮತಾ ಬ್ಯಾನರ್ಜಿಯ ಮೇಲೆ ಯಾರೂ ಹಲ್ಲೆ ನಡೆಸಿಲ್ಲ ಮತ್ತು ಅವರು ಈ ಘಟನೆಯ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ.

ಬುಧವಾರ ಸಂಜೆ ನಂದಿಗ್ರಾಮ್ನಿಂದ 2021 ರ ಬಂಗಾಳ ವಿಧಾನಸಭಾ ಚುನಾವಣೆಗೆ ತಮ್ಮ ಮಾಜಿ ವಿಶ್ವಾಸಾರ್ಹ ಸುವೆಂಡು ಅಧಿಕಾರಿ ವಿರುದ್ಧ ಹೋರಾಡಲು ನಾಮಪತ್ರ ಸಲ್ಲಿಸಿದ ಮಮತಾ ಬ್ಯಾನರ್ಜಿ ಈ ಪ್ರದೇಶದಲ್ಲಿ ಪ್ರಚಾರ ಮತ್ತು ಟೆಂಪ್ ರನ್ ಶುರು ಮಾಡಿದ್ದರು.

ಮಮತಾ ನಿನ್ನೆ ಸಂಜೆ 6 ರ ಸುಮಾರಿಗೆ ಜನಸಂದಣಿಯಲ್ಲಿ 4-5 ಪುರುಷರಿಂದ ತಾವು ಹಲ್ಲೆಗೆ ಒಳಗಾದರು ಎಂದು ಆರೋಪಿಸಿದ್ದಾರೆ. ಹೀಗಾಗಿ ಆಕೆಯ ಕಾಲು ಮತ್ತು ಭುಜದ ಮೇಲೆ ಗಾಯಗಳಾಗಿವೆ. ಕೆಲವು ಪುರುಷರು ತನ್ನನ್ನು ತಳ್ಳಿದ್ದಾರೆ ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆದರೆ, ಬಿಜೆಪಿ ಮತ್ತು ಪ್ರತ್ಯಕ್ಷದರ್ಶಿಗಳು ಈ ಹೇಳಿಕೆಯನ್ನು ಸುಳ್ಳು ಎಂದಿದ್ದಾರೆ. ಅವರ ಕಾರಿನ ಬಾಗಿಲು ತಾಗಿ ಕಾಲಿಗೆ ಹಣೆಗೆ ಗಾಯವಾಗಿದೆ. ಈ ಘಟನೆಯಲ್ಲಿ ಯಾರೂ ಭಾಗಿಯಾಗಿಲ್ಲ ಎಂದು ಹೇಳಿದ್ದಾರೆ. ಟಿಎಂಸಿ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ ಮತ್ತು ಹೀಗಾಗಿ ನಂದಿಗ್ರಾಮ್ನಲ್ಲಿ ಮಮತಾ ಅವರನ್ನು ಆಕ್ರಮಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights