ಬೆಳಗಾವಿಯಲ್ಲಿ ಕಾಂಗ್ರೆಸ್‌-ಬಿಜೆಪಿ ನೆಕ್‌ ಟು ನೆಕ್‌ ಫೈಟ್‌: ಗೆಲ್ಲುತ್ತಾ BJP?

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಸಿಎಂ ಯಡಿಯೂರಪ್ಪ ಅವರು ಬೆಳಗಾವಿಯಲ್ಲಿ ಕೇಸರಿ ಬಾವುಟವನ್ನು ಮತ್ತೆ ಹಾರಿಸುತ್ತೇವೆ ಎಂದು ಪಣತೊಟ್ಟಿದ್ದಾರೆ. ಬೆಳಗಾವಿಯಲ್ಲಿ  ಮಾಜಿ ರೈಲ್ವೇ ರಾಜ್ಯ ಸಚಿವ ದಿವಂಗತ ಸುಯರೇಶ್‌ ಅಂಗಡಿಯವರ ಪತ್ನಿ ಮಂಗಳಾ ಅಂಗಡಿ ಅವರನ್ನು ಗೆಲ್ಲಿಸಿಕೊಳ್ಳಲು ಸಿಎಂ ಮೂರು ದಿನಗಳ ಕಾಲ ರೋಡ್‌ ಶೋ ಹಾಗೂ ಹಲವಾರು ರ್ಯಾಲಿಗಳನ್ನು ನಡೆಸುತ್ತಿದ್ದಾರೆ.

ಸತೀಶ್‌ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್‌ ಪಕ್ಷವು ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿದೆ. ಬಿಜೆಪಿ ಕೊಂಚವೇ ಯಾಮಾರಿದರೂ ಕಾಂಗ್ರೆಸ್‌ಗೆ ವಿಜಯದ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ತಾವು 04 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೆವೆ ಎಂದು ಬಿಜೆಪಿ ನಾಯಕರು ಆಶಾವಾದಿಗಳಾಗಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಬಿಜೆಪಿ ನಾಯಕರು ಬ್ಯಾಕ್‌ ಟು ಬ್ಯಾಕ್‌ ರ್ಯಾಲಿಗಳನ್ನು ನಡೆಸಿದ್ದಾರೆ. ಜಾರಕಿಹೊಳಿ ಕುಟುಂಬದ ಭದ್ರಕೋಟೆಯಾಗಿರುವ ಅರಭವಿ ಮತ್ತು ಗೋಕಾಕ್‌ಗಳನ್ನು ಭೇದಿಸಲು ಸಿಎಂ ಯಡಿಯೂರಪ್ಪ ಮುಂದಾಗಿದ್ದು, ಎರಡೂ ಪಟ್ಟಣಗಳಲ್ಲಿಯೂ ಬುಧವಾರ ಸಿಎಂ ಯಡಿಯೂರಪ್ಪ ರೋಡ್‌ ನಡೆಸಿದ್ದಾರೆ.

ಬಿಜೆಪಿಯ ಹೈಕಮಾಂಡ್‌ ಸತೀಶ್‌ ವಿರುದ್ದ ಪ್ರಚಾರಕ್ಕೆ ಅವರ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಇಳಿಸಿದೆ. ಆದರೆ, ಸಿಡಿ ಪ್ರಕರಣ ಎದುರಿಸುತ್ತಿರುವ ಮಾಜಿ ಸಚಿವ- ಶಾಸಕ ರಮೇಶ್‌ ಜಾರಕಿಹೊಳಿ ಪ್ರಚಾರದಲ್ಲಿ ಭಾಗಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದ ಕೋಟೆಯಾಗಿರುವ ಲಿಂಗಾಯತ ಬಹುಮತವಿರುವ ಪ್ರದೇಶಗಳಾದ ಬೈಲ್ಹೋಂಗಲ್, ರಾಮ‌ದುರ್ಗ ಮತ್ತು ಸೌದತ್ತಿಯಲ್ಲಿ ಲಿಂಗಾಯತ ಮತಗಳು ಸತೀಶ್‌ ಜಾರಕಿಹೊಳಿಗೆ ಪಾಲಿಗೆ ಹೋಗುವ ನಿರೀಕ್ಷೆಯಿದೆ. ಈ ಪ್ರದೇಶಗಳಲ್ಲಿ ಬಿಜೆಪಿ ಕಳದ ಲೋಕಸಭಾ ಚುನಾವಣೆಯಲ್ಲಿ ನಡೆಸಿದ ರ್ಯಾಲಿ-ರೋಡ್‌ ಶೋಗಳಂತೆಯೇ ಈ ಬಾರಿಯೂ ರ್ಯಾಲಿಗಳನ್ನು ಮಾಡಿ ಮತದಾರರನ್ನು ಒಟ್ಟುಗೂಡಿಸುತ್ತೇವೆ ಎಂಬ ವಿಶ್ವಾಸದಲ್ಲಿದೆ.

ಪ್ರಧಾನವಾಗಿ ಲಿಂಗಾಯತ ಜನಸಂಖ್ಯೆಯನ್ನು ಹೊಂದಿರುವ ಗೋಕಾಕ್, ಅರಭವಿ, ಬೈಲ‌ಹೋಂಗಲ, ರಾಮದುರ್ಗ ಮತ್ತು ಸೌದತ್ತಿ ಸೇರಿದಂತೆ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಮುಖ ಮತಗಳನ್ನು ಗಳಿಸುವುದಾಗಿ ಸತೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೇಸರಿ ಪಕ್ಷವು ಬಾಲಚಂದ್ರ ಮತ್ತು ರಮೇಶ್ ಅವರ ಕ್ಷೇತ್ರಗಳಲ್ಲಿ ಹೆಚ್ಚಿನ ಮತಗಳನ್ನು ಪಡೆಯುತ್ತೇವೆ ಎಂದು ಬಿಜೆಪಿ ವಿಶ್ವಾಸ ಹೊಂದಿದೆ.  “ಅರಭವಿ ಮತ್ತು ಗೋಕಾಕ್ ಜನರು ಯಾವಾಗಲೂ ಎಲ್ಲಾ ಚುನಾವಣೆಗಳಲ್ಲಿ ಜಾರಕಿಹೊಳಿಗಳನ್ನು ಬೆಂಬಲಿಸಿದ್ದಾರೆ ಹೊರತು ರಾಜಕೀಯ ಪಕ್ಷಗಳನ್ನಲ್ಲ. ಆದ್ದರಿಂದ, ಇಲ್ಲಿಯ ಜನರು ಈ ಬಾರಿ ನನಗೆ ಮತ ಚಲಾಯಿಸಲಿದ್ದಾರೆ” ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ಆದರೆ, ಈ ಉಪಚುನಾವಣೆಯು ವ್ಯಕ್ತಿಯ ವಿರುದ್ದವಿಲ್ಲ. ಬದಲಾಗಿ ಕಾಂಗ್ರೆಸ್ ವಿರುದ್ಧವಿದೆ ಎಂದು ಬಾಲಚದ್ರಾ ಹೇಳಿದ್ದಾರೆ. “ಕಳೆದ ಕೋಕಸಭಾ ಮತದಾನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರಭಾವಿಯ ಜನರು ಬಿಜೆಪಿಯನ್ನು ಬೆಂಬಲಿಸುತ್ತಾರೆ. ಮಂಗಳ ಅಂಗಡಿ ಇಲ್ಲಿ 65,000 ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತಾರೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿ ಅಭಿಯಾನಕ್ಕೆ ಬಾಲಚಂದ್ರ ಜಾರಕಿಹೊಳಿ ಪ್ರವೇಶಿಸಿರುವುದು ಪಕ್ಷಕ್ಕೆ ಅಪಾರವಾದ ಶಕ್ತಿಯನ್ನು ನೀಡಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಎಂಇಎಸ್ ಅಭ್ಯರ್ಥಿ ಶುಭಮ್ ಶೆಲ್ಕೆ ಅವರ ಜನಪ್ರಿಯತೆಯು ಬಿಜೆಪಿ ಹೈಕಮಾಂಡ್‌ಅನ್ನು  ಸಂದಿಗ್ಧತೆಗೆ ಸಿಲುಕಿಸಿದೆ. ಏಕೆಂದರೆ ಶೆಲ್ಕೆ ಮರಾಠಿ ಮತಗಳಲ್ಲಿ ಹೆಚ್ಚಿನ ಪಾಲನ್ನು ಪಡೆಯುವ ಸಾಧ್ಯತೆಯಿದೆ. ಶಿವಸೇನೆ ಸಹ ಶೆಲ್ಕೆ ಅವರಿಗೆ ಬೆಂಬಲವನ್ನು ನೀಡಿದೆ. ಇದಕ್ಕಾಗಿ ಶಿವಸೇನಾ ನಾಯಕ ಸಂಜಯ್ ರಾವತ್‌ ಬೆಳಗಾವಿಗೆ ಬಂದು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಬೆಳಗಾವಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಕನಿಷ್ಟ 5 ಲಕ್ಷ ಮತಗಳನ್ನು ಪಡೆದುಕೊಂಡರೂ, ಗೆಲುವು ಯಾರಿಗೆ ಎಂಬುದರ ಸೂಚನೆ ಸಧ್ಯಕ್ಕೆ ಅಸ್ಪಷ್ಟವಾಗಿದೆ.

ಇದನ್ನೂ ಓದಿ: ಉಪ ಸಮರ: ಬಿಜೆಪಿ ಸೋಲುವ ಸಾಧ್ಯತೆ; ಇವೆ ಸಾಕಷ್ಟು ಕಾರಣಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights