ದೆಹಲಿ ರ್ಯಾಲಿಯಲ್ಲಿ ಮುಸ್ಲಿಂ ವಿರೋಧಿ ಘೋಷಣೆ ಪ್ರಕರಣ : ಬಿಜೆಪಿ ನಾಯಕ ಸೇರಿ ಐವರ ಬಂಧನ!

ದೆಹಲಿ ರ್ಯಾಲಿಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳಿಗಾಗಿ ಬಿಜೆಪಿ ನಾಯಕ ಸೇರಿ ಐವರನ್ನು ಬಂಧಿಸಲಾಗಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಐವರನ್ನು ಬಂಧಿಸಲಾಗಿದೆ. ಪ್ರತಿಭಟನೆಯನ್ನು ಆಯೋಜಿಸಿದ ಅಶ್ವಿನಿ ಉಪಾಧ್ಯಾಯರನ್ನು ನಿನ್ನೆ ತಡರಾತ್ರಿಯವರೆಗೆ ಇತರ ಆರೋಪಿಗಳೊಂದಿಗೆ ವಿಚಾರಣೆಗೆ ಒಳಪಡಿಸಲಾಗಿದೆ.

ಸಂಸತ್ತು ಮತ್ತು ಉನ್ನತ ಸರ್ಕಾರಿ ಕಚೇರಿಗಳಿಂದ ಕೇವಲ ಒಂದು ಕಿ.ಮೀ. ದೂರದಲ್ಲಿ ಪ್ರತಿಭಟನಾ ಗುಂಪು ಭಾನುವಾರ ರ್ಯಾಲಿಯಲ್ಲಿ “ಹಿಂದೂಸ್ತಾನ್ ಮೇ ರೆಹನಾ ಹೋಗ ಜೈ ಜೈ ರಾಮ್ ಕೆಹನಾ ಹೋಗಾ (ಭಾರತದಲ್ಲಿ ಉಳಿಯಲು, ಜೈ ಶ್ರೀ ರಾಮ್ ಎಂದು ಹೇಳಬೇಕು),” ಎಂಬ ಘೋಷಣೆಯ ಕೂಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ದೆಹಲಿಯ ಹೃದಯ ಭಾಗದಲ್ಲಿರುವ ಜಂತರ್ ಮಂತರ್‌ನಲ್ಲಿ ಮುಸ್ಲಿಮರಿಗೆ ಬೆದರಿಕೆ ಹಾಕುವ ಪ್ರತಿಭಟನಾ ನಿರತ ಗುಂಪಿನ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ನಿನ್ನೆ ಎಫ್ ಐಆರ್ ದಾಖಲಿಸಿದ್ದರು. ಮಾತ್ರವಲ್ಲದೇ ಕೋವಿಡ್ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಪ್ರತಿಭಟನೆಗೆ ಅನುಮತಿ ನಿರಾಕರಿಸಿದರೂ ಈ ಪ್ರತಿಭಟನೆ ನಡೆದಿತ್ತು.

ಪೊಲೀಸರು ಸೋಮವಾರ ತಡರಾತ್ರಿ ಘೋಷಣೆಗಳನ್ನು ಕೂಗಿದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಐವರನ್ನು ಬಂಧಿಸಿದ್ದಾರೆ.

ಸೇವ್ ಇಂಡಿಯಾ ಫೌಂಡೇಶನ್ ಆಯೋಜಿಸಿದ್ದ ಹಳೆಯ ವಸಾಹತುಶಾಹಿ ಕಾನೂನುಗಳ ವಿರುದ್ಧ ರ್ಯಾಲಿಯಲ್ಲಿ ಈ ಘೋಷಣೆಗಳು ಕೂಗಿರುವುದು ಗೊತ್ತಾಗಿದೆ. ಆಯೋಜಕ ಉಪಾಧ್ಯಾಯ ಎಂದು ಅವರನ್ನು ಬಂಧಿಸಲಾಗಿದೆ.

ಆದರೆ ಉಪಾಧ್ಯಾಯ ಅವರು, “ಸೇವ್ ಇಂಡಿಯಾ ಫೌಂಡೇಶನ್ ಟ್ರಸ್ಟ್‌ನೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನಾನು ಆರ್‌ವಿಎಸ್ ಮಣಿ, ಫಿರೋಜ್ ಬಕ್ತ್ ಅಹ್ಮದ್, ಶ್ರೀ ಗಜೇಂದ್ರ ಚೌಹಾಣ್ ಅವರೊಂದಿಗೆ ಅತಿಥಿಯಾಗಿದ್ದೆ. ನಾವು ಸುಮಾರು 11:00 ಗಂಟೆಗೆ ರ್ಯಾಲಿಯಲ್ಲಿ ಭಾಗವಹಿಸಿ 12:00 ಕ್ಕೆ ಹೊರಟೆವು. ಈ ದುಷ್ಕರ್ಮಿಗಳನ್ನು ನಾವು ಭೇಟಿ ಮಾಡಿಲ್ಲ “ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸೇವ್ ಇಂಡಿಯಾದ ನಿರ್ದೇಶಕ ಪ್ರೀತ್ ಸಿಂಗ್ ಬಂಧಿತರಲ್ಲಿ ಸೇರಿದ್ದಾರೆ. ಉಳಿದವರು ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನೀತ್ ಕ್ರಾಂತಿ ಮತ್ತು ಶಂಕಿತ ದೀಪಕ್ ಎಂಬ ಹೆಸರಿನಿಂದ ಮಾತ್ರ ಗುರುತಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights