ಜನಾಶೀರ್ವಾದ ಯಾತ್ರೆಯಲ್ಲಿ ಕುದುರೆಯ ಮೇಲೆ ಬಿಜೆಪಿ ಧ್ವಜದ ಚಿತ್ರಣ : ಮೇನಕಾ ಗಾಂಧಿ ಎನ್‌ಜಿಒದಿಂದ ದೂರು!

ಜನ ಆಶೀರ್ವಾದ ಯಾತ್ರೆಯಲ್ಲಿ ಕುದುರೆಯ ಮೇಲೆ ಬಿಜೆಪಿ ಧ್ವಜವನ್ನು ಚಿತ್ರಿಸಲಾಗಿದ್ದರಿಂದ ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಎನ್‌ಜಿಒ ದೂರು ದಾಖಲಿಸಿದೆ.

ಇಂದೋರ್ ನಗರದಲ್ಲಿ ಗುರುವಾರ ನಡೆದ ಆಡಳಿತ ಪಕ್ಷದ ಜನ ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ಧ್ವಜದ ಬಣ್ಣವನ್ನು ಚಿತ್ರಿಸಲಾದ ಕುದುರೆ ಕಂಡುಬಂದ ಹಿನ್ನೆಲೆಯಲ್ಲಿ ಮೇನಕಾ ಗಾಂಧಿ ಅವರ ಎನ್ ಜಿಒ ಇಂದೋರ್ ಪೊಲೀಸರಿಗೆ ದೂರು ನೀಡಿದೆ.

ಜನ ಆಶೀರ್ವಾದ ಯಾತ್ರೆಯಲ್ಲಿ 22 ರಾಜ್ಯಗಳನ್ನು ಸುತ್ತುವ ಮೂಲಕ ಕೇಂದ್ರದಲ್ಲಿ ಹೊಸ ಮಂತ್ರಿಗಳನ್ನು ಜನರಿಗೆ ಪರಿಚಯಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.

ಇದರ ಬೆನ್ನಲ್ಲೆ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ನೇತೃತ್ವದಲ್ಲಿ ಈ ಯಾತ್ರೆ ಇಂದೋರ್‌ನ ವಿವಿಧ ಭಾಗಗಳನ್ನು ನಡೆದಿದೆ. ಈ ಯಾತ್ರೆಯಲ್ಲಿ ಮಾಜಿ ಪುರಸಭೆಯ ಕಾರ್ಪೋರೇಟರ್ ರಾಮದಾಸ್ ಗರ್ಗ್ ಅವರು ಬಿಜೆಪಿ ಧ್ವಜದ ಬಣ್ಣದನ್ನು ಚಿತ್ರಿಸಲಾದ ಕುದುರೆಯನ್ನು ಯಾತ್ರೆಗೆಂದು ಬಾಡಿಗೆಗೆ ತಂದಿದ್ದರು.

ಬಿಜೆಪಿ ಧ್ವಜದ ಬಣ್ಣಗಳಾದ ಕಿತ್ತಳೆ, ಹಸಿರು ಮತ್ತು ಕುದುರೆಯ ಮೇಲೆ ಪಕ್ಷದ ಚಿಹ್ನೆಯಾದ ಕಮಲವನ್ನು ಕೂಡ ಚಿತ್ರಿಕರಿಸಲಾಗಿತ್ತು. ಪಕ್ಷದ ಹೆಸರನ್ನು ಲಂಬವಾಗಿ ಅದರ ದೇಹದ ಮೇಲೆ ಬರೆಯಲಾಗಿತ್ತು.

Manuka Gandhi's NGO Files Complaint After BJP Flag Painted On Horse At Jan Ashirwad Yatra

ಇದನ್ನು ವಿರೋಧಿಸಿ ಪೀಪಲ್ ಫಾರ್ ಅನಿಮಲ್ಸ್ (PFA) ಎಂಬ NGO ದ ಸ್ಥಳೀಯ ಪ್ರತಿನಿಧಿಗಳು ಇಂದೋರ್ ನ ಸಂಯೋಗಿತಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ, 1960 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಅವರು ಈ ವಿಷಯವನ್ನು ಚುನಾವಣಾ ಆಯೋಗಕ್ಕೆ ವರದಿ ಮಾಡುವ ಸಾಧ್ಯತೆಯಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights