BJP ಮತ್ತು JDS ವಿಲೀನವಲ್ಲದ ಹೊಂದಾಣಿಕೆ BJPಗೆ ಹೆಚ್ಚು ಲಾಭ: ಡೀಟೇಲ್ಸ್‌

BJP ಮತ್ತು JDS ನಡುವೆ ಹೊಸ ರೀತಿಯ ಹೊಂದಾಣಿಕೆ ಕಂಡುಬರುತ್ತಿದೆ. ಎರಡೂ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ 2023ರ ವಿಧಾನಸಭಾ ಚುನಾವಣೆಗೆ ಮುಂಚೆ ವಿಲೀನವಾಗುತ್ತವೆ ಎಂಬ ಅಭಿಪ್ರಾಯಕ್ಕೂ ಇದು ದಾರಿ ಮಾಡಿಕೊಟ್ಟಿದೆ.

ಆದರೆ, ಎರಡೂ ಪಕ್ಷಗಳ ಹಿರಿಯ  ಮುಖಂಡರು ವಿಲೀನದ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

“ಪರಿಸ್ಥಿತಿಗಳ ಆಧಾರದ ಮೇಲೆ ಬಿಜೆಪಿಯನ್ನು ಬೆಂಬಲಿಸುವುದು ಅರ್ಥಪೂರ್ಣವಾಗಿದೆ. ಆದರೆ ಅವರೊಂದಿಗೆ ವಿಲೀನಗೊಳ್ಳುವ ಪ್ರಶ್ನೆಯು ಈ ಹಂತದಲ್ಲಿ ಬಹಳ ಅಸಂಭವವಾಗಿದೆ. ಮತದಾನ ವಿಭಜನೆಯನ್ನು ಕಡಿಮೆ ಮಾಡಲು ಮುಂದಿನ ವಿಧಾನಸಭಾ ಚುನಾವಣೆಗೆ ಹೊಂದಾಣಿಕೆ (ಮೈತ್ರಿ) ಮಾಡಿಕೊಳ್ಳಬಹುದು. ಆದರೆ, ವಿಲೀನವಾಗುವುದಿಲ್ಲ’’ ಎಂದು ಜೆಡಿಎಸ್‌ನ ಹಿರಿಯ ಮುಖಂಡರು ಹೇಳಿದ್ದಾರೆ.

ಜೆಡಿಎಸ್‌ನ ಶಾಸಕರು ಮತ್ತು ಇತರ ನಾಯಕರು ಕೇಸರಿ ಪಕ್ಷದಲ್ಲಿ ಯಾವುದೇ ರೀತಿಯ ಮಹತ್ವದ ಸ್ಥಾನಗಳನ್ನು ಪಡೆಯುವುದು ಅಷ್ಟು ಸುಲಭವಿಲ್ಲ.

ಒಂದು ವೇಳೆ, ಎರಡೂ ಪಕ್ಷಗಳು ವಿಲೀನವಾಗಬೇಕಾದರೆ, ಜೆಡಿಎಸ್‌ನ ನಾಯಕ ಹೆಚ್‌ಡಿ ಕುಮಾರಸ್ವಾಮಿ ಅವರು ಸಿಎಂ ಸ್ಥಾನಕ್ಕಿಂತ ಕೆಳಗಿನ ಯಾವುದೇ ಸ್ಥಾನವನ್ನೂ ಸ್ವೀಕರಿಸುವುದಿಲ್ಲ. ಅವರಷ್ಟೇ ಅಲ್ಲ, ಎರಡೂ ಪಕ್ಷಗಳು ನಾಯಕರು ರಾಜ್ಯದಲ್ಲಿ ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದ ಸ್ಥಾನಗಳು ಮತ್ತು ನಾಯಕತ್ವಗಳಲ್ಲಿ ಒಬ್ಬರಿಗೊಬ್ಬರು ದಾರಿ ಮಾಡಿಕೊಡಬೇಕಾಗುತ್ತದೆ.

ಅದು ಅಷ್ಟು ಸುಲಭವಿಲ್ಲ. “ವಿಲೀನದ ನಂತರ ಪಕ್ಷದ ಸ್ಥಾನಗಳು ಮತ್ತು ಸ್ಥಾನ ಹಂಚಿಕೆಗಳ ಬಗ್ಗೆ ಮೇಲಿನಿಂದ ಕೆಳಹಂತದವರೆಗೂ ಕಾದಾಟಗಳು ನಡೆಯುತ್ತವೆ” ಎಂದು ಜೆಡಿಎಸ್‌ ಮುಖಂಡರು ಹೇಳಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು JDS-BJP ಒಳ ಒಪ್ಪಂದ ಮಾಡಿಕೊಂಡಿದ್ದವು: ಜೆಡಿಎಸ್‌ ಶಾಸಕ

ಕುಮಾರಸ್ವಾಮಿ ಅವರು ಜೆಡಿಎಸ್ ಗುರುತನ್ನು ಉಳಿಸಿಕೊಳ್ಳುವ ಮೂಲಕ ಸಿಎಂ ಆಗಿ ತಮ್ಮ ಸ್ಥಾನವನ್ನು ಭದ್ರವಾಗಿಟ್ಟುಕೊಳ್ಳಲು ಬಯಸುತ್ತಾರೆ. ಒಂದು ವೇಳೆ ವಿಲೀನ ಸಂಭವಿಸಿದಲ್ಲಿ, ಬಿಜೆಪಿ ನಷ್ಟ ಅನುಭವಿಸಬೇಕಾಗುತ್ತದೆ. ಏಕೆಂದರೆ ತಳಮಟ್ಟದ ಕಾರ್ಯಕರ್ತರು ಪಕ್ಷಕ್ಕಿಂತ ತಮ್ಮ ನಾಯಕರ ಮೇಲೆ ಹೆಚ್ಚು ಒಲವು ಹೊಂದಿದ್ದಾರೆ.

ಬಿಜೆಪಿ ಕೂಡ ವಿಲೀನಕ್ಕೆ ಉತ್ಸುಕವಾಗಿದೆ ಎಂದಲ್ಲ. ಮುಖ್ಯವಾಗಿ 2004 ರಿಂದ ವಿವಿಧ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡರೊಂದಿಗೂ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ತನ್ನ ಮೈತ್ರಕೂಟದವರೊಂದಿಗೆ ಎಂದಿಗೂ ಪ್ರಾಮಾಣಿಕವಾಗಿರಲಿಲ್ಲ. “ವಿಲೀನಗೊಂಡ ಪಕ್ಷದಲ್ಲಿ ತಮ್ಮ ಸ್ಥಾನಗಳು ಅಪಾಯದ ಅಂಚಿಗೆ ಸಿಲುಕುವ ಕಾರಣ ರಾಜ್ಯ ಬಿಜೆಪಿಯ ಮುಖಂಡರು ವಿಲೀನವನ್ನು ಬಯಸುವುದಿಲ್ಲ. ಆದ್ದರಿಂದ, ಅವರು ಸದ್ಯಕ್ಕೆ ಇಂತಹ ಮಾತುಕತೆಗಳನ್ನು ವಿರೋಧಿಸುವ ಸಾಧ್ಯತೆಯಿದೆ. ಭವಿಷ್ಯದಲ್ಲಿ, ಇದು ಬದಲಾಗಬಹುದು” ಎಂದು ಬಿಜೆಪಿಯ ಹಳೆಯ ನಾಯಕರು ಹೇಳಿದ್ದಾರೆ.

ಆದರೆ, ಪಕ್ಷಗಳು ಗಟ್ಟಿಯಾದ ರಾಜಕೀಯ ಬಲವನ್ನು ರೂಪಿಸಬಹುದೆಂದು ಕೆಲವರು ಭಾವಿಸುತ್ತಾರೆ. ಅದು ಸರ್ಕಾರವನ್ನು ಸ್ವಂತವಾಗಿ ರಚಿಸುವಷ್ಟು ಬಲವಾಗಿರುತ್ತದೆ.

ಎರಡು ಪಕ್ಷಗಳು ಎರಡು ವಿಭಿನ್ನ ಪ್ರದೇಶಗಳಲ್ಲಿ ಹೆಗ್ಗುರುತು ಹೊಂದಿರುವುದರಿಂದ, ಇದು ಕಾಂಗ್ರೆಸ್‌ಗೆ  ಮುಂದಿನ ಚುನಾವಣೆಯಲ್ಲಿ ಮರಣದಂಡನೆಯನ್ನು ವಿಧಿಸಿದಂತಾಗುತ್ತದೆ. ಜೆಡಿಎಸ್‌ ಮತ್ತು ಬಿಜೆಪಿಯ ಹೊಂದಾಣಿಕೆಯು ಮೂರು ರಾಜಕೀಯ ಪಕ್ಷಗಳ ನಡುವಿನ ಮತ ವಿಭಜನೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಸಮರ್ಥ ಅಭ್ಯರ್ಥಿಗಳೊಂದಿಗೆ ಉತ್ತಮ ಮೈತ್ರಿ ಸಾಧ್ಯವಾದರೆ, ಕಾಂಗ್ರೆಸ್‌ ಕುಸಿತಕಾಣಲಿದೆ” ಎಂದು ಬಿಜೆಪಿಯ ಮತ್ತೊಬ್ಬ ವ್ಯಕ್ತಿ ಹೇಳಿದ್ದಾರೆ.

ಹಳೇ ಮೈಸೂರು ಭಾಗದಲ್ಲಿ, ವಿಶೇಷವಾಗಿ ಮಂಡ್ಯ, ಹಾಸನ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಕೊನೆಗೊಳಿಸಲು ಬಿಜೆಪಿ ಬಯಸಿದೆ.

ಏಕೆಂದರೆ ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಸರಳ ಬಹುಮತ ಗೆಲ್ಲುವಲ್ಲಿ ಬಿಜೆಪಿ ವಿಫಲವಾಗಿದೆ. ಹಾಗಾಗಿ “ಜೆಡಿಎಸ್ ಜೊತೆಗಿನ ಹೊಂದಾಣಿಕೆಯು ಆ ಪಕ್ಷದ ಕಾರ್ಯಕರ್ತರನ್ನು ಸೆಳೆದು, ಅವರಿಗೆ ಅವಕಾಶ ಕಲ್ಪಿಸುವ ಮೂಲಕ ಸಮರ್ಥ ಸರ್ಕಾರ”ವನ್ನು ರೂಪಿಸಬಹುದು ಎಂದು ಬಿಜೆಪಿ ಭಾವಿಸಿದೆ ಎಂದು ಕೇಸರಿ ಪಕ್ಷದ ಕೆಲವು ಸದಸ್ಯರು ಹೇಳಿದರು.


ಇದನ್ನೂ ಓದಿ: ಕಾಂಗ್ರೆಸ್ ಮತ್ತು ಬಿಜೆಪಿಯ ಮಗು ಜೆಡಿಎಸ್; ಮಿಠಾಯಿ ತೋರಿಸಿದವರ ಹಿಂದೆ ಹೋಗುತ್ತದೆ: ಹಳ್ಳಿಹಕ್ಕಿ ವಿಶ್ವನಾಥ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights