ಅಸ್ಸಾಂನಲ್ಲಿ BJP ಮತ್ತು ಕಾಂಗ್ರೆಸ್‌ ಒಂದೇ ರೀತಿಯ ಸಂದಿಗ್ಧತೆಯನ್ನು ಎದುರಿಸುತ್ತಿವೆ; ಏನು ಮತ್ತು ಯಾಕೆ? ಡೀಟೇಲ್ಸ್‌

ಪರಸ್ಪರ ಪ್ರತಿಸ್ಪರ್ಧಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಅಸ್ಸಾಂ ಚುನಾವಣೆಯಲ್ಲಿ ಒಂದೇ ರೀತಿಯ ಸಂದಿಗ್ಧತೆಯನ್ನು ಎದುರಿಸುತ್ತಿವೆ. ಅದು ತಮ್ಮ ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಬೇಕೇ? ಬೇಡವೇ? ಮತ್ತು ಆ ಮುಖ ಯಾರದು? ಎಂಬುದಾಗಿದೆ.

ಕಾಂಗ್ರೆಸ್‌ ತನ್ನ ಪ್ರಮುಖ ನಾಯಕ ಮತ್ತು ಪಕ್ಷದ ಅಸ್ಸಾಂ ವಕ್ತಾರ ಗೌರವ್‌ ಗೊಗೊಯ್‌ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಬೇಕೇ? ಬಿಜೆಪಿಯು ಹಿರಿಯ ಸಚಿವ ಹಿಮಂತ ಬಿಸ್ವಾ ಶರ್ಮಾ ಅವರನ್ನು ತನ್ನ ಸಿಎಂ ಮುಖವಾಗಿ ಹೆಸರಿಸಬೇಕೇ? ಎಂಬ ಸಂದಿಗ್ಧತೆಯಲ್ಲಿವೆ.

ಅಸ್ಸಾಂ ರಾಜಕೀಯದಿಂದ ಅಳಿದುಹೋಗಲು ಕಾಂಗ್ರೆಸ್‌ ಬಯಸಿದ್ದರೆ ಮತ್ತು ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಬೇಕಾದರೆ, ಈ ಎರಡೂ ರಾಷ್ಟ್ರೀಯ ಪಕ್ಷಗಳು ಸಿಎಂ ಅಭ್ಯರ್ಥಿಯನ್ನು ಮುಂದಿಡದಿರುವುದಕ್ಕೆ ತನ್ನದೇ ಆದ ಕಾರಣಗಳನ್ನು ಹೊಂದಿವೆ.

ಇಲ್ಲಿ ವಿರೋಧಾಭಾಸವೆಂದರೆ, ಬಿಜೆಪಿ ಅಸ್ಸಾಂನಲ್ಲಿ ತನ್ನ ರಾಜಕೀಯ ಭವಿಷ್ಯದಲ್ಲಿ ತೀವ್ರ ಏರಿಕೆ ಕಂಡಿದೆ. 2016 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು. ಆದರೆ, ಅದೇ ಸಮಯದಲ್ಲಿ ಕಾಂಗ್ರೆಸ್ ಸ್ಥಿರವಾದ ಕುಸಿತವನ್ನು ಕಂಡಿದೆ. ಈ ಮಧ್ಯೆ ಎರಡೂ ಪ್ರತಿಸ್ಪರ್ಧಿಗಳು ಸಾಮಾನ್ಯ ಸಂಕಷ್ಟದಿಂದ ಬಳಲುತ್ತಿವೆ.

ಕಾಂಗ್ರೆಸ್ ಇಕ್ಕಟ್ಟು:

ಅಸ್ಸಾಂನಲ್ಲಿ ಕಾಂಗ್ರೆಸ್ ಅಷ್ಟೇನೂ ಹಾಳಾಗಿಲ್ಲ. ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರ ನಿಧನದೊಂದಿಗೆ, ಪಕ್ಷವು ನಾಯಕರಿಲ್ಲದ ಮತ್ತು ನಿರ್ದಯವಾಗಿ ಕಾಣಿಸುತ್ತಿದೆ.

ಗೊಗೊಯ್ ಒಬ್ಬ ದೃಢವಾದ, ಚುನಾವಣಾ ಸೋಲಿನಲ್ಲೂ ಭಾರಿ ಜನಪ್ರಿಯ ನಾಯಕರಾಗಿದ್ದರು. ಅವರ ನಿಧನವು ಅಸ್ಸಾಂ ಕಾಂಗ್ರೆಸ್‌ನಲ್ಲಿ ಆಳವಾದ ಅನಾಥತೆಯನ್ನು ಉಂಟುಮಾಡಿತು. ಇದು ರಾಜ್ಯದಲ್ಲಿ ಬಿಜೆಪಿಯ ಆಕ್ರಮಣಕಾರಿ ಬೆಳವಣಿಗೆಯಿಂದಾಗಿ ಇನ್ನೂ ಹೆಚ್ಚು ಸ್ಪಷ್ಟವಾಗಿದೆ.

ತರುಣ್ ಗೊಗೊಯ್‌ ನಂತರ ಕಾಂಗ್ರೆಸ್‌ಗೆ ಸುಲಭವಾದ ಉತ್ತರಾಧಿಕಾರಿಗಳಿಲ್ಲ. ರಾಜ್ಯದ ಕಾಂಗ್ರೆಸ್‌ನ ಎರಡನೇ ಉನ್ನತ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರು 2015 ರಲ್ಲಿ ಬಿಜೆಪಿಗೆ ಜಿಗಿದರು. ಇದರಿಂದಾಗಿ ಪಕ್ಷಕ್ಕೆ ಸರಿಪಡಿಸಲಾಗದ ನಷ್ಟವಾಗಿದೆ. ಗೊಗೊಯ್ ಅವರ ಮರಣದ ನಂತರ, ಅಸ್ಸಾಂನಲ್ಲಿ ಕಾಂಗ್ರೆಸ್‌ ಪ್ರಬಲವಾಗಿ ಉಳಿದಿಲ್ಲ – ಸಂಘಟನೆಯ ಮೇಲೆ ಹಿಡಿತವಿರುವ ಯಾರಾದರೂ ಅಧಿಕಾರ ವಹಿಸಿಕೊಳ್ಳಬಹುದು ಅಥವಾ ಪಕ್ಷವನ್ನು ವಿಧಾನಸಭಾ ಚುನಾವಣೆಗೆ ಮುನ್ನಡೆಸಬಹುದು ಎಂದು ಎದುರು ನೋಡುವ ಪರಿಸ್ಥಿತಿಯಲ್ಲಿದೆ. ಗೌರವ್ ಗೊಗೊಯ್ ಅವರು ರಾಜ್ಯದ ಇಡೀ ಪಕ್ಷವನ್ನು ನಿಭಾಯಿಸುವಷ್ಟು ಅನುಭವ ಹೊಂದಿಲ್ಲ.ಇದುವರೆಗೂ ಅವರನ್ನು ಅಸ್ಸಾಂನ ಮತದಾರರು ಗಂಭೀರವಾಗಿ ಪರಿಗಣಿಸಿಲ್ಲ. ರಿಪೂನ್ ಬೋರಾ ಅವರಂತಹ ಹಿರಿಯ ನಾಯಕರು ಮತ್ತು ರಾಜ್ಯ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಡೆಬಬ್ರತಾ ಸೈಕಿಯಾ ಅವರು ಎಂದಿಗೂ ಹೆಚ್ಚಿನ ಭರವಸೆಯನ್ನು ತೋರಿಸಿಲ್ಲ. ಅಲ್ಲದೆ,  ಅವರು ಸಾಮೂಹಿಕ ಹೊಣೆಗಾರಿಕೆ ಮತ್ತು ಚುನಾವಣಾ ಚಾತುರ್ಯತೆಯನ್ನು ಹೊಂದಿಲ್ಲ. ಲೋಕಸಭಾ ಸಂಸದ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪ್ರದ್ಯುತ್ ಬೋರ್ಡೊಲೊಯ್ ಅವರು ಅನುಭವಿ, ಆದರೆ, ಅವರು ಸಿಎಂ ಮುಖವಾಗಿ ತೋರಿಸಲು ರಾಜ್ಯವ್ಯಾಪಿ ಜನರ ವಿಶ್ವಾಸವನ್ನು ಪಡೆದಿಕೊಂಡಿಲ್ಲ.

Read Also: ಅಸ್ಸಾಂ ಚುನಾವಣೆ: NDA ತೊರೆದು ಕಾಂಗ್ರೆಸ್‌ ಜೊತೆ ಸೇರಿದ BPF ಪಕ್ಷ!

ಇನ್ನು, ಯುವ ಮುಖವಾದ ಸುಷ್ಮಿತಾ ದೇವ್ ಅವರು 2019 ರಲ್ಲಿ ತಮ್ಮದೇ ಆದ ಲೋಕಸಭಾ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಆದಾಗ್ಯೂ, ಕಳೆದ ಕೆಲವು ವಾರಗಳಲ್ಲಿ, ಗೌರವ್ ಗೊಗೊಯ್ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಿದ್ದಾರೆ ಎಂದು ತೋರುತ್ತದೆ. ಪಕ್ಷವನ್ನು ಹುರುಪಿನಿಂದ ಮುನ್ನಡೆಸುತ್ತಿದ್ದಾರೆ. ‘ಆಕ್ಸೋಮ್ ಬಾಸಾನ್ ಅಹೋಕ್’ (ಅಸ್ಸಾಂ ಅನ್ನು ಉಳಿಸೋಣ) ಚುನಾವಣಾ ಕೂಗಿನೊಂದಿಗೆ ಅವರು ಮೈಕೊಡವಿ ಎದ್ದಿದ್ದಾರೆ. ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ, ಗೌರವ್ ರಾಷ್ಟ್ರೀಯ ಮಟ್ಟದಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮುಂಚೂಣಿ ಮುಖವಾಗಿದ್ದ. ಆದರೆ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಲು ಪಕ್ಷಕ್ಕೆ ಸಾಕಷ್ಟು ಕಾರಣಗಳಿವೆಯೇ?

ಗೌರವ್ ಅಸ್ಸಾಂನಲ್ಲಿ ಇಲ್ಲಿಯವರೆಗೆ ಹೆಚ್ಚು ಜನಪ್ರಿಯ ನಾಯಕರಾಗಿರಲಿಲ್ಲ. ಇದಲ್ಲದೆ, ಗೌರವ್ ಪಕ್ಷದೊಳಗೆ ಇನ್ನೂ ವ್ಯಾಪಕವಾದ ಮನ್ನಣೆಯನ್ನು ಪಡೆದುಕೊಂಡಿಲ್ಲ. ಅವರ ಹೆಸರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸುವುದರಿಂದ ಪಕ್ಷದೊಳಗೆ ಆಂತರಿಕ ಸಂಘರ್ಷಗಳು, ಭಿನ್ನಾಭಿಪ್ರಾಯಗಳು ಮತ್ತು ಇತರ ಆಕಾಂಕ್ಷಿಗಳ ನಡುವೆ ಬಂಡಾಯ ಉಂಟಾಗುತ್ತವೆ. – ಇವು ಪಕ್ಷವು ಭರಿಸಲಾಗದ ಸಂಗತಿಯಾಗಿದೆ.

ಕಾಂಗ್ರೆಸ್‌ಗೆ ಸುಲಭವಾದ ಉತ್ತರಗಳಿಲ್ಲ. ಆದರೆ, ಕಾಂಗ್ರೆಸ್‌ ಬಲವಾದ ಪ್ರತಿಸ್ಪರ್ಧಿ, ಕಾಂಗ್ರೆಸ್‌ಅನ್ನು ಮುಗಿಸಿಯೇ ಬಿಡುತ್ತೇವೆ ಎಂದು ಹೇಳುತ್ತಿರುವ ಬಿಜೆಪಿಯೂ ಸಹ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.

ಹಿಮಂತ್ ಅಥವಾ ಸರ್ಬಾನಂದ್‌ – ಬಿಜೆಪಿಯ ದೊಡ್ಡ ಪ್ರಶ್ನೆ:

ಆಡಳಿತಾರೂಢ ಬಿಜೆಪಿಗೆ ಪರಿಸ್ಥಿತಿ ಇನ್ನೂ ಹೆಚ್ಚು ಅನಿಶ್ಚಿತವಾಗಿದೆ. ಇದು ಪ್ರಸ್ತುವ ಮುಖ್ಯಮಂತ್ರಿಯಾಗಿರುವ ಸರ್ಬಾನಂದ ಸೋನೊವಾಲ್‌ ಅವರನ್ನು ಸಿಎಂ ಅಭ್ಯರ್ಥಿಯೆಂದು ನಿರ್ಧರಿಸಬಹುದಿತ್ತು. ಆದರೆ, ಹಿಮಂತ್‌ ಅವರು ಬಿಜೆಪಿಯ ಸಂದಿಗ್ಧತೆಯನ್ನು ಸೃಷ್ಟಿಸಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನಲ್ಲಿ ಮಾತ್ರವಲ್ಲ, ಇಡೀ ಈಶಾನ್ಯ ಪ್ರದೇಶದಲ್ಲಿ ಬಿಜೆಪಿಗೆ ಅತಿದೊಡ್ಡ ಆಸ್ತಿಯಾಗಿದ್ದಾರೆ. ಅವರು ರಾಜಕೀಯವಾಗಿ ಮತ್ತು ಚುನಾವಣಾ ದೃಷ್ಟಿಯಿಂದ ರಾಜ್ಯದಲ್ಲಿ ಉತ್ತಮ ಪ್ರಾಬಲ್ಯವನ್ನು ಪಡೆದುಕೊಂಡಿದ್ದಾರೆ. ಅವರು ಗಮನಾರ್ಹ ಜನಪ್ರಿಯರಾಗಿದ್ದಾರೆ ಮತ್ತು ಸಂಘಟನೆಯ ಮೇಲೆ ಮತ್ತು ಸರ್ಕಾರದ ಮೇಲೆ ಬಲವಾದ ಹಿಡಿತವನ್ನು ಹೊಂದಿದ್ದಾರೆ.

ಸೋನೊವಾಲ್ ಕ್ಯಾಬಿನೆಟ್‌ನಲ್ಲಿ ಹಿರಿಯ ಶರ್ಮಾ ಅವರು ತೃಪ್ತಿ ಹೊಂದಿರಬಹುದು. ಆದರೆ ಅವರು ಟೇಬಲ್‌ಗೆ ಏನು ತರುತ್ತಾರೆ ಮತ್ತು ಅವರು ಎಷ್ಟು ಅಗತ್ಯವಾಗಿದ್ದಾರೆ ಎಂದು ಸಾಬೀತುಪಡಿಸಿದ್ದಾರೆ. ಅವರು ಚುನಾವಣೆಯ ನಂತರ ಅದೇ ರೀತಿ ಮುಂದುವರಿಯಲು ಸಾಧ್ಯವಾಗಿಲ್ಲ ಎಂಬುದನ್ನು ಬಿಜೆಪಿ ಅರಿತಿದೆ. 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರಕ್ಕೆ ಬರುವ ಇಚ್ಛೆಯನ್ನು ಶರ್ಮಾ ವ್ಯಕ್ತಪಡಿಸಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಅಸ್ಸಾಂನಲ್ಲಿ ಅವರ ಅನಿವಾರ್ಯತೆ ಇದೆ ಎಂದು ಹೇಳಿ, ಲೋಕಸಭಾ ಚುನಾವಣೆಯಲ್ಲಿ ಶರ್ಮಾ ಸ್ಪರ್ಧಿಸಬಾರದು ಎಂದು ಹೇಳಿದ್ದರು. ಆದರೆ ಈಗ ಜಲುಕ್ಬರಿಯಿಂದ ಅವರು ಸ್ಪರ್ಧಿಸಲು ಮುಂದಾಗಿದ್ದಾರೆ.

Read Also: ಚುನಾವಣಾ ಸಮೀಕ್ಷೆ: ಅಸ್ಸಾಂನಲ್ಲಿ BJPಗೆ ಅಲ್ಪ ಬಹುಮತ; ಕಡೆಗಣಿಸಿದ್ರೆ ಅಧಿಕಾರವಿಲ್ಲ!

ಅಸ್ಸಾಂ ಆಡಳಿತದ ದೃಷ್ಟಿಯಿಂದ ಆಗಿರಲಿ – ವಿಶೇಷವಾಗಿ ಸಿಎಎ ವಿರೋಧಿ ಪ್ರತಿಭಟನೆಗಳು ಅಥವಾ ಕೋವಿಡ್ -19 ಸಾಂಕ್ರಾಮಿಕ – ಅಥವಾ ರಾಜಕೀಯ ಬಿಕ್ಕಟ್ಟಿನ ಸಂದರ್ಭಗಳಲ್ಲಿ, ಇತ್ತೀಚಿನ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಪಷ್ಟವಾಗಿ ಶರ್ಮಾ ಪ್ರಮುಖ ಪಾತ್ರವಹಿಸಿದ್ದಾರೆ.

ಹಾಗಾದರೆ ಬಿಜೆಪಿ ಅವರನ್ನು ತನ್ನ ಸಿಎಂ ಮುಖ ಎಂದು ಘೋಷಿಸಲು ಹಿಂಜರಿಯುವುದು ಏಕೆ? ಶರ್ಮಾ ಅವರನ್ನು ಸಿಎಂ ಮುಖವಾಗಿ ಘೋಷಿಸುವುದು ಪ್ರಸ್ತುತ ಸಿಎಂ ಸೋನೊವಾಲ್ ಅವರನ್ನು ಅತೃಪ್ತಿಗೊಳಿಸುತ್ತದೆ. ಮತದಾನದ ಅಂಚಿನಲ್ಲಿ ಪಕ್ಷವು ನಾಯಕತ್ವದೊಳಗೆ ಬಂಡಾಯವನ್ನು ಬಯಸುವುದಿಲ್ಲ. ಹೀಗಾಗಿ ಪ್ರಸ್ತುತ ಸಿಎಂ ಅಥವಾ ಶರ್ಮಾ ಅವರನ್ನು ಮುಖ್ಯಮಂತ್ರಿ ಮುಖವಾಗಿ ಬಿಂಬಿಸುವುದು ಬಿಕ್ಕಟ್ಟಾಗಿದೆ.

ಸಿಎಂ ಮುಖದೊಂದಿಗೆ ಮತದಾನಕ್ಕೆ ಹೋಗುವುದಿಲ್ಲ ಎಂದು ಪಕ್ಷ ಹೇಳಿರಬಹುದು. ಆದರೆ ಅದರ ಅಸ್ವಸ್ಥತೆ ಮತ್ತು ನಿಶ್ಚಿತತೆಯ ಕೊರತೆ ಸ್ಪಷ್ಟವಾಗಿದೆ. ಮತದಾನದ ಸಂದರ್ಭದಲ್ಲಿ ಈಗಿರುವ ಸಿಎಂ ಅವರನ್ನು ಮುಂಚೂಣಿ ಮುಖವಲ್ಲವೆಂದು ಹೇಳಲು ಇಷ್ಟವಿಲ್ಲ. ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್‌ಘಡ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಇತ್ತೀಚಿನ ರಾಜ್ಯ ಚುನಾವಣೆಗಳನ್ನು ನೋಡಿ, ಈ ಎಲ್ಲವುಗಳಲ್ಲಿ ಸಿಟಿಂಗ್ ಸಿಎಂಗಳು ಪಕ್ಷವನ್ನು ಚುನಾವಣೆಯಲ್ಲಿ ಮುನ್ನಡೆಸಿದ್ದಾರೆ. ಆದಾಗ್ಯೂ, ಅಸ್ಸಾಂ ಒಂದು ವಿಪರ್ಯಾಸವಾಗಿದೆ, ಮತ್ತು ಆ ಅಪವಾದವಾಗಿ, ಇದು ಬಿಜೆಪಿ ಗೊಂದಲ ಮತ್ತು ಸಂದಿಗ್ಧತೆಯನ್ನು ಎದುರಿಸುತ್ತಿದೆ.

ದುರದೃಷ್ಟವಶಾತ್, ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರಿಗೂ ಅವರ ಸಂದಿಗ್ಧತೆಯು ಮತದಾನದೊಂದಿಗೆ ಕೊನೆಗೊಳ್ಳುವ ಸಾಧ್ಯತೆಯಿಲ್ಲ. ಚುನಾವಣೆಯಲ್ಲಿ ಗೆದ್ದ ನಂತರ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲುmr ಇನ್ನಷ್ಟು ಕಷ್ಟವಾಗುತ್ತದೆ.

ಕೃಪೆ: ದಿ ಪ್ರಿಂಟ್‌

ಕನ್ನಡಕ್ಕೆ: ಸೋಮಶೇಖರ್ ಚಲ್ಯ

Read Also: ಅಸ್ಸಾಂ BJPಯಲ್ಲಿ ಬಂಡಾಯ; ಸ್ವತಂತ್ರ ಸ್ಪರ್ಧೆಗೆ ಮುಂದಾದ BJP ಶಾಸಕರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights