ಬಿಹಾರ: 2.5 ಕೋಟಿ ರೂ. ವಿದ್ಯಾರ್ಥಿವೇತನ ಪಡೆದ 19 ವರ್ಷದ ವಿದ್ಯಾರ್ಥಿ..!

ನೀವು ಏನನ್ನಾದರೂ ಮಾಡಲು ನಿಜವಾದ ಉತ್ಸಾಹವನ್ನು ಹೊಂದಿದ್ದರೆ, ಪ್ರಕೃತಿ ಸ್ವಯಂಚಾಲಿತವಾಗಿ ನಿಮಗೆ ಸಹಾಯ ಮಾಡುತ್ತದೆ ಎಂದು ಹೇಳುವುದಕ್ಕೆ ಇಲ್ಲೊಂದು ಪ್ರತ್ಯಕ್ಷ ಸಾಕ್ಷಿ ಇದೆ. ಬಿಹಾರದ 19 ವರ್ಷದ ವಿದ್ಯಾರ್ಥಿ ಹೃತಿಕ್ ರಾಜ್ ಅಂತಹ ಅದ್ಭುತ ಕಾರ್ಯವನ್ನು ಮಾಡಿದ್ದಾರೆ. ಇದು ಎಲ್ಲರಿಗೂ ಹೆಮ್ಮೆ ತರುವಂತಹ ವಿಚಾರ. ಅವರ ಅಧ್ಯಯನದ ಮೇಲಿನ ತೀವ್ರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಮೆರಿಕ ವಿಶ್ವವಿದ್ಯಾಲಯ ಹೃತಿಕ್ ರಾಜ್ ಅವರಿಗೆ 2.5 ಕೋಟಿ ರೂ. ವಿದ್ಯಾರ್ಥಿವೇತನ ನೀಡಿದೆ.

ಹೌದು… ಹೃತಿಕ್ ರಾಜ್ ಅವರು ಪ್ರಪಂಚದಾದ್ಯಂತ ಭಾರತದ ಹೆಸರನ್ನು ಬೆಳಗಿಸಿದ್ದಾರೆ. ಹೀಗಾಗಿ ಅಮೆರಿಕದ ರಾಜಧಾನಿಯಾದ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಈ ವಿದ್ಯಾರ್ಥಿವೇತನವನ್ನು ನೀಡಲು ನಿರ್ಧರಿಸಿದೆ. ಅವರು ಬಿಹಾರದ ರಾಜಧಾನಿಯಾದ ಪಾಟ್ನಾ ನಿವಾಸಿಯಾಗಿದ್ದು, ವಿಕಿರಣ ಶಾಲೆಯ 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಈತನ ಸಾಧನೆಯನ್ನು ಗುರುತಿಸಿದ ವಾಷಿಂಗ್ಟನ್ ಡಿಸಿಯ ಜಾರ್ಜ್‌ಟೌನ್ ವಿಶ್ವವಿದ್ಯಾಲಯ ಅರುಪ್ ಹೆಸರಿನ 2.5 ಕೋಟಿ ವಿದ್ಯಾರ್ಥಿವೇತನವನ್ನು ಕೊಟ್ಟಿದೆ. ಹೃತಿಕ್ ರಾಜ್ ಪಾಟ್ನಾ ನಗರದ ಗೋಲಾ ರಸ್ತೆಯಲ್ಲಿ ವಾಸಿಸುತ್ತಿದ್ದು, ಪಾಟ್ನಾ ಜಿಲ್ಲೆಯ ಮಖ್ದಂಪುರ್ ಗ್ರಾಮಕ್ಕೆ ಸೇರಿದವರು.

ವಾಷಿಂಗ್ಟನ್ ಡಿಸಿಯ ಜಾರ್ಜ್ ಟೌನ್ ವಿಶ್ವವಿದ್ಯಾಲಯ ಇವರ 4 ವರ್ಷಗಳ ಶಿಕ್ಷಣ ಮತ್ತು ಜೀವನ ವೆಚ್ಚವನ್ನು ಭರಿಸಲಿದೆ. ಈ ಬಗ್ಗೆ ಸಂತಸಗೊಂಡ ಹೃತಿಕ್  ಸಾಕಷ್ಟು ಓದುವ ಮೂಲಕ ತನ್ನ ಹೆತ್ತವರ ಮತ್ತು ದೇಶದ ಹೆಸರನ್ನು ಬೆಳಗಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights