Big breaking : ದೇಶದಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ – ಗೃಹ ಇಲಾಖೆ..

ದೇಶದಲ್ಲಿ ಮತ್ತೆ 2 ವಾರಗಳ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಈ ಬಾರಿ ಪ್ರಧಾನಿ ಭಾಷಣ ಇಲ್ಲದೇ ಗೃಹ ಇಲಾಖೆ ಅಧಿಕಾರಿಗಳೇ ಈ ವಿಷಯವನ್ನು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

ಈ ಮಧ್ಯ ಎರಡನೇ ಹಂತದ ಲಾಕ್‌ಡೌನ್ ಇದೇ ೩ರಂದು ಕೊನೆಯಾಗಬೇಕಿತ್ತು. ಈಗ ದೇಶವನ್ನು ಕೆಂಪು, ಕಿತ್ತಳೆ ಹಾಗೂ ಹಸಿರು ವಲಯದಲ್ಲಿ ವಿಂಗಡಿಸಲಾಗಿದ್ದು ಅದರಂತೆಯೇ ಲಾಕ್‌ಡೌನ್‌ ನಿಯಮಗಳು ಸಹ ಸಡಿಲಗಿಳ್ಳಲಿದೆ.

ಮೂರನೇ ಹಮತದ ಲಾಕ್‌ಡೌನ್‌ಗೆ  ಸಿದ್ಧತೆ ನಡೆದಿರುವಾಗಲೇ ಕೇಂದ್ರ ಸರಕಾರ ದೇಶವನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ಆದೇಶ ಹೊರಡಿಸಿದೆ. ಕೊರೋನಾ ಸೋಂಕಿನ ಸಂಬಂಧ ದೇಶದ ಜಿಲ್ಲೆಗಳನ್ನು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳನ್ನಾಗಿ ಗುರುತಿಸಿ ಆದೇಶ ಹೊರಡಿಸಲಾಗಿದೆ.

ಇದೇ ರೀತಿ ಕರ್ನಾಟಕದಲ್ಲಿ ಸಹ 30 ಜಿಲ್ಲೆಗಳನ್ನು ಈ ಮೂರು ವಲಸಯಗಳಲ್ಲಿ ವಿಂಗಡನೆ ಮಾಡಲಾಗಿದೆ. ಮೂರು ಜಿಲ್ಲೆಗಳನ್ನು ಮಾತ್ರ ಪೆಂಪು ಪಟ್ಟಿಯಲ್ಲಿ ಉಳಿಸಲಾಗಿದೆ. ಆದರೆ ಹೆಚ್ಚು ಸಾಂದ್ರತೆ ಇರುವ ಜಿಲ್ಲೆಗಳನ್ನೂ ಕಿತ್ತಳೆ ವಲಯಕ್ಕೆ ಸೇರಿಸಿರುವ ಕೇಂದ್ರದ ಕ್ರಮ ಸಹಜವಾಗಿಯೇ ಸರಕಾರದ ಮಟ್ಟದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಬೆಂಗಳೂರು ನಗರದಲ್ಲಿ ಒಂದೆರಡು ಪ್ರದೇಶಗಳಲ್ಲಿ ಸೋಂಕು ವ್ಯಾಪಿಸಿರುವ ಕಾರಣ ಇಡೀ ಜಿಲ್ಲೆಯನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಇದೇ ರೀತಿ ಬೆಂ. ಗ್ರಾಮಾಂತರ ಮತ್ತು ಮೈಸೂರು ಸಹ ಕೆಂಪಾಗಿವೆ. ಆದರೆ ಕರ್ನಾಟಕದಲ್ಲಿ ಕೋವಿಡ್ ತಾಂಡವದ ಆರ್ಭಟಕ್ಕೆ ಸಿಕ್ಕಿ ನಲುಗಿರುವ ಕಲಬುರ್ಗಿ, ಬೆಳಗಾವಿ ಜಿಲ್ಲೆಗಳನ್ನು ಹೆಚ್ಚು ಅಪಾಯ ಇಲ್ಲದ ಕಿತ್ತಳೆ ಪಟ್ಟಿಗೆ ಸೇರಿಸಿರುವುದು ಗೊಂದಲ ಮೂಡಿಸಿದೆ.

ರಾಜ್ಯ ಸರಕಾರದ ಅಭಿಪ್ರಾಯ ಪಡೆಯದೆಯೇ ತನ್ನಲ್ಲಿರುವ ಮಾಹಿತಿ ಆಧರಿಸಿ ಕೇಂದ್ರ ಗೃಹ ಸಚಿವಾಲಯ ಈ ಪಟ್ಟಿ ತಯಾರಿಸಿದೆಯೇ ಎಂಬ ಗುಮಾನಿ ಶುರುವಾಗಿದೆ. ಸ್ವತಃ ರಾಜ್ಯ ಸರಕಾರದ ಅಧಿಕಾರಿಗಳಿಗೆ ಸಹ ಕೇಂದ್ರದ ಈ ನಡೆ ಪ್ರರ್ಶನಾರ್ಹವಾಗಿದೆ. ಯಾವ ಮಾನದಂಡದ ಮೇಲೆ ಈ ವಲಯಗಳನ್ನು ಗುರುತಿಸಲಾಯಿತು ಎಂಬುದು ಅವರಿಗೂ ತಿಳಿಯದಂತಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights