ಬೆಂಗಳೂರು, ಚಂಡೀಘಡದಲ್ಲಿ ರೈಲ್ವೇ ಆರ್ಕೇಡ್‌ ನಿರ್ಮಾಣಕ್ಕೆ ಬಿಡ್‌ ಆಹ್ವಾನ; ಗೋಮಾಂಸ, ಹಂದಿ ಮಾಂಸ ನಿಷೇಧ!

ಚಂಡೀಘಡ ಮತ್ತು ಬೆಂಗಳೂರು ರೈಲ್ವೇ ನಿಲ್ದಾಣಗಳಲ್ಲಿ ಫುಡ್ ಕೋರ್ಟ್‌ಗಳು, ಮನರಂಜನೆ ಮತ್ತು ವಿರಾಮಕ್ಕಾಗಿ ರೈಲ್ವೇ ಆರ್ಕೇಡ್‌ಗಳನ್ನು ನಿರ್ಮಿಸಲು ಟೆಂಡರ್‌ಗಳನ್ನು ಕರೆಯಲಾಗಿದೆ. ಆದರೆ ಟೆಂಡರ್‌ನಲ್ಲಿ ಬಿಡ್‌ ಹಾಕುವವರಿಗೆ ಸೂಚನೆಯೊಂದನ್ನು ನೀಡಲಾಗಿದ್ದು, ಅದರಂತೆ, ಗೋಮಾಂಸ, ಹಂದಿಮಾಂಸ ಮತ್ತು ಮದ್ಯವನ್ನು ಮಾರಾಟ ಮಾಡಲು ಅನುಮತಿ ಇಲ್ಲ ಎಂದು ಹೇಳಲಾಗಿದೆ.

ಇಂಡಿಯನ್ ರೈಲ್ವೇ ಸ್ಟೇಷನ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (ಐಆರ್‌ಎಸ್‌ಡಿಸಿ) ಟೆಂಡರ್‌ಗಳನ್ನು ಕರೆದಿದೆ. ಟೆಂಡರ್‌ನಲ್ಲಿ ಭಾಗವಹಿಸುವ ಬಿಡ್ಡರ್‌ಗಳಿಗೆ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂದು ಸೂಚನೆಯನ್ನೂ ಹೊರಡಿಸಿದೆ.

“ರೈಲ್ವೇ ನಿಲ್ದಾಣಗಳಲ್ಲಿ ಇದಕ್ಕಾಗಿ ಮೀಸಲಾದ ಜಾಗವನ್ನು ಬ್ರಾಂಡ್‌ಗಳೊಂದಿಗೆ ಅನುಭವ ವಲಯವಾಗಿ ಅಭಿವೃದ್ಧಿಪಡಿಸಲಾಗುವುದು” ಎಂದು ಟೆಂಡರ್ ಡಾಕ್ಯುಮೆಂಟ್ ಹೇಳಿದೆ.

ಈ ಡಾಕ್ಯುಮೆಂಟ್‌ನಲ್ಲಿ ಆಹಾರ ಮತ್ತು ಪಾನೀಯ, ಪ್ರಯಾಣಿಕರ ವಿಶ್ರಾಂತಿ ಕೋಣೆ, ಪುಸ್ತಕಗಳು ಮತ್ತು ಪತ್ರಿಕೆ, ಕೈಮಗ್ಗ ಮತ್ತು ಕಲಾಕೃತಿಗಳಂತಹ 15 ವಿಭಾಗಗಳನ್ನು ಪಟ್ಟಿ ಮಾಡಿದೆ.

ಆರ್ಕೇಡ್‌ನಲ್ಲಿನ ಯಾವುದೇ ಮಳಿಗೆಗಳಲ್ಲಿ “ನಿಷೇಧಿತ” ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಇದು ಸೂಚಿಸಿದೆ.

ಅದರಂತೆ, “ತಂಬಾಕು ಉತ್ಪನ್ನಗಳು, ವೈನ್, ಬಿಯರ್ ಅಥವಾ ಯಾವುದೇ ಇತರ ಆಲ್ಕೊಹಾಲ್‌ಯುಕ್ತ ಪಾನೀಯಗಳು ಅಥವಾ ಕಾನೂನಾತ್ಮಕವಾಗಿ ನಿಷೇಧಿಸಲಾದ ಯಾವುದೇ ಇತರ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಅಲ್ಲದೆ, ಆಹಾರ ಪದಾರ್ಥಗಳಲ್ಲಿ ಗೋಮಾಂಸ ಮತ್ತು ಹಂದಿಮಾಂಸವನ್ನು ಯಾವುದೇ ರೂಪದಲ್ಲಿಯೂ ಬಳಸಬಾರದು” ಎಂದು ಅದು ಹೇಳಿದೆ.

ಇದನ್ನೂ ಓದಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರ ಅಪರಾಧಿ- ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿ ವಜಾ!

ಅಷ್ಟು ಮತ್ರವಲ್ಲದೆ, ಹಸಿ ತರಕಾರಿ ಅಥವಾ ಮಟನ್/ಚಿಕನ್/ಮೀನು (ಕಚ್ಚಾ), ಕೋಚಿಂಗ್/ಟ್ಯೂಷನ್ ತರಗತಿಗಳು, ಟೈಲರ್ ಅಂಗಡಿ, ವಾಹನ ದುರಸ್ತಿ, ಪೆಟ್ರೋಲಿಯಂ ಅಥವಾ ಅದರ ಉಪ ಉತ್ಪನ್ನಗಳು, ನಿರ್ಮಾಣ, ಯಂತ್ರಾಂಶ ಮತ್ತು ನೈರ್ಮಲ್ಯ ಉತ್ಪನ್ನಗಳನ್ನೂ ಹೊರಗಿಡಲಾಗಿದೆ.

ಜಾಗವನ್ನು ಜಾಹೀರಾತು ಅಥವಾ ಸಂಗ್ರಹಣೆಗಾಗಿ ಬಳಸಲಾಗುವುದಿಲ್ಲ ಎಂದೂ ಅದು ಹೇಳಿದೆ.

ಬಿಡ್‌ಗಳ ಆನ್‌ಲೈನ್ ಸಲ್ಲಿಕೆಯ ಕೊನೆಯ ದಿನಾಂಕ ಸೆಪ್ಟೆಂಬರ್ 9. ಆರ್ಕೇಡ್ ಗುತ್ತಿಗೆ ಒಂಬತ್ತು ವರ್ಷಗಳ ಅವಧಿ ಇರುತ್ತದೆ.

ಈ ಆರ್ಕೇಡ್‌ಗಳ ನಿರ್ಮಾಣವು ಸರ್ಕಾರದ ನಿಲ್ದಾಣದ ಪುನರಾಭಿವೃದ್ಧಿ ಯೋಜನೆಗಳ ಒಂದು ಭಾಗವಾಗಿದೆ. ಇದು ರೈಲ್ವೆ ನಿಲ್ದಾಣ ಪ್ರದೇಶಗಳನ್ನು ರೈಲೋಪೋಲಿಸ್ ಆಗಿ ಪರಿವರ್ತಿಸುತ್ತದೆ. ಇದು ಮಿನಿ ಸ್ಮಾರ್ಟ್ ಸಿಟಿಯಂತೆ ಅಭಿವೃದ್ಧಿಯಾಗಲಿದ್ದು ವಾಸಿಸಲು, ಕೆಲಸ ಮಾಡಲು, ಆಟವಾಡಲು ದೊಡ್ಡ ಹೂಡಿಕೆ ಮತ್ತು ವ್ಯಾಪಾರವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜ್ಯಕ್ಕೆ ಕೈಕೊಟ್ಟ ಕೇಂದ್ರ: ಯೋಜನೆಗಳಿಗಿಲ್ಲ ಅನುದಾನ; ಹಲವು ಯೋಜನೆಗಳು ಸ್ಥಗಿತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights