ಬಂಗಾಳ, ಅಸ್ಸಾಂ ಫಲಿತಾಂಶವು ಬಿಹಾರದ BJP-JDU ಸರ್ಕಾರದ ಉಳಿವನ್ನು ನಿರ್ಧರಿಸುತ್ತವೆ: ಮೂಲಗಳು

ಬಂಗಾಳ ಮತ್ತು ಅಸ್ಸಾಂ ಚುನಾವಣೆಯಲ್ಲಿ ಯಾರು ಗೆದ್ದರೂ, ಫಲಿತಾಂಶವು ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆ. ಬಿಹಾರದ ಆಡಳಿತಾರೂಢ ಜೆಡಿಯು ಬಂಗಾಳದಲ್ಲಿ 22 ಮತ್ತು ಅಸ್ಸಾಂನಲ್ಲಿ 32 ಸ್ಥಾನಗಳಿಗೆ ಸ್ಪರ್ಧಿಸಲು ನಿರ್ಧರಿಸಿದೆ.

ಕಳೆದ ಡಿಸೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಜೆಡಿಯು ಪಕ್ಷದ ಆರು ಶಾಸಕರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಪಕ್ಷವು ಬಂಗಾಳ ಮತ್ತು ಅಸ್ಸಾಂ ಎರಡು ರಾಜ್ಯಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಣಕ್ಕಿಳಿಯುತ್ತಿದೆ. ಈ ಎರಡು ರಾಜ್ಯಗಳಲ್ಲಿನ ಪಕ್ಷವು ಬಿಹಾರ, ಯುಪಿ ಮತ್ತು ಜಾರ್ಖಂಡ್‌ನಿಂದ ವಲಸೆ ಬಂದ ಮತದಾರರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಅಂದಾಜಿನ ಪ್ರಕಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಸುಮಾರು 5% ವಲಸೆ ಮತದಾರರಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಜೆಡಿಯು ಹಿಂದಿ ಮಾತನಾಡುವ ಮತದಾರರ ಮೇಲೆ ಮಾತ್ರ ಅವಲಂಬಿತವಾಗಿಲ್ಲ; ಅಭಿವೃದ್ಧಿ ಮತ್ತು ಆಡಳಿತದ ನಿತೀಶ್ ಕುಮಾರ್ ಮಾದರಿಯನ್ನು ಎರಡು ರಾಜ್ಯಗಳ ಜನರು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಆದ್ದರಿಂದ, ಪಕ್ಷವು ಈ ರಾಜ್ಯಗಳಲ್ಲಿ ಚುನಾವಣಾ ನೆಲೆಯನ್ನು ಹೊಂದಿದೆ” ಎಂದು ಪಕ್ಷದ ಉಸ್ತುವಾರಿ ಸಂಜಯ್ ವರ್ಮಾ ಹೇಳಿದ್ದಾರೆ.

ಬಿಹಾರದ ವಿವಿಧ ಪಕ್ಷಗಳ ಮೂಲಗಳು ಬಂಗಾಳ ಮತ್ತು ಅಸ್ಸಾಂನ ಫಲಿತಾಂಶಗಳು ಬಿಹಾರದಲ್ಲಿ ಎನ್‌ಡಿಎ ಸರ್ಕಾರದ ಉಳಿವನ್ನು ನಿರ್ಧರಿಸುತ್ತದೆ ಎಂದು ಹೇಳುತ್ತಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಿಹಾರ ಸರ್ಕಾರದಲ್ಲಿ ಅದರ ಪ್ರಾಬಲ್ಯವೂ ಬೆಳೆಯುತ್ತದೆ ಎಂದು ಅನೇಕ ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

“ಅರುಣಾಚಲ ಪ್ರದೇಶದಲ್ಲಿನ ಬೆಳವಣಿಗೆಯ ನಂತರ ಜೆಡಿಯು ಪ್ರತೀಕಾರ ತೀರಿಸಿಕೊಂಡಿದೆ. ಜೆಡಿಯು ಮತ್ತು ಬಿಜೆಪಿಯ ಇತ್ತೀಚಿನ ಕೆಲವು ಹೇಳಿಕೆಗಳನ್ನು ನೋಡಿದರೆ, ಎರಡೂ ಪಕ್ಷಗಳ ನಡುವೆ ಬೆಳೆಯುತ್ತಿರುವ ಅಪನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಮೈತ್ರಿ ಎಷ್ಟು ಕಾಲ ಉಳಿಯುತ್ತದೆ ಎಂದು ಯಾರಿಗೂ ತಿಳಿದಿಲ್ಲ” ಎಂದು ಹಿರಿಯ ರಾಜಕಾರಣಿ, ಮಾಜಿ ಶಾಸಕ ಶಯಮ್ ಬಹದ್ದೂರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ತಮಿಳುನಾಡು: DMK ಪ್ರಧಾನ ಕಾರ್ಯದರ್ಶಿ ದುರೈ ಮುರುಗನ್ 10ನೇ ಗೆಲುವಿಗಾಗಿ ಹೋರಾಟ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights