ಬೆಳಗಾವಿ ಅಧಿವೇಶನ: ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಕ್ರೈಸ್ತರಿಗೆ ಪೊಲೀಸರ ಎಚ್ಚರಿಕೆ!

ರಾಜ್ಯ ವಿಧಾನಸಭಾ ಅಧಿವೇಶನವು ಡಿಸೆಂಬರ್‌ ತಿಂಗಳಿನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ , ಅಧಿವೇಶನ ಮುಗಿಯುವವರೆಗೂ ಬೆಳಗಾವಿ ಜಿಲ್ಲೆಯ ಕ್ರೈಸ್ತರು ಪ್ರಾರ್ಥನಾ ಸಭೆಗಳನ್ನು ನಡೆಸಬಾರದು ಎಂದು ಪೊಲೀಸರು  ‘ಸ್ನೇಹಪೂರ್ವಕ ಎಚ್ಚರಿಕೆ'(ಪ್ರೆಂಡ್‌ಲಿ ವಾರ್ನಿಂಗ್) ನೀಡಿದ್ದಾರೆ ಎಂದು ದಿ ನ್ಯೂಸ್ ಮಿನಿಟ್‌ ವರದಿ ಮಾಡಿದೆ.

ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ಸರ್ಕಾರವು ವಿವಾದಾತ್ಮಕ ‘ಮತಾಂತರ ವಿರೋಧಿ ಮಸೂದೆ’ಯನ್ನು ಮಂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

“ಬಲಪಂಥೀಯ ಗುಂಪುಗಳು ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡಬಹುದಾಗಿದ್ದು, ಪೊಲೀಸರು ರಕ್ಷಣೆ ನೀಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಾರ್ಥನಾ ಸಭೆಗಳನ್ನು ಮಾಡದಂತೆ, ಕೆಲವು ಪಾದ್ರಿಗಳನ್ನು ಕರೆಸಿ ಕೇಳಲಾಗಿದೆ. ಪೊಲೀಸರು ಲಿಖಿತವಾಗಿ ಏನನ್ನೂ ನೀಡಿಲ್ಲ, ಆದರೆ ಇದು ಕೋಮು ಸೌಹಾರ್ದತೆಯನ್ನು ಕಾಪಾಡಲು ಬೇಕಾಗಿ ಎಂದು ಹೇಳುತ್ತಾರೆ” ಎಂದು ಪಾದ್ರಿ ಥಾಮಸ್ ಜಾನ್ಸನ್ ಹೇಳಿದ್ದಾರೆ.

ಇದನ್ನೂ ಓದಿ: ACB ದಾಳಿ: ಮನೆಯ ಪೈಪ್‌ನಲ್ಲಿ ನೋಟಿನ ಕಂತೆ ಇಟ್ಟು ಜೈಲು ಸೇರಿದ ಸರ್ಕಾರಿ ಎಂಜಿನಿಯರ್‌!

“ಪಾದ್ರಿ ಚೆರಿಯನ್ ಮೇಲೆ ಹಲ್ಲೆ ನಡೆದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ನಿಮ್ಮ ಸ್ವಂತ ಚರ್ಚ್ ಕಟ್ಟಡಗಳಿದ್ದರೆ, ನೀವು ಪ್ರಾರ್ಥನೆ ಸಭೆಗಳನ್ನು ನಡೆಸಬಹುದು. ಆದರೆ ಬಾಡಿಗೆ ಕಟ್ಟಡಗಳಲ್ಲಿ ಅಥವಾ ಖಾಸಗಿ ಮನೆಗಳಲ್ಲಿ ನಡೆಸಬೇಡಿ ಎಂದು ಪೊಲೀಸರು ಪಾದ್ರಿಗಳಿಗೆ ಹೇಳಿದ್ದಾರೆ” ಎಂದು ಅವರು ಹೇಳಿದ್ದಾರೆ.

ವಿಶೇಷವೇನೆಂದರೆ, ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭೆಯ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆಗಳನ್ನು ತಪ್ಪಿಸುವಂತೆ ಕ್ರೈಸ್ತರಿಗೆ ತಿಳಿಸಲಾಗಿದೆ. ಡಿಸೆಂಬರ್ 13 ರಿಂದ 24 ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ವಿವಾದಾತ್ಮಕ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸುವ ನಿರೀಕ್ಷೆಯಿದೆ. ಜಿಲ್ಲೆಯ 25 ಕ್ಕೂ ಹೆಚ್ಚು ಪಾದ್ರಿಗಳನ್ನು ಪೊಲೀಸರು ಸಂಪರ್ಕಿಸಿದ್ದು, ಪ್ರಾರ್ಥನಾ ಸಭೆಗಳನ್ನು ನಡೆಸದಂತೆ ಕೇಳಿಕೊಂಡಿದ್ದಾರೆ ಎಂದು ನ್ಯೂಸ್‌ ಮಿನಿಟ್‌ ದೃಡಪಡಿಸಿದೆ.

ಇದನ್ನೂ ಓದಿ: ಐತಿಹಾಸಿಕ ರೈತ ಹೋರಾಟಕ್ಕೆ ವಿರೋಧ ಪಕ್ಷಗಳ-ನಾಯಕರ ತಾತ್ಸಾರವೇಕೆ?

“ಬಲಪಂಥೀಯರು ಚರ್ಚ್‌ಗಳಿಗೆ ನುಗ್ಗಿ, ವಸ್ತುಗಳನ್ನು ಒಡೆಯುತ್ತಾರೆ, ಜನರ ಮೇಲೆ ದಾಳಿ ಮಾಡುತ್ತಾರೆ. ಆದರೆ ಅಂತಿಮವಾಗಿ ಪಾದ್ರಿಗಳ ವಿರುದ್ಧ ಬಲವಂತದ ಮತಾಂತರದ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಅನೇಕರು ಈಗ ‘ಜೂಮ್ ಕರೆ’ಗಳಲ್ಲಿ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದಾರೆ. ನಾವು ಬಲಪಂಥೀಯರಿಗೆ ಅವಕಾಶ ನೀಡಲು ಬಯಸುವುದಿಲ್ಲ” ಎಂದು ಪಾದ್ರಿ ಥಾಮಸ್ ಹೇಳಿದ್ದಾರೆ.

ಬುಧವಾರ, ರೆವರೆಂಡ್ ನಂದು ಕುಮಾರ್ ಮತ್ತು ರೆವರೆಂಡ್ ಡೆರೆಕ್ ಫೆರ್ನಾಂಡಿಸ್ ನೇತೃತ್ವದ ಬಿಷಪ್‌ಗಳು ಮತ್ತು ಕ್ರಿಶ್ಚಿಯನ್ ಮುಖಂಡರ ನಿಯೋಗವು ಬೆಳಗಾವಿ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಕ್ಷಣೆ ಕೋರಿ ಮನವಿ ಸಲ್ಲಿಸಿದೆ.

ಕಳೆದ ಕೆಲವು ತಿಂಗಳುಗಳಿಂದ, ಬಿಜೆಪಿ ಬೆಂಬಲಿತ ಬಜರಂಗದಳ ಸೇರಿದಂತೆ ಹಲವಾರು ಸಂಘಟನೆಗಳು ರಾಜ್ಯದ ಹಲವು ಭಾಗಗಳಲ್ಲಿ ಕ್ರಿಶ್ಚಿಯನ್ ಪಾದ್ರಿಗಳಿಂದ ಬಲವಂತದ ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಪ್ರತಿಭಟನೆಗಳು ಮತಾಂತರವನ್ನು ನಿಷೇಧಿಸುವ ಕಾನೂನನ್ನು ತರುವ ದೊಡ್ಡ ಯೋಜನೆಯ ಭಾಗವಾಗಿದೆ ಎಂಬುವುದನ್ನು ನ್ಯೂಸ್‌ ಮಿನಿಟ್‌ ಉಲ್ಲೇಖಿಸಿದೆ.

ಇದನ್ನೂ ಓದಿ: ಮುರುಡೇಶ್ವರ ಪ್ರತಿಮೆ ವಿರೂಪ: ಟಾರ್ಗೆಟ್‌ ಮಾಡಿದ್ದು ಉಗ್ರರಲ್ಲ; ಚುನಾವಣೆಗೆ ಕೋಮುವಾದಿಗಳ ಹುನ್ನಾರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights