ತಮಿಳು ಭಾಷೆ ಕಲಿಯದಿರುವುದಕ್ಕೆ ಬೇಸರವಿದೆ; ಮನ್-‌ಕಿ-ಬಾತ್‌ನಲ್ಲಿ ಮೋದಿ

ವಿಶ್ವದ ಅತ್ಯಂತ ಹಳೆಯ ಪ್ರಾಚೀನ ಭಾಷೆ ತಮಿಳು ಭಾಷೆಯನ್ನು ಕಲಿಯದೇ ಇರುವುದಕ್ಕೆ ಬೇಸರವಿದೆ ಎಂದು ಪ್ರಧಾನಿ ಮೋದಿ ತಮ್ಮ ರೇಡಿಯೋ ಕಾರ್ಯಕ್ರಮವಾದ ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ.

ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಯುವ ಮನ್ ಕಿ ಬಾತ್ ನ 74ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಮತ್ತು ಪಿಎಂ ಆಗಿದ್ದ ಅವಧಿಯಲ್ಲಿ ಏನಾದರೂ ತಪ್ಪಿದೆಯೇ ಎಂದು ನೋಡಿದರೆ, ನನಗನಿಸುತ್ತದೆ- ಜಗತ್ತಿನ ಅತ್ಯಂತ ಹಳೆಯ ಭಾಷೆಯಾದ ತಮಿಳು ಭಾಷೆಯನ್ನು ನಾನು ಕಲಿಯಲಾಗದಿರುವುದು ವಿಷಾದದ ಸಂಗತಿ. ತಮಿಳು ಸಾಹಿತ್ಯ ಸುಂದರವಾಗಿದೆ’ ಎಂದು ಹೇಳಿದ್ದಾರೆ.

ಮನ್ ಕಿ ಬಾತ್ ಮುಖ್ಯಾಂಶಗಳು:

  • ಜಲ ಸಂರಕ್ಷಣೆಯ ಉದ್ದೇಶದಿಂದ ಜಲಶಕ್ತಿ ಸಚಿವಾಲಯದ ಹೊಸ ಅಭಿಯಾನ ‘ಕ್ಯಾಚ್ ದಿ ರೈನ್’ ಎಂಬ ಹೊಸ ಅಭಿಯಾನವನ್ನು ಆರಂಭಿಸಲಿದೆ.
  • ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಭಾಷೆ ಕಲಿಯದಿರುವುದಕ್ಕೆ ವಿಷಾಧಿಸುತ್ತೇನೆ.
  • ಆತ್ಮ ನಿರ್ಭರ ಭಾರತ ಮಂತ್ರವು ಕೇವಲ ಸರ್ಕಾರದ ಪ್ರಯತ್ನವಲ್ಲ ದೇಶದ ಜನರ ಪ್ರಯತ್ನವಾಗಿದೆ.
  • ಪರಿಸರ ಸಂರಕ್ಷಣೆಗಾಗಿ ಅಸ್ಸಾಂ ನ ದೇವಸ್ಥಾನಗಳು ಮಾಡಿರುವ ಕಾರ್ಯಗಳು ಶ್ಲಾಘನೀಯ.
  • ‘ದೇಶದ ಅನೇಕ ಜನರು ‘ಆತ್ಮ ನಿರ್ಭರ ಭಾರತಕ್ಕೆ ಕೊಡುಗೆ ನೀಡುತ್ತಿದ್ದಾರೆ. ದೆಹಲಿಯ ಎಲ್ ಇಡಿ ಬಲ್ಬ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೋದಜೀ ಅವರು, ಒಂದು ಸಣ್ಣ ಎಲ್ ಇಡಿ ಬಲ್ಬ್ ತಯಾರಿಕಾ ಘಟಕವನ್ನು ಪ್ರಾರಂಭಿಸಿದ್ದಾರೆ.
  • ‘ಲ್ಯಾಬ್ ಟು ಲ್ಯಾಂಡ್ ‘ ಮಂತ್ರದೊಂದಿಗೆ ವಿಜ್ಞಾನವನ್ನು ಮುನ್ನಡೆಸಬೇಕಾಗಿದೆ ಎಂದಿದ್ದಾರೆ.
  • ಆತ್ಮ ನಿರ್ಭರ ಭಾರತದಲ್ಲಿ ವಿಜ್ಞಾನದ ಕೊಡುಗೆ ಅಪಾರ. ಉದಾಹರಣೆಗೆ, ಲಡಾಕ್ ನ ಉರ್ಗೈನ್ ಫಂಟ್ಸೋಗ್ 20 ವಿವಿಧ ಬೆಳೆಗಳನ್ನು ಆವರ್ತನ ಮಾದರಿಯಲ್ಲಿ ಸಾವಯವವಾಗಿ ಬೆಳೆಯಲು ನವೀನ ತಂತ್ರಗಳೊಂದಿಗೆ ಕೆಲಸ ಮಾಡುತ್ತಿದೆ’ ಎಂದು ಅವರು ಹೇಳಿದರು.
  • ಸಂತ ರವಿದಾಸ ಜಿ ಅವರ ಕೆಲಸ ಮಾಡಿ, ಏನನ್ನೂ ನಿರೀಕ್ಷಿಸಬೇಡಿ ಎಂಬ ಮಾತು ನಮಗೆ ಪಾಠವಾಗಿದೆ. ಸಾಂಪ್ರದಾಯಿಕ ಚಿಂತನೆಗಳನ್ನು ಮೀರಿ ಹೋಗುವುದನ್ನು ಅವರು ಜನರಿಗೆ ಕಲಿಸಿಕೊಟ್ಟರು. ಸಂತ ರವಿದಾಸ್ ಜಿ ಅವರು ವಿವಿಧ ವಿಷಯಗಳ ಬಗ್ಗೆ ನೇರವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡಿದ್ದಾರೆ’ ಎಂದು ಮೋದಿ ಹೇಳಿದ್ದಾರೆ.
  •  ಈ ತಿಂಗಳ ‘ಮಾಘ’ ಮಾಸದಲ್ಲಿ ಹರಿದ್ವಾರವು ಈ ವರ್ಷ ಕುಂಭಕ್ಕೆ ಆತಿಥ್ಯ ವಹಿಸುತ್ತಿದೆ. ಮಾರ್ಚ್ 22ರಂದು ವಿಶ್ವ ಜಲ ದಿನ ಆಚರಿಸಲಾಗುವುದು. ಮನುಕುಲದ ಅಭಿವೃದ್ಧಿಗೆ ನೀರು ಬಹಳ ಮುಖ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಬಂಗಾಳದಲ್ಲಿ BJP ಎರಡಂಕಿ ದಾಟಲ್ಲ; ಗೆದ್ದರೆ ಟ್ವಿಟರ್‌ಗೆ ಗುಡ್‌-ಬೈ; ಪುನರುಚ್ಚರಿಸಿದ ಪ್ರಶಾಂತ್ ಕಿಶೋರ್

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights