ಬಿಎಸ್ವೈಗೆ ಶುರುವಾಯ್ತಾ ಕಂಟಕ? : ಬಿಜೆಪಿ ಶಾಸಕರಿಂದಲೇ ರಾಜ್ಯ ಸರಕಾರದ ಬಗ್ಗೆ ಅವಿಶ್ವಾಸ…!

ಮುಖ್ಯಮಂತ್ರಿ ಬಿ ಎಸ್  ಯಡಿಯೂರಪ್ಪ ನವರಿಗೆ ಕೆಟ್ಟ ಸಮಯ ಕಾಡುತ್ತಿದೆ ಅಂತ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಕಾರಣ ಇಷ್ಟೇ ಒಂದಡೆ ಮಹ ವಿಜೇಂದ್ರನ ಮೇಲೆ ಭ್ರಷ್ಟಾಚಾರದ ಆರೋಪ , ಇನ್ನೊಂದಡೆ ಬಿ ಎಸ್ ವೈ ಅವರನ್ನು ಪಟ್ಟದಿಂದ ಕೆಳಗಿಳಿಸಬೇಕೆಂದು ಪಟ್ಟು ಹಿಡಿದು ಕುಳಿತಿರುವ ಹೈಕಮಾಂಡ್ ಇವುಗಳ ಮದ್ಯಸರಕಾರದ ಮೇಲೆ ಶಾಸಕರ ಅಸಮಾದಾನ…

ಒಂದು ವರ್ಷದ ಆಡಳಿತಾವಧಿ ಪೂರೈಸಿರುವ ರಾಜ್ಯ ಸರಕಾರದ ಬಗ್ಗೆ ಬಿಜೆಪಿ ಶಾಸಕರೇ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಸರಕಾರದ ಮಂತ್ರಿಗಳ ಕಾರ್‍ಯವೈಖರಿಗೆ ಖುದ್ದು ಬಿಜೆಪಿ ಶಾಸಕರೇ ಆಕ್ರೊಶ ಹೊರಹಾಕಿದ್ದಾರೆ.

ವಿಧಾನಸಭೆಯ ಮುಂಗಾರು ಅಧಿವೇಶನದ ಸಂದರ್ಭ  ಬಿಜೆಪಿ ಶಾಸಕಾಂಗದ ಸಭೆಯಲ್ಲಿ ಹಲವಾರು ಶಾಸಕರು ಮಂತ್ರಿಗಳ ನಡವಳಿಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.  ಸರಕಾರ ನಮ್ಮದೇ ಇದ್ದರೂ ನಮ್ಮ ಮಾತಿಗೆ ಸಚಿವರು ಕವಡೆ ಕಿಮ್ಮತ್ತು ನೀಡುತ್ತಿಲ್ಲ. ನಾವು ಹೇಳುವ ಕೆಲಸಗಳು ನಡೆಯುತ್ತಿಲ್ಲ ಎಂಬುದು ಶಾಸಕರ ದೂರಾಗಿದೆ.

ಮಂತ್ರಿಗಳ ಬದಲು ಅವರ ಮಧ್ಯವರ್ತಿಗಳ ದರಬಾರು ಜೋರಾಗಿದೆ. ಈ ಪ್ರವೃತ್ತಿ ಕೊನೆಯಾಗಲೇಬೇಕು ಎಂದು ಅನೇಕ ಶಾಸಕರು ಪಟ್ಟು ಹಿಡಿದರು ಎಂದು ಮೂಲಗಳು ತಿಳಿಸಿವೆ.ನಮ್ಮ ಕೆಲಸ ಆಗಬೇಕಾದರೇ ನಾವು ಮಂತ್ರಿಗಳ ಬದಲು ಮಧ್ಯವರ್ತಿಗಳ ಬಳಿ ಗೋಗೆರೆಯಬೇಕಾದ ಪರಿಸ್ಥಿತಿ ತಲೆದೋರಿದೆ.

ನಮ್ಮ ಸರಕಾರದಲ್ಲಿ ನಮ್ಮ ಮಾತಿಗೇ ಬೆಲೆ ಇಲ್ಲದಂತಾಗಿದೆ. ಇದಕ್ಕಾಗಿ ಸರಕಾರ ರಚಿಸಬೇಕಿತ್ತ ಎಂದು ಶಾಸಕರು ಪ್ರಶ್ನಿಸಿದರು ಎನ್ನಲಾಗಿದೆ. ಒಂದು ಹಂತದಲ್ಲಿ ಮಂತ್ರಿಗಳು ಮತ್ತು ಕೆಲ ಶಾಸಕರ ನಡುವೆ ದೊಡ್ಡ ವಾಗ್ವಾದವೇ ನಡೆದು ಅವರನ್ನು ಸಮಾಧಾನಪಡಿಸಲು ಸಭೆಯಲ್ಲಿ ಇದ್ದ ಇತರ ಹಿರಿಯ ಶಾಸಕರು ಮುಂದೆಬರಬೇಕಾಯಿತು ಎನ್ನಲಾಗಿದೆ.

ಶಾಸನ ಸಭೆಯ ಕಲಾದ ನಡುವೆಯೇ ಬಿಜೆಪಿ ಶಾಸಕ ಬೆಳ್ಳ ಪ್ರಕಾಶ್ ಮತ್ತು ಸಚಿವ ನಾರಾಯಣ ಗೌಡ ಅವರು ನಡುವೆ ವಿಧಾಣಸಭೆಯ ಕ್ಯಾಂಟೀನಿನಲ್ಲಿ ಇತ್ತೀಚೆಗೆ ದೊಡ್ಡ ಜಗಳವೇ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights