ಗಣೇಶ ಹಬ್ಬಕ್ಕೆ ಖಾಸಗಿ ಬಸ್ ನಲ್ಲಿ ಪ್ರಯಾಣ ಮಾಡುವ ಮುನ್ನ ಈ ಸ್ಟೋರಿ ನೋಡಿ..

ನೀವೇನಾದ್ರು ಗಣೇಶ ಹಬ್ಬಕ್ಕೆ ಊರುಗಳಿಗೆ ತೆರಳು ಪ್ಲ್ಯಾನ್ ಮಾಡಿದ್ರೆಕೊಂಡಿದ್ರೆ ಕೊಂಚ ಖಾಸಗಿ ಬಸ್ ಗಳ ಪ್ರಯಾಣ ದರದ ಬಗ್ಗೆ ಕಣ್ಣಾಯಿಸಿಬಿಡಿ. ಯಾಕೆಂದ್ರೆ ಗಣೇಶ ಹಬ್ಬಕ್ಕೆಂದು ಖಾಸಗಿ ಬಸ್ ಗಳ ಪ್ರಯಾಣ ದರವನ್ನು ಹೆಚ್ಚಿಸಲಾಗಿದ್ದು, ಅದನ್ನ ಕೇಳಿದ್ರೆ ನೀವು ಶಾಕ್ ಆಗೋದ್ರಲ್ಲಿ ಡೌಟೇ ಇಲ್ಲ.

ಹೌದು… ಈ ಬಾರಿ ಗಣೇಶ ಹಬ್ಬಕ್ಕೆಂದು ಸಾಲು ಸಾಲು ರಜೆ ಇದೆ. ಹೀಗಾಗಿ ಊರಿನತ್ತ ಪ್ರಯಾಣ ಮಾಡುವವರ ಸಂಖ್ಯೆ ಕೂಡ ಅಧಿಕವಾಗಿದೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಖಾಸಗಿ ಬಸ್ ಗಳು ಪ್ರಯಾಣ ದರವನ್ನು ದುಪ್ಪಟ್ಟು ಮಾಡಿದ್ದಾರೆ. ರಾಜ್ಯದ ಯಾವುದೇ ದೂರದ ಜಿಲ್ಲೆಗಳಿಗೆ ಪ್ರಯಾಣ ಮಾಡಿದ್ರೂ ಸಾವಿರದ ಮೇಲೆನೇ ಟಿಕೇಟ್ ದರವನ್ನು ನಿಗಧಿ ಮಾಡಲಾಗಿದೆ.

ಹಬ್ಬಕ್ಕೂ ಮೊದಲು 500 ರಿಂದ 800 ರವರೆಗೆ ಇದ್ದ ಟಿಕೇಟ್ ದರ ಸದ್ಯ ದುಪ್ಪಟ್ಟಾಗಿರುವುದನ್ನ ಕಂಡು ಜನ ಶಾಕ್ ಆಗಿದ್ದಾರೆ. ಕೊರೊನಾ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಜನರ ಮೇಲೆ ಬೆಲೆ ಏರಿಕೆಯಿಂದ ಎಲ್ಲವೂ ದುಬಾರಿಯಾಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿವಿಧ ನಗರಗಳಿಗೆ ಖಾಸಗಿ ಬಸ್​ಗಳ ಟಿಕೆಟ್​ ದರ ಏರಿಕೆಯಾಗಿದ್ದು, ಆ ಪಟ್ಟಿ ಈ ಕೆಳಕಂಡಂತಿದೆ.

ನಗರ ಹಬ್ಬದ ದರ ಹಿಂದಿನ ದರ 
ಉಡುಪಿ 1,400 – 1,800 700 – 750
ಬೆಳಗಾವಿ 1,100 – 1, 300 800 – 900
ಧಾರವಾಡ 900 – 1,100 600 – 650
ಮಂಗಳೂರು 1,000 – 1,300 700 – 800
ಹುಬ್ಬಳ್ಳಿ 1,200 – 1,500 750 – 800
ಕಲಬುರ್ಗಿ 1,200 – 1,550 800 – 900

ಇನ್ನೂ ಗೌರಿ ಗಣೇಶ ಹಬ್ಬದ ನಿಮಿತ್ತ ವಾಯವ್ಯ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ವಿಭಾಗದಿಂದ 100 ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ನಾಲ್ಕು ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಟಿಕೆಟ್​ನಲ್ಲಿ ಕಾಯ್ದಿರಿಸಿದರೆ ಮೂಲ ಪ್ರಯಾಣ ದರದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಹೋಗುವ ಮತ್ತು ಬರುವ ಪ್ರಯಾಣಕ್ಕೆ ಒಮ್ಮೆಗೇ ಮುಂಗಡ ಬುಕ್ಕಿಂಗ್ ಮಾಡಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights