ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರಿಗೆ ಶಾಕ್‌ ಕೊಟ್ಟ ಬಿಡಿಎ; ಆಸ್ತಿ ತೆರಿಗೆ ಶೇ.286 ರಷ್ಟು ಹೆಚ್ಚಳ!

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಘಾತ ನೀಡಿದೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆಯನ್ನು ಬಿಡಿಎ ಇದೀಗ ಶೇ.286 ರಷ್ಟು ಏರಿಸಿದೆ. ಈ ನಿಯಮ ಕನಿಷ್ಟ 1 ಲಕ್ಷ ಜನರಿಗೆ ಭಾರೀ ಹೊರೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಹೆಚ್ಚುವರಿ ನಿರ್ವಹಣಾ ಶುಲ್ಕಗಳು ಏಕರೂಪದ್ದಾಗಿದ್ದರೂ, ಬಿಡಿಎ ನಿಯಮದಂತೆ ಸೈಟ್​ಗಳ ವಿನ್ಯಾಸಗಳು ಬದಲಾದಂತೆ ಆಸ್ತಿ ತೆರಿಗೆಯೂ ಬದಲಾಗುತ್ತದೆ. ಇದು ಸೈಟ್ ಮಾಲೀಕರ ಮೇಲೆ ಆರ್ಥಿಕವಾಗಿ ಪರಿಣಾಮ ಬೀರಲಿದೆ. ಉದಾಹರಣೆಗೆ, ಆಸ್ತಿ ತೆರಿಗೆ ಬದಲಾದಂತೆ 30 ಅಡಿ x 40 ಅಡಿ ಸೈಟ್ ಮಾಲೀಕರು ಭಿನ್ನವಾಗಿರುತ್ತಾರೆ. ಉದಾಹರಣೆಗೆ, ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲಿ ಆಸ್ತಿ ಹೊಂದಿದ್ದವರು 2020ರಲ್ಲಿ 838 ರೂ. ಹಣವನ್ನು ಆಸ್ತಿ ತೆರಿಗೆ ರೂಪದಲ್ಲಿ ಪಾವತಿ ಮಾಡುತ್ತಿದ್ದರು.

ಆದರೆ, ಅದೇ ಆಸ್ತಿಗೆ ಈಗ 3233 ರೂ.ಗಳನ್ನು ಆಸ್ತಿ ತೆರಿಗೆ ರೂಪದಲ್ಲಿ ಹಣವನ್ನು ಪಾವತಿ ಮಾಡಬೇಕಿದೆ. ಇದು ಕನಿಷ್ಟ ಶೇ.286ರಷ್ಟು ಅಧಿಕ ಎಂದು ಅಂದಾಜಿಸಲಾಗಿದೆ. ಅಂಜನಾಪುರ ಲೇಔಟ್​ನಲ್ಲಿ 40 ಅಡಿ x 60 ಅಡಿ ಸೈಟ್ ಮಾಲೀಕರು ಕಳೆದ ವರ್ಷದವರೆಗೆ 3,616 ರೂ. ತೆರಿಗೆ ಪಾವತಿ ಮಾಡುತ್ತಿದ್ದರು, ಅದರ ಪ್ರಮಾಣ ಈಗ 6,016 ರೂ. ಗೆ ಏರಿಕೆ ಮಾಡಲಾಗಿದೆ.

ಇದನ್ನೂ ಓದಿ: ಮುಂದಿನ ಚುನಾವಣೆಗಳನ್ನು ಎದುರಿಸಲು ಸಿದ್ಧರಾಗಿ: ಪಕ್ಷದ ಮುಖಂಡರಿಗೆ ಯಡಿಯೂರಪ್ಪ ಕರೆ!

ಬಿಡಿಎ, ಬಿಬಿಎಂಪಿ ಸೇರಿದಂತೆ ಇತರೆ ಸಾರ್ವಜನಿಕ ಸಂಸ್ಥೆಗಳ ನಿಯಮದಂತೆ ಶೇ.15ರ ವರೆಗೆ ಮಾತ್ರ ಶುಲ್ಕವನ್ನು ಏರಿಸುವ ಹಕ್ಕನ್ನು ಹೊಂದಿವೆ. ಆದರೆ, ಇದು ನಿಯಮ ಮೀರಿದ ತೆರಿಗೆ ಏರಿಕೆ ಎಂದು STIOಗೆ ದೂರು ನೀಡಲು ಸೈಟ್ ಮಾಲೀಕರು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: OBCಗಳಿಗೆ ರಾಜಕೀಯ ಮೀಸಲಾತಿ ತರುವಲ್ಲಿ ಬಿಜೆಪಿ ವಿಫಲವಾದರೆ ರಾಜಕೀಯದಿಂದ ನಿವೃತ್ತಿ: ದೇವೇಂದ್ರ ಫಡ್ನವಿಸ್

ಬೆಂಗಳೂರಿನ ಅನೇಕ ಲೇಔಟ್​ಗಳಲ್ಲಿ ಬಿಬಿಎಂಪಿ ಮತ್ತು ಬಿಡಿಎ ರಸ್ತೆ, ಫುಟ್​ಪಾತ್, ಪೈಪ್​ಲೈನ್​ಗಳು, ನೈಮರ್ಲ್ಯಸುಧಾರಣೆ ಮತ್ತು ಪಾರ್ಕ್​ಗಳನ್ನೇ ನಿರ್ಮಿಸಿಲ್ಲ. ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನೇ ನೀಡಿಲ್ಲ. ಅಷ್ಟರಲ್ಲಿ ತೆರಿಗೆಯನ್ನು ಈ ಪ್ರಮಾಣದಲ್ಲಿ ಏರಿಸಿರುವುದು, ನಿರ್ವಹಣಾ ಶುಲ್ಕವನ್ನು ಹೆಚ್ಚಿಸಿರುವುದು ಅನೇಕ ಸೈಟ್ ಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸೈಟ್ ಮಾಲೀಕರು ಬಿಡಿಎ ರೇರಾ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಈಗ ಕೊರೋನಾ ಲಾಕ್​ಡೌನ್​ ತೆಗೆಯಲಾಗುತ್ತಿದ್ದು, ಜನ ಜೀವನ, ವ್ಯಾಪಾರ-ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಅಷ್ಟರಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಸ್ತಿ ತೆರಿಗೆಯನ್ನು ದ್ವಿಪಟ್ಟು ಹೆಚ್ಚು ಮಾಡಿರುವುದು ನಗರದ ಆಸ್ತಿ ಮಾಲೀಕರ ಪಾಲಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಾಜ್ಯ BJPಯಲ್ಲಿ ನಾಯಕತ್ವ ಬದಲಾವಣೆ ಫಿಕ್ಸ್‌!; ಬಿಎಸ್‌ವೈ ಮುಂದಿವೆ ಎರಡು ಆಯ್ಕೆಗಳು!?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights