ಅನ್ನದಾತರ ಬಗ್ಗೆ ಹಗುರವಾಗಿ ಮಾತನಾಡಿದ ಬಿ.ಸಿ ಪಾಟೀಲ್ : ಕ್ಷಮೆಯಾಚಿಸುವಂತೆ ಈರಣ್ಣಾ ಕಡಾಡಿ ಆಗ್ರಹ!

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೖಷಿ ಸಚಿವ ಬಿ.ಸಿ.ಪಾಟೀಲ್ ಗುರುವಾರ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆಗೆ ಹೇಳಿಕೆಗೆ ಬಿಜೆಪಿಯಲ್ಲೇ ಅಸಮಧಾನ ಭುಗಿಲೆದ್ದಿದೆ.

ಬಿ.ಸಿ ಪಾಟೀಲ್ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ರಾಜ್ಯಸಭಾ ಸದಸ್ಯ, ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣಾ ಕಡಾಡಿ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಇಗಾರರೊಂದಿಗೆ ಮಾತನಾಡಿದ ಅವರು, ರೈತರು ಸ್ವಾಭಿಮಾನಿಗಳು, ಎಂದಿಗೂ ರೈತರು ಹೇಡಿಗಳಾಗಿಲ್ಲ. ಮಾತಿನ ಭರದಲ್ಲಿ ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿರಬಹುದು. ಕೃಷಿ ಸಚಿವರಿಗೆ ತಮ್ಮ ಹೇಳಿಕೆ ವಾಪಸ್ ಪಡೆಯಲು ಮನವಿ ಮಾಡುತ್ತೇವೆ ಎಂದರು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಅರ್ಥದಲ್ಲಿ ಹೇಳಲು ಹೋಗಿ ಅಪಾರ್ಥ ಸೃಷ್ಟಿಯಾಗಿದೆ. ಕೃಷಿ ನಂಬಿದ ರೈತ ಸ್ವಾಭಿಮಾನಿ, ಯಾರ ಬಳಿಯೂ ಕೈಯೊಡ್ಡಿ ಬದುಕಲ್ಲ. ಇನ್ನೊಬ್ಬರಿಗೆ ಅನ್ನ ಕೊಟ್ಟು ತಾನು ಸಹ ಬದುಕಿದಂತಹ ಸ್ವಾಭಿಮಾನಿ. ರೈತರು ಯಾವತ್ತೂ ಹೇಡಿಗಳು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಕೃಷಿ ಸಚಿವರು ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಕಳಕಳಿ ಇಟ್ಟುಕೊಂಡು ಹೇಳಲು ಹೋಗಿದ್ದಾರೆ. ಈ ವೇಳೆ ಎಡವಟ್ಟಿನ ಮಾತನ್ನಾಡಿದ್ದಾರೆ ಎನಿಸುತ್ತದೆ.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕಾಯ೯ಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆಗಳಲ್ಲಿ ಸಿಲುಕಿರುವ ರೈತರು ಶ್ರಮವಹಿಸಿ ಸಮಸ್ಯೆಗಳ ಸುಳಿಯಿಂದ ಹೊರಬರುವಂತಾಗಬೇಕು. ಅದು ಬಿಟ್ಟು ಹೇಡಿಗಳಂತೆ ಸಾವಿಗೆ ಶರಣಾಗಬಾರದು. ಹೆಂಡತಿ, ಮಕ್ಕಳನ್ನು ನೋಡಿಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಳ್ಳುವಾತ ಹೇಡಿ ಎಂದು ಹೇಳಿದ್ದರು. ಭೂಮಿಯನ್ನು ನಂಬಿಕೊಂಡು ಜೀವನದಲ್ಲಿ ಮುಂದೆ ಬಂದ ಅನೇಕರು ನಮ್ಮ ಮುಂದಿದ್ದಾರೆ. ಹೀಗಿರುವಾಗ ಸಮಸ್ಯೆ ಇದೆ ಎಂದು ಸಾವಿಗೆ ಶರಣಾಗುವುದು ಎಷ್ಟು ಸರಿ? ಎಂದು ಸಚಿವ ಪಾಟೀಲ್ ಪ್ರಶ್ನಿಸಿದರು.

ಈಸಬೇಕು, ಇದ್ದು ಜಯಿಸಬೇಕು ಎಂದು ಸಂದೇಶ ನೀಡಿದ ಸಚಿವ ಪಾಟೀಲ್, ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಅದು ಹೇಡಿಗಳ ಕೆಲಸ. ಸಕಾ೯ರ ಸದಾ ರೈತರ ನೆರವಿಗೆ ಬದ್ಧವಾಗಿದೆ, ಯಾರೂ ಸಮಸ್ಯೆಗಳಿಗೆ ಹೆದರಬೇಕಾಗಿಲ್ಲ ಎಂದು ಸಚಿವರು ಭರವಸೆ ನೀಡಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights