Banking : ಠೇವಣಿದಾರರಿಗೆ ನಾಮ – ಠೇವಣಿಗಳ ಮೇಲೆ ಬಡ್ಡಿ ಇಳಿಸಿದ ಸ್ಟೇಟ್ ಬ್ಯಾಂಕ್…

ಲಾಕ್‌ಡೌನ್ ಸಂಕಷ್ಟದಲ್ಲಿ ಠೇವಣಿದಾರರಿಗೆ SBI ಮರ್ಮಾಘಾತ ನೀಡಿದೆ. ಅವಧಿ ಠೇವಣಿಗಳ ಮೇಲಿನ ಬಡ್ಡಿಯನ್ನು ಬ್ಯಾಂಕು ಇಳಿಸಿದೆ. ರಿಸರ್ವ್ ಬ್ಯಾಂಕು ರೆಪೊ ದರಗಳನ್ನು ಕಡಿತ ಮಾಡಿದ ಬೆನ್ನಲ್ಲಿಯೇ ಎಸ್ಬಿಐ ಠೇವಣಿದಾರರಿಗೆ ನಾಮ ಹಾಕಿದೆ. ಎಲ್ಲ ಬಗೆಯ ಠೇವಣಿಗಳ ಮೇಲಿನ ಬಡ್ಡಿಯನ್ನು ಶೇ. 0.4ರಷ್ಟು ಇಳಿಸಿದೆ.

ಮೇ ತಿಂಗಳೊಂದರಲ್ಲಿಯೇ ಎರಡನೇ ಬಾರಿಗೆ ಬಡ್ಡಿ ಇಳಿಕೆಯಾಗಿದ್ದು ಠೇವಣಿದಾರರು ಕಂಗಾಲು ಬಡಿಯುವಂತಾಗಿದೆ. ಮೇಲ 12ರಂದು ಮೊದಲ ಕಂತಿನಲ್ಲಿ ಠೇವಣಿ ಮೇಲಿನ ಬಡ್ಡಿ ಇಳಿಸಲಾಗಿತ್ತು. ಹೊಸ ಬಡ್ಡಿ ದರ ಬುಧವಾರದಿಂದಲೇ ಚಾಲ್ತಿಗೆ ಬಂದಿದ್ದು, ಹೊಸ ಠೇವಣಿಗಳು ಹಾಗೂ ನವೀಕರಣಗೊಳ್ಳುವ ಠೇವಣಿಗಳು ಹೊಸ ದರದಲ್ಲಿ ವ್ಯವಹರಿಸಲಿವೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಏಳು ದಿನಗಳ ಕನಿಷ್ಟ ಅವಧಿಯ ಠೇವಣಿ ಮೇಲೆ ಈವರೆಗೆ ಶೇ. 3.3 ಬಡ್ಡಿ ದುಡಿಯುತ್ತಿದ್ದ ಠೇವಣಿದಾರರು ಇನ್ನು ಮುಂದೆ ಶೇ. 2.9ರ ಬಡ್ಡಿಗೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ. ಹಿರಿಯ ನಾಗರಿಕರನ್ನು ಸಹ ಬಡ್ಡಿ ಇಳಿಕೆ ಕಾಡಲಿದೆ. ಹಿರಿಯ ನಾಗರಿಕರು ಇಡುವ ಎಲ್ಲ ಬಗೆಯ ಠೇವಣಿಗಳ ಮೇಲಿನ ಬಡ್ಡಿಯನ್ನು ಸಹ ಕಡಿತ ಮಾಡಲಾಗಿದೆ.

ಅತಿ ಹೆಚ್ಚಿನ ಅಂದರೆ ಶೇ. 7.75 ಬಡ್ಡಿ ನೀಡುತ್ತಿದ್ದ ಆರ್‍ಬಿಐನ ಸಣ್ಣ ಉಳಿತಾಯ ಯೋಜನೆಯನ್ನು ಸರಕಾರ ಸ್ಥಗಿತಗೊಳಿಸಿದ ಬೆನ್ನಲ್ಲಿಯೇ ಈಗ ಎಸ್ಬಿಐ ಈ ಕ್ರಮಕ್ಕೆ ಮುಂದಾಗಿದೆ. SBI ಕ್ರಮವನ್ನೇ ಮೇಲ್ಪಂಕ್ತಿ ಎಂದು ಉಳಿದ ಬ್ಯಾಮಕುಗಳು ಶೀಘ್ರದಲ್ಲಿಯೇ ತಮ್ಮ ಗ್ರಾಹಕರಿಗೆ ಬಡ್ಡಿ ಇಳಿಕೆಯ ಶಾಕ್ ನೀಡಲು ತುದಿಗಾಲ ಮೇಲೆ ನಿಂತಿವೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights