Bangalore: ಗಲಭೆಕೋರರು ಹೊರಗಿನಿಂದ ಬಂದವರು; ನಾವು ಸೌಹಾರ್ದತೆ ಬಯಸುತ್ತೇವೆ: ಡಿಜಿಹಳ್ಳಿ ನಿವಾಸಿಗಳು

ಡಿಜಿ ಹಳ್ಳಿಯಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲಿನ ದಾಳಿ ಮತ್ತು ಅಲ್ಲಿಯ ಗಲಬೆಗೆ ಕಾರಣ ಹೊರಗಿನಿಂದ ಬಂದವರು. ಸ್ಥಳೀಯರು ಹಿಂಸೆಯಲ್ಲಿ ತೊಡಗಿಲ್ಲ. ನಾವು ಮೊದಲಿನಿಂದಲೂ ಎಲ್ಲರೊಂದಿಗೆ ಸೌಹಾರ್ದತೆಯಿಂದ ಜೀವಿಸುತ್ತಿದ್ದೇವೆ. ಇದಕ್ಕೆ ಕಾರಣ ಹೊರಗಿನ ಕಿಡಿಗೇಡಿಗಳು ಎಂದು ಡಿಜಿ ಹಳ್ಳಿ ಮುಸ್ಲೀಂ ನಿವಾಸಿಗಳು ಹೇಳಿದ್ದಾರೆ.

ಹೊರಗಿನಿಂದ ಬಂದ ಗಲಭೆಕೋರರು ಏಕಾಏಕಿ ದಾಳಿ ನಡೆಸಿದ್ದು, ಪೊಲೀಸರಿಗೆ ಮಾಹಿತಿ ನೀಡವಷ್ಟರಲ್ಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ದಾಳಿ ನಡೆಸಿದ್ದರು. ಸ್ಥಳೀಯರಿಗೆ ಶಾಸಕರ ಮೇಲೆ ಗೌರವ ಮತ್ತು ಪ್ರೀತಿ ಇದೆ ಅವರಿಗೆ ಕೆಡಕು ಬಯಸುವವರು ನಾವಲ್ಲ. ನವೀನ್ ಮಾಡಿದ ತಪ್ಪಿಗೆ ಆತನಿಗೆ ಶಿಕ್ಷೆ ಆಗಬೇಕೇ ಹೊರತು, ಅದಕ್ಕಾಗಿ ಗಲಬೆ ಮಾಡುವುದು ಸರಿಯಲ್ಲ ಎಂದು ಗಲಭೆ ದೃಶ್ಯವನ್ನು ಪ್ರತ್ಯಕ್ಷವಾಗಿ ನೋಡಿದ ಡಿಜೆ ಹಳ್ಳಿ ನಿವಾಸಿಯೊಬ್ಬರು ಹೇಳಿದ್ದಾರೆ.

ಸ್ಥಳೀಯರ ಬಹುತೇಕ ಜನರಿಗೆ ಶಾಸಕರು ಕುಟುಂಬ ಸದಸ್ಯರಾಗಿದ್ದರು. ಅಣ್ಣನ ಬೆಂಬಲಿಗರು ನಾವು. ಅವರಿಗೆ ಸಮಸ್ಯೆಯಾಗುವ ಬಗ್ಗೆ ಆಲೋಚನೆಯನ್ನಾದರೂ ನಾವು ಹೇಗೆ ಮಾಡಲು ಸಾಧ್ಯ ಎಂದು ಕೇಬಲ್ ಆಪರೇಟರ್ ಫೈರೋಜ್ ಅವರು ಹೇಳಿದ್ದಾರೆ.

ಅಣ್ಣ ಅಖಂಡ ಶ್ರೀನಿವಾಸ ಮೂರ್ತಿಯವರು ಅತ್ಯಂತ ಪ್ರಖ್ಯಾತ ರಾಜಕಾರಣಿ. ಧರ್ಮ ಹಾಗೂ ಶ್ರೀಮಂತಿಕೆಯ ಆಧಾರದ ಮೇಲೆ ಅವರು ಎಂದಿಗೂ ಜನರನ್ನು ಪ್ರತ್ಯೇಕವಾಗಿ ನೋಡಿಲ್ಲ. ಅಣ್ಣನಿಗಾಗಿ ನಾವು ಮತ ಹಾಕಿದ್ದೇವೆ. ಪಕ್ಷದ ಪ್ರತಿನಿಧಿಯಾಗಿದ್ದಾರೆಂದು ಅಲ್ಲ. ಬಕ್ರೀದ್ ಹಬ್ಬದಂದು ಅಣ್ಣ ಟ್ಯಾನರಿ ರಸ್ತೆ ವೃತ್ತದಲ್ಲಿ ನಿಂತು ಪ್ರತೀಯೊಬ್ಬರಿಗೂ ಶುಭಾಶಯ ಕೋರಿದ್ದರು. ಗಣೇಶ ಹಾಗೂ ಕ್ರಿಸ್ಮಸ್ ಹಬ್ಬದಂದೂ ಜನರಿಗೆ ಶುಭಾಶಯಗಳನ್ನು ಕೋರಿದ್ದಾರೆಂದು ಫೈರೋಜ್ ತಿಳಿಸಿದ್ದಾರೆ.

“ಯಾರೋ ಒಬ್ಬ ಕೋಮು ವಿರೋಧಿ ಅನ್ಯ ಧರ್ಮದ ವಿರುದ್ಧ ಮಾಡುವಂತಹ ಕೃತ್ಯಗಳಿಂದ ಇಡೀ ಸಮುದಾಯವನ್ನು ಹೊಣೆಯನ್ನಾಗಿಸಬಾರದು. ನವೀನ್ ಎಂಬಾತನ ತಪ್ಪಿಗೆ ಆತನಿಗೆ ಶಿಕ್ಷೆಯಾಗಬೇಕು. ಆದರೆ, ಅದು ಎರಡು ಸಮುದಾಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಬಾರದು. ಎಲ್ಲಾ ಸಮುದಾಯಗಳಲ್ಲೂ ಮೂರ್ಖರು ಇದ್ದೇ ಇರುತ್ತಾರೆ. ಅಂತಹ ಮೂರ್ಖರಿಂದ ಆಗುವ ಅನಾಹುತಗಳಿಗೆ ಇಡೀ ಸಮುದಾಯವನ್ನೇ ಹೊಣೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ದೇವಸ್ಥಾನವನ್ನು ರಕ್ಷಿಸಿವುದು ನಮ್ಮ ಕರ್ತವ್ಯ ಎಂದು ಭಾವಿಸುತ್ತೇವೆ” ಎಂದು ಸ್ಥಳೀಯ ನಜೀಮ್ ಹೇಳಿದ್ದಾರೆ.


Read Also: ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ಎಲ್ಲಾ ಕೇಸು ತೆಗೆದು ಹಾಕುತ್ತೇವೆ ಎಂದು ಗೃಹ ಸಚಿವರ ವಿವಾದಾತ್ಮಕ ಹೇಳಿಕೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights