Award : ಕೆನಡಾ ವಾಟರ್‍ ನೆಕ್ಸ್ಟ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡತಿ ಚಿತ್ರಾ ಗೌಡ….

ಕೆನಡಾ ವಾಟರ್‍ ಸಂಸ್ಥೆ ನೀಡುವ ವಾರ್ಷಿಕ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಕನ್ನಡತಿ ಚಿತ್ರಾ ಗೌಡ ಭಾಜನರಾಗಿದ್ದಾರೆ. ಹಾಸನದ ಹೆಮ್ಮೆಯ ಕುವರಿ ಚಿತ್ರಾ ಗೌಡ ಅವರನ್ನು ಪ್ರತಿಷ್ಠಿತ ವಾಟರ್‍ ನೆಕ್ಸ್ಟ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮೈಸೂರಿನ ಜೆಎಸ್‌ಎಸ್‌ನಲ್ಲಿ ಪರಿಸರ ಇಂಜಿನಿಯರಿಂಗ್ ಅಭ್ಯಾಸ ಮಾಡಿರುವ ಚಿತ್ರಾ ಗೌಡ ಸದ್ಯ ಕೆನಡಾದಲ್ಲಿಯೇ ನೆಲೆಸಿದ್ದಾರೆ. ಜಲ ಸಂರಕ್ಷಣೆ, ಜಲಾನಯನ ಮೇಲ್ವಿಚಾರಣೆ ಮತ್ತು ಜಲ ನೀತಿಗೆ ಸಂಬಂಧಿಸಿದಂತೆ ಚಿತ್ರಾ ಕಳೆದ ಎರಡು ದಶಕದಿಂದ ಕೆನಡಾದ ಸರಕಾರಿ ಸಂಸ್ಥೆಗಲ ಜೊತೆ ಚಿತ್ರಾ ಕರ್ತವ್ಯ ನಿರ್ವಹಿಸಿದ್ದಾರೆ.

ನೀರಿನ ಕ್ಷೇತ್ರದಲ್ಲಿ ತಂತ್ರಜ್ಞಾನ ಉಪಯೋಗ, ಯೋಜನೆಗಳ ಮೂಲಕ ಕೊಡುಗೆ ನೀಡುವ ಸಾಧಕರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ಕನ್ನಡಿಗರೊಬ್ಬರಿಗೆ ಸಂದಾಯವಾಗುತ್ತಿದೆ.

ಅರಸಿ ಬಮದ ಪ್ರಶಸ್ತಿಯನ್ನು ತಂದೆ ಹಾಲಪ್ಪ ಗೌಡರಿಗೆ ಅರ್ಪಿಸಿರುವ ಚಿತ್ರಾ ಗೌಡ ತಮ್ಮ ಕೆಲಸಕ್ಕೆ ಮನ್ನಣೆ ದೊರೆತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights