ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ ಆಟೋ ಮತ್ತು ಟ್ಯಾಕ್ಸಿ ಚಾಲಕರ ಮುಷ್ಕರ!

ಆಟೋ ಮತ್ತು ಟ್ಯಾಕ್ಸಿ ಚಾಲಕರು ನಾಳೆ ಮುಷ್ಕರಕ್ಕೆ ಕರೆ ಕೊಟ್ಟಿದ್ದು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ಹೀಗಾಗಿ ನಾಳೆ ಆಟೋ ಮತ್ತು ಟ್ಯಾಕ್ಸಿ ಲಭ್ಯವಿರುವುದಿಲ್ಲ ವಾಹನಗಳ ಸಾಲಮನ್ನಾ ಹಾಗೂ ವಿವಿಧ ಬೇಡಿಕೆಗಳನ್ನು ಏಡೇರಿಸುವಂತೆ ಕುರಿತಾಗಿ 20 ಒಕ್ಕೂಟಗಳು ಸೇರಿ ನಾಳೆ ಮುಷ್ಕರಕ್ಕೆ ಕರೆ ಕೊಟ್ಟಿವೆ.

ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಜಾತಿವಾರು ನಿಗಮಗಳಿಮದ ನೇರ ಸಾಲ ಯೋಜನೆ ಅಡಿಯಲ್ಲಿ ಆಟೋ ಚಾಲಕರಿಗೆ 1,00 ಲಕ್ಷ ಮತ್ತು ಟ್ಯಾಕ್ಸಿ ಚಾಲಕರುಗಳಿಗೆ 200 ಲಕ್ಷ ಸಾಲವನ್ನು ನೀಡಬೇಕು. ಅಸಂಘಟಿತ ಚಾಲಕರ ನಿಗಮ ಸ್ಥಾಮನೆಯಾಗಬೇಕು. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬಿಡಿಎ ಅಥವಾ ಗೃಹ ಮಂಡಳಿಯಿಂದ ಮನೆಗಳನ್ನು ಕಟ್ಟಿಸಿಕೊಡಬೇಕು. ಕೊರೊನಾ ವೈರಸ್ ಸಂಕಷ್ಟದಲ್ಲಿ ಇರುವ ಚಾಲಕರ ವಾಹನಗಳನ್ನು ಅನಧಿಕೃತವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ದುಬಾರಿ ಬಡ್ಡಿ ವಸೂಲಿ ಮಾಡುವುದನ್ನು ನಿಲ್ಲಿಸಬೇಕೆಂಬ ಬೇಡಿಕೆಗಳನ್ನು ಇಟ್ಟುಕೊಂಡು ನಾಳೆ ಮುಷ್ಕರ ನಡೆಯಲಿದೆ.

ಜೊತೆಗೆ ವಾಹನಗಳ ಕಂತುಗಳ ಮೇಲಿನ ಹೆಚ್ಚುವರಿ ಬಡ್ಡಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಬಟ್ಟಿ ವಜಾ ಮಾಡಲು ಸರ್ಕಾರ ಕ್ರಮಕೈಗೊಳ್ಳಬೇಕು. ಹೊಸ ಆಟೋರಿಕ್ಷಾ ಮಾರಾಟ ತೆರಿಗೆಯನ್ನು 17%ರಿಂದ 5%ಕ್ಕೆ ಇಳಿಸಬೇಕು.ನಕಲಿ ಆಟೋ ಪರ್ಮಿಟ್ ಗಳನ್ನು ತಡೆಗಟ್ಟಲು, ಹೊಸದಾಗಿ ಇ-ಪರ್ಮಿಟ್ ಗೆ ಆಧಾರ್ ಲಿಂಕ್ ಹಾಗೂ ಮಾಲೀಕನೇ ಖುದ್ದು ಹೆಬ್ಬೆಟ್ಟು ಗುರುತು ನೀಡುವುದನ್ನು ಕಡ್ಡಾಯಗೊಳಿಸಬೇಕು ಎನ್ನುವ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights