ಅಸ್ಸಾಂ; 90 ಮತಗಳಿದ್ದ ಬೂತ್‌ನಲ್ಲಿ 181 ಮತ ಚಲಾವಣೆ; 06 ಅಧಿಕಾರಿಗಳ ಅಮಾನತು!

ಅಸ್ಸಾಂನಲ್ಲಿ ಏಪ್ರಿಲ್‌ 01 ರಂದು ಎರಡನೇ ಹಂತದ ಮತದಾನ ಪಡೆದಿತ್ತು. ಈ ವೇಳೆ ಮತದಾನಕ್ಕೆ ಒಳಪಟ್ಟಿದ್ದ ದಿಮಾ ಹಸಾವೂ ಜಿಲ್ಲೆಯಲ್ಲಿನ ಮತಗಟ್ಟೆಯೊಂದರಲ್ಲಿ ಅಕ್ರಮ ಮತದಾನ ನಡೆದಿರುವುದು ಬೆಳಕಿಗೆ ಬಂದಿದೆ. ಹಫ್ಲಾಂಗ್‌ ವಿಧಾನಸಭಾ ಕ್ಷೇತ್ರದ ಬೂತ್‌ ಸಂಖ್ಯೆ 107(ಎ)ನಲ್ಲಿ ಕೇವಲ 90 ನೊಂದಾಯಿತ ಮತದಾರರಿದ್ದಾರೆ. ಆದರೆ, ಆ ಬೂತ್‌ನಲ್ಲಿ 181 ಮತಗಳು ಚಲಾವಣೆಯಾಗಿರುವುದು ಬೆಳಕಿಗೆ ಬೆಂದಿದೆ. ಈ ಪ್ರಕರಣದಲ್ಲಿ ಮತದಾನದ ವೇಳೆ ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸಿದ್ದ 06 ಅಧಿಕಾರಿಗಳನ್ನು ಚುನಾವಣಾ ಆಯೋಗವು ಅಮಾನತುಗೊಳಿಸಿದೆ.

ಈ ಕ್ಷೇತ್ರದಲ್ಲಿ ಕೆಳದ ಚುನಾವಣೆಯಲ್ಲಿ (2016) ಬಿಜೆಪಿಯ ಬಿರ್ ಭದ್ರಾ ಹಗ್ಗರ್ ಗೆದ್ದಿದ್ದರು. ಇದೀಗ ಆ ಕ್ಷೇತ್ರದ ಬೂತ್‌ವೊಂದರ ಮತದಾನದಲ್ಲಿ ಅಕ್ರಮ ನಡೆದಿದ್ದು, ಇದಕ್ಕೆ ಬಿಜೆಪಿಯೇ ಕಾರಣ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಮುಖ್ಯ ಕೇಂದ್ರಕ್ಕೆ ಸಹಾಯಕ ಮತದಾನ ಕೇಂದ್ರವಾಗಿದ್ದ ಈ ಬೂತ್‌ಗೆ ಮರು-ಮತದಾನದ ಆದೇಶ ಹೊರಡಿಸಲು ಚುನಾವಣಾ ಆಯೋಗ ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ಆದೇಶವನ್ನು ಇನ್ನೂ ಹೊರಡಿಸಬೇಕಿದೆ.

“ಮುಖ್ಯ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಲು ಆಗದ ಮತದಾರರಿಗೆ ಸಹಾಯಕ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡಿದ್ದಾಗಿ ಮತದಾನದ ಕೇಂದ್ರದ ಅಧ್ಯಕ್ಷ ಮತ್ತು ಅಧಿಕಾರಿ ತಮ್ಮ ಹೇಳಿಕೆಗಳಲ್ಲಿ ಒಪ್ಪಿಕೊಂಡಿದ್ದಾರೆ” ಎಂದು ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಕರ್ತವ್ಯ ಲೋಪದ ಆರೋಪದಲ್ಲಿ ಸೀಖೋಸಿಯಮ್ ಲಾಂಗುಮ್ (ಸೆಕ್ಟರ್ ಆಫೀಸರ್), ಪ್ರಹ್ಲಾದ್ ಚ ರಾಯ್ (ಪ್ರೆಸಿಡಿಂಗ್ ಆಫೀಸರ್), ಪರಮೇಶ್ವರ ಚರಂಗ್ಸಾ (1 ನೇ ಮತಗಟ್ಟೆ ಅಧಿಕಾರಿ), ಸ್ವರಾಜ್ ಕಾಂತಿ ದಾಸ್ (2 ನೇ ಮತಗಟ್ಟೆ ಅಧಿಕಾರಿ) ಮತ್ತು ಲಾಲ್ಜಮ್ಲೊ ಥೀಕ್ (3 ನೇ ಮತಗಟ್ಟೆ ಅಧಿಕಾರಿ) ಅವರನ್ನು ಅಮಾನತುಗೊಳಿಸಲಾಗಿದೆ.

ಅಸ್ಸಾಂನಲ್ಲಿ ಮಾರ್ಚ್ 27 ರಂದು ಪ್ರಾರಂಭವಾದ ಮೂರು ಹಂತದ ವಿಧಾನಸಭಾ ಚುನಾವಣೆಯಲ್ಲಿ ಎರಡು ಹಂತಗಳು ಮಗಿದಿವೆ. ಮೂರನೇ ಮತ್ತು ಕೊನೆಯ ಹಂತದ ಮತದಾನ ಇಂದು (ಏಪ್ರಿಲ್ 6) ನಡೆಯುತ್ತಿದೆ.

ಇದನ್ನೂ ಓದಿ: ಕರ್ನಾಟಕದ ಮಾಧ್ಯಮಕ್ಕೆ ಸಿಂಗಂ ಆಗಿದ್ದ ಅಣ್ಣಾಮಲೈ; ಅಸಲಿಗೆ ಸಾಧಿಸಿದ್ದು ಶೂನ್ಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights