ಮಂಗಳೂರಿನ ಪಿಎಚ್‌ಡಿ ವಿದ್ಯಾರ್ಥಿನಿಗೆ ಕಿರುಕುಳ : ಪ್ರೊಫೆಸರ್ ಅರೆಸ್ಟ್..!

ಮಂಗಳೂರಿನ ವಿದ್ಯಾರ್ಥಿನಿಗೆ ಪ್ರೊಫೆಸರ್ ಕಿರುಕುಳ ನೀಡಿ ಅರೆಸ್ಟ್ ಆದ ಪ್ರಕರಣ ಬೆಳಕಿಗೆ ಬಂದಿದೆ.

ಮಂಗಳೂರಿನ ವಿದ್ಯಾರ್ಥಿನಿ ಪ್ರಾಧ್ಯಾಪಕಿಯೊಬ್ಬರ ಮಾರ್ಗದರ್ಶನದಲ್ಲಿ ಪಿಎಸ್ ಡಿ ಮಾಡುತ್ತಿದ್ದಳು. ಈ ಮಧ್ಯೆ ಪರಿಚಯವಾದ ಸುಧೀರ್ ತನ್ನನ್ನು ಮಾರ್ಗದರ್ಶಕನಾಗಿ ನೇಮಿಸುವಂತೆ ಒತ್ತಾಯಿಸಿದ್ದನು. ಆದರೆ ವಿ.ವಿಯ ಅನುಮತಿ ಕೇಳಿದಾಗ ಆತನಿಗೆ ಅರ್ಹತೆಯಿಲ್ಲ ಎಂದು ನಿರಾಕರಿಸಲಾಗಿತ್ತು.

ಆದರೆ ಬಳಿಕವೂ ಸುಧೀರ್ ನಿಂದ ವಿದ್ಯಾರ್ಥಿನಿ ಮತ್ತು ಮನೆಯವರಿಗೆ ಕಿರುಕುಳ ನೀಡುತ್ತಿದ್ದನು.

ವಿದ್ಯಾರ್ಥಿನಿ ಇದನ್ನು ನಿರಾಕರಿಸಿದಾಗ ಆತ ಆಕೆಯ ಫೋಟೋಗಳನ್ನು ಎಡಿಟ್ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದನು. ಈ ಸಂಬಂಧ ವಿದ್ಯಾರ್ಥಿನಿ ಪೋಷಕರು ಮಂಗಳೂರಿನಲ್ಲಿ ದೂರು ದಾಖಲಿಸಿದ್ದರು.

ವಿದ್ಯಾರ್ಥಿನಿ ಪೋಷಕರ ದೂರಿನ ಹಿನ್ನೆಲೆ ಮಂಗಳೂರು ಪೊಲೀಸರು ಆರೋಪಿ ಆಂಧ್ರಪ್ರದೇಶದ ಾಚಾರ್ಯ ನಾಗಾರ್ಜುನ ವಿ.ವಿಯ ಪ್ರಾಧ್ಯಾಪಕ ಡಾ. ಕೊಂಡೂರು ಸುಧೀರ್ ಕುಮಾರ್ ಅರೆಸ್ಟ್ ಮಾಡಿದ್ದಾರೆ.

ಇದೀಗ ಪ್ರಕರಣ ಸಂಬಂಧ ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights