ಬಾಲಿವುಡ್ ಡ್ರಗ್ಸ್ ಕೇಸ್ : ನಟ ಅರ್ಮಾನ್ ಕೊಹ್ಲಿಗೆ 14 ದಿನಗಳ ನ್ಯಾಯಾಂಗ ಬಂಧನ!

ಬಾಲಿವುಡ್ ಡ್ರಗ್ಸ್ ಕೇಸ್ ನಲ್ಲಿ ಬಂಧಿತನಾಗಿರುವ ನಟ ಅರ್ಮಾನ್ ಕೊಹ್ಲಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾದ ಅರ್ಮಾನ್ ಕೊಹ್ಲಿಯನ್ನು(49) ಮುಂಬೈ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ದಾಳಿ ವೇಳೆ ನಟ ಅರ್ಮಾನ್ ಕೊಹ್ಲಿ ಮನೆಯಿಂದ ಒಂದಕ್ಕಿಂತ ಹೆಚ್ಚು ಗ್ರಾಂ ಕೊಕೇನ್ ವಶಪಡಿಸಿಕೊಂಡಿತ್ತು. ಬಳಿಕ ಅರ್ಮಾನ್ ನ್ನು ವಿಚಾರಣೆ ಮಾಡಿ ಆಗಸ್ಟ್ 28 ರಂದು ಬಂಧಿಸಲಾಗಿತ್ತು. ಬುಧವಾರ (ಸೆಪ್ಟೆಂಬರ್ 1) ಆತನ ಎನ್ಸಿಬಿ ಕಸ್ಟಡಿಯ ಸಮಯ ಅಂತ್ಯವಾಗಿದ್ದು ಇಂದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಜೈಲಿಗೆ ಕಳುಹಿಸಿದೆ. ನಟನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೂಡಲೇ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಕೊಹ್ಲಿ ಸಲ್ಲಿಸಿದ್ದಾರೆ.

ಕೊಹ್ಲಿ ಅಂತಾರಾಷ್ಟ್ರೀಯ ಡ್ರಗ್ ಸಿಂಡಿಕೇಟ್ ನೊಂದಿಗೆ ಸಂಬಂಧ ಹೊಂದಿದ್ದರು ಎಂಬುದಕ್ಕೆ ಪುರಾವೆಗಳಿವೆ ಎಂದು ಎನ್‌ಸಿಬಿ ನ್ಯಾಯಾಲಯಕ್ಕೆ ತಿಳಿಸಿದೆ. ನಟನ ಜೊತೆಗೆ ಎನ್‌ಸಿಬಿಯಿಂದ ಬಂಧಿತನಾದ ಮಾದಕವಸ್ತು ಪೆಡ್ಲರ್ ಅಜಯ್ ರಾಜು ಸಿಂಗ್ ನನ್ನು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಅರ್ಮಾನ್ ಕೊಹ್ಲಿ ಬಿಗ್ ಬಾಸ್ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದಾರೆ. ಅವರು ಜಾನಿ ದುಷ್ಮಾನ್ ಮತ್ತು ಪ್ರೇಮ್ ರತನ್ ಧನ್ ಪಾಯೋ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights