Fact Check: ಬಿಹಾರ ಚುನಾವಣೆಯಲ್ಲಿ ಮತಯಂತ್ರಗಳನ್ನು ಕದಿಯಲಾಗಿತ್ತಾ?

2020 ರ ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರ (EVM)ಗಳನ್ನು ಕಳವು ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ EVM ಗಳನ್ನು ಅರಣ್ಯ ಪ್ರದೇಶದ ಮೂಲಕ ಸಾಗಿಸುವ ವ್ಯಕ್ತಿಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಸ್ಟೆಫ್ಫಿ ಎಂಬುವವರು ಈ ಚಿತ್ರಗಳನ್ನು ಹಂಚಿಕೊಂಡು, “EVM ಯಂತ್ರಗಳನ್ನು ಮತ್ತೆ ಪರಿಶೀಲಿಸಬೇಕು. ನಿತೀಶ್ ಕುಮಾರ್ ಜೈಲಿಗೆ ಹೋಗುತ್ತಾರೆಯೇ? ಬಿಹಾರದ ಜನತೆ ಕೇಳುತ್ತಿದ್ದಾರೆ, EVM ಯಂತ್ರವನ್ನು ಕದ್ದ ನಂತರ ಅವನು ಎಲ್ಲಿಗೆ ಹೋಗುತ್ತಿದ್ದಾನೆ? ಮೋದಿ ಆಯೋಗ ಕಳ್ಳ” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಹೇಳಿಕೆ ಮತ್ತು ಚಿತ್ರಗಳಿರುವ ಈ ಪೋಸ್ಟನ್ನು ಫೇಸ್‌ಬುಕ್‌ನಲ್ಲಿಯೂ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅಜಯ್ ಪ್ರತಾಪ್ ಸಿಂಗ್ ಎಂಬುವವರು, “ದೇಶದಲ್ಲಿ ಏನಾಗುತ್ತಿದೆ? ನಿಮಗೆ ತಿಳಿದಿದೆಯೇ ಅಥವಾ ನೀವು ಮಲಗಿದ್ದೀರಾ, ಕಳ್ಳರು ಸಾರ್ವಜನಿಕವಾಗಿ ಕದಿಯುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಹೀಗೆ ನೂರಾರು ಜನರು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್:

ಈ ಚಿತ್ರಗಳನ್ನು ಆಧರಿಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, 2019 ರ ಅಕ್ಟೋಬರ್‌ ತಿಂಗಳಿನ ಎರಡು ಟ್ವೀಟ್‌ಗಳು ಪತ್ತೆಯಾದವು. ಅದರಲ್ಲಿ ಈ ಫೋಟೋಗಳು ರಾಯಗಡ್‌ನದ್ದು ಎಂದು ಹೇಳಿದೆ. ಹಾಗಾಗಿ ರಾಯಗಡ್‌ ಮತದಾನದ ವಿವರವನ್ನು ಒಳಗೊಂಡಿರುವ ಹೆಚ್ಚಿನ ಟ್ವೀಟ್‌ಗಳಿಗಾಗಿ ಹುಡುಕಾಡಿದಾಗ, ರಾಯಗಡ್‌ನ ಜಿಲ್ಲಾ ಮಾಹಿತಿ ಕಚೇರಿಯ ಅಧಿಕೃತ ಹ್ಯಾಂಡಲ್ ಪೋಸ್ಟ್ ಮಾಡಿದ ಟ್ವೀಟ್ ಪತ್ತೆಯಾಯಿತು.

https://twitter.com/InfoRaigad/status/1185897091781914624?s=20

ಇದರಲ್ಲಿ, “ಕಲ್ಕರೈನಂತಹ ದೂರದ ದುರ್ಗಮ ಪ್ರದೇಶಗಳ ಮತಗಟ್ಟೆಗಳನ್ನು ತಲುಪುತ್ತಿರುವ ಸಿಬ್ಬಂದಿ. ನಾವು ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ” ಎಂದು ಬರೆಯಲಾಗಿದೆ.

ಹಾಗಾಗಿ ಇದರಿಂದ ತಿಳಿದುಬರುವುದೇನೆಂದರೆ, ಈ ಚಿತ್ರಗಳು ಬಿಹಾರ ಚುನಾವಣೆಯಲ್ಲಿ ಮತಯಂತ್ರಗಳನ್ನು ಕದಿಯಲಾಗುತ್ತಿದೆ ಎಂದು ಮಾಡಿರುವ ಆರೋಪ ಸುಳ್ಳಾಗಿದ್ದು, ಇದು ಚುನಾವಣಾ ಸಿಬ್ಬಂದಿಯು ಮತಯಂತ್ರಗಳೊಟ್ಟಿಗೆ ಮತಗಟ್ಟೆಯನ್ನು ತಲುಪುತ್ತಿರುವಾಗ ತೆಗೆದ ಚಿತ್ರವಾಗಿದೆ ಎಂಬುದು ಸ್ಪಷ್ಟವಾಗಿ ತಿಳಿದುಬಂದಿದೆ.


ಇದನ್ನೂ ಓದಿ: POKಯಲ್ಲಿ ಭಾರತೀಯ ಸೇನೆ ‘ಪಿನ್‌ಪಾಯಿಂಟ್ ಏರ್‌ಸ್ಟ್ರೈಕ್’ ಮಾಡಿಲ್ಲ: ಲೆಫ್ಟಿನೆಂಟ್ ಜನರಲ್ ಸ್ಪಷ್ಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights