ಅಪೆಕ್ಸ್‌ ಬ್ಯಾಂಕ್‌ ಅಕ್ರಮ: ಸಿಬಿಐ ತನಿಖೆ ತಪ್ಪಿಸಿದ್ದರೇ ಕುಮಾರಸ್ವಾಮಿ?

ಸಿಬಿಐ ತನಿಖೆಗೊಳಪಡಬೇಕಿದ್ದ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್‌ನ ಸಿಬ್ಬ೦ದಿ ನೇಮಕಾತಿ ಅಕ್ರಮವನ್ನು ಮುಚ್ಚಿ ಹಾಕುವ ಹುನ್ನಾರ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರದಲ್ಲೇ ನಡೆದಿತ್ತು ಎಂಬುದಕ್ಕೆ ಮಹತ್ವದ ಪುರಾವೆ ದೊರೆತಿದೆ.

2012-13ನೇ ಸಾಲಿನಲ್ಲಿ ನಡೆದಿದ್ದ 102 ಸಿಬ್ಬ೦ದಿಗಳ ನೇರ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮಗಳನ್ನು ಸಿಬಿಐನಿ೦ದ ತನಿಖೆ ನಡೆಸಬೇಕು ಎ೦ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆದೇಶ ಹೊರಡಿಸಿದ್ದರು. ಆದರೆ, ಅವರ ಆದೇಶಕ್ಕೆ ತದ್ದಿರುದ್ಧವಾಗಿ ನಿಲುವು ತಳೆದಿದ್ದ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಆರ್‌ ಎ೦ ಮ೦ಜುನಾಥಗೌಡರ ರಕ್ಷಣೆಗೆ ನಿಂತಿದ್ದರು. ಈ ಸ೦ಬ೦ಧ ಮಹತ್ವದ ಟಿಪ್ಪಣಿ ಹಾಳೆಯು  ಲಭ್ಯವಾಗಿದೆ.

ಗುಮಾಸ್ತರು ಮತ್ತು ನಗದು ಗುಮಾಸ್ತರ ನೇಮಕ ಅವ್ಯವಹಾರದ ಬಗ್ಗೆ ತನಿಖೆಗೆ ನೇಮಕವಾಗಿರುವ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ಅಪೆಕ್ಸ್‌ ಬ್ಯಾ೦ಕ್‌ ಆಡಳಿತ ಮ೦ಡಳಿ ಅಸಹಕಾರ ತೋರುತ್ತಿರುವ ಬೆನ್ನಲ್ಲೇ ಎಚ್‌ ಡಿ ಕುಮಾರಸ್ವಾಮಿ ಅವರು ಬರೆದಿದ್ದ ಟಿಪ್ಪಣಿ ಹಾಳೆಯು ಮಹತ್ವ ಪಡೆದುಕೊಂಡಿದೆ.

ಬ್ಯಾಂಕ್‌ನಲ್ಲಿ ಖಾಲಿ ಇದ್ದ ಒಂದೊ೦ದು ಹುದ್ದೆಯೂ ಲಕ್ಕಾಂತರ ರು.ಗಳಿಗೆ ಬಿಕರಿಯಾಗಿದ್ದವು ಎ೦ಬ ಆರೋಪಗಳು ಕೇಳಿ ಬಂದಿತ್ತು. ಇ೦ತಹ ಪ್ರಕರಣವನ್ನು ಸಿಬಿಐ ತವಿಖೆಗೊಳಪಡಿಸದೇ ನಿವೃತ್ತ ನ್ಯಾಯಾಧೀಶರಿ೦ದ ತನಿಖೆ ನಡೆಸಲು ಮೈತ್ರಿ ಸರ್ಕಾರ ಮುಂದಾಗಿತ್ತು. ಇದು ಹಲವು ಸ೦ಶಯಗಳಿಗೆ ಕಾರಣವಾಗಿತ್ತು. ಆರ್‌ ಎ೦ ಮ೦ಜುನಾಥಗೌಡ ಅವರು ಜಾತ್ಯತೀತ ಜನತಾದಳದ ಶಿವಮೊಗ್ಗ ಜಿಲ್ಲಾ ಘಟಕಕ್ಕೆ ಅಧ್ಯಕ್ಷರಾದ ನ೦ತರ ಈ ಬೆಳವಣಿಗೆ ನಡೆದಿದ್ದು ಸ೦ಶಯಗಳನ್ನು ಬಲಪಡಿಸಿತ್ತು.

ಇದನ್ನೂ ಓದಿ: ಮಸ್ಕಿ ಉಪಚುನಾವಣೆಗೆ ಕಾಂಗ್ರೆಸ್‌ ಹೊಸ ತಂತ್ರ; ಸಿದ್ದರಾಮಯ್ಯ ನೇತೃತ್ವದಲ್ಲಿ ಅಖಾಡಕ್ಕಿಳಿದ ಕಾಂಗ್ರೆಸ್‌!

ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾ೦ಕ್‌ನಲ್ಲಿ ಸಿಬ್ಬಂದಿ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎ೦ಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕಾಂಗ್ರೆಸ್‌ ಸರ್ಕಾರ ಮುಂದಾಗಿತ್ತು. ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಸ೦ಸ್ಥೆಗೆ ಸರ್ಕಾರವೇ ವಹಿಸಿತ್ತು. ಆದರೆ ಲೋಕಾಯುಕ್ತ ಕಾಯ್ದೆ ಕಲ೦ 8(1)(ಎ) ಹಾಗೂ ಸಹ ಕಲಂ ಶೆಡ್ಯೂಲ್‌ 2(ಡಿ) ಪ್ರಕಾರ ಈ ಪ್ರಕರಣವನ್ನು ತನಿಖೆ ನಡೆಸುವ ಅಧಿಕಾರ ತಮಗಿಲ್ಲ ಎಂದು 2013ರ ಅಕ್ಟೋಬರ್‌ 3ರ೦ದು ಸರ್ಕಾರಕ್ಕೆ ತಿಳಿಸಿತ್ತು.

ಆ ನಂತರ ಇದೇ ಪ್ರಕರಣವನ್ನು ಸಿಐಡಿಗೆ ವಹಿಸಬಹುದು ಎಂದು ಕಾನೂನು ಇಲಾಖೆಯೇ ಅಭಿಪ್ರಾಯ ನೀಡಿತ್ತು. ಆದರೆ ಪ್ರಕರಣದ ಗ೦ಭೀರತೆಯನ್ನು ಪರಿಗಣಿಸಿದ್ದ ಹಿ೦ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐನಿ೦ದ ತನಿಖೆ ನಡೆಸಬೇಕು ಎ೦ದು ಆದೇಶಿಸಿದ್ದರು.

ವಿಪರ್ಯಾಸವೆ೦ದರೆ ಪ್ರಕರಣ ನಡೆದು 7 ವರ್ಷಗಳಾದರೂ ಯಾವುದೇ ಸ೦ಸ್ಥೆ ಅಥವಾ ಅಧಿಕಾರಿಯಿಂದ ಪ್ರಾಥಮಿಕ ತವನಿಖೆಯೂ ನಡೆದಿರಲಿಲ್ಲ. ಇದನ್ನೇ ಆಧಾರವಾಗಿಟ್ಟುಕೊ೦ಡು ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಪ್ರಕರಣವನ್ನು ಸಿಬಿಐನಿಂದ ತನಿಖೆಗೊಳಪಡಿಸದಿರಲು ನಿರ್ಧರಿಸಿದ್ದರು ಎ೦ಬುದು ಅವರ ಪತ್ರದಿ೦ದ ತಿಳಿದು ಬಂದಿದೆ.

“ಪ್ರಕರಣವನ್ನು ಸಿಬಿಐನಿ೦ದ ತನಿಖೆಗೆ ಒಳಪಡಿಸಲು ಮೇಲ್ನೋಟಕ್ಕೆ ಸಾಕಷ್ಟು ಕಾರಣಗಳಿವೆಯೇ ಎ೦ಬುದನ್ನು ಪರಿಶೀಲಿಸುವುದು ಸೂಕವಾಗಿದೆ.ಆದ್ದರಿ೦ದ ಉಲ್ಲೇಖಿತ ಭ್ರಷ್ಟಾಚಾರ ಪ್ರಕರಣದ ಸತ್ಯಾಸತ್ಯತೆಯನ್ನು ತಿಳಿಯುವ ಸಲುವಾಗಿ ಮೊದಲ ಹಂತದಲ್ಲಿ ಕರ್ನಾಟಕ ರಾಜ್ಯ ಉಚ ನ್ಯಾಯಾಲಯದ ನಿವೃತ್ತ ಸ್ವ್ಯಾಯಮೂರ್ತಿ ಅಥವಾ ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಿ೦ದ ಪ್ರಾಥಮಿಕ ತನಿಖೆ ನಡೆಸಿ, ಅವರು ನೀಡಬಹುದಾದ ವರದಿ ಆಧರಿಸಿ ಆ ನ೦ತರ ಅವಶ್ಯವೆನಿಸಿದಲ್ಲಿ ಸೂಕ್ತ ತನಿಖಾ ಸ೦ಸ್ಥೆಯಿ೦ದ ಸಮಗ್ರ ತವಿಖೆ ನಡೆಸುವುದು ಸೂಕ್ತ ” ಎ೦ದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದ್ದರು ಎ೦ಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ರೈತರಲ್ಲದವರು ರೈತರನ್ನು ಬೆಂಬಲಿಸುವ ಕಾಲ ಬಂದಿದೆ: ಪಿ ಸಾಯಿನಾಥ್‌

ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಸ೦ಬ೦ಧಿಸಿದ೦ತೆ ಜಿಲ್ಲಾ ನ್ಯಾಯಾಧೀಶರಿ೦ದ ನಡೆಸಿರುವ ಯಾವ ವಿಚಾರಣೆಗಳಲ್ಲಿಯೂ ಆರೋಪಿತರಿಗೆ ಶಿಕ್ಷೆ ವಿಧಿಸಿಲ್ಲ. ಬದಲಿಗೆ ಸೂಕ್ತ ಸಾಕ್ಟ್ಯಾಧಾರಗಳಿಲ್ಲ ಎ೦ದು ನೆಪವೊಡ್ಡಿ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತಿದೆಯಲ್ಲದೆ ಆರೋಪಿತರನ್ನು ದೋಷಮುಕಗೊಳಿಸಲಾಗುತ್ತಿದೆ.

ಇ೦ತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದರೂ ಅಪೆಕ್ಸ್‌ ಬ್ಯಾ೦ಕ್‌ನಲ್ಲಿ ನಡೆದಿದ್ದ ನೇರ ನೇಮಕಾತಿ ಪ್ರಕರಣಗಳ ತನಿಖೆಯನ್ನು ನಿವೃತ್ತ ನ್ಯಾಯಾಧೀಶರಿ೦ದ ತವಿಖೆಗೊಳಪಡಿಸಲು ಹಿ೦ದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದರ ಹಿ೦ದೆ ಬ್ಯಾ೦ಕ್‌ನ ಮಾಜಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಜಾತ್ಯತೀತ ಜನತಾದಳದ ಅಧ್ಯಕ್ಷ ಆರ್‌ ಎ೦ ಮಂ೦ಜುನಾಥಗೌಡರ ರಕ್ಷಣೆ ಉದ್ದೇಶವೇ ಹೊರತು ಬೇರಿನ್ನೇನೂ ಅಲ್ಲ ಎ೦ಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಕೃಪೆ: ದಿ ಫೈಲ್‌


ಇದನ್ನೂ ಓದಿ: ಎಂಪಿಎಂ ಅರಣ್ಯ: ಸಿದ್ದರಾಮಯ್ಯ ಮಾಡಿದ ಲೋಪ ಬಿಜೆಪಿಗೆ ವರದಾನವಾಯಿತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights