ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿ ಆತಂಕ : ಸ್ಪೋಟಕ ಹೊತ್ತ ಡ್ರೋನ್ ಪತ್ತೆ…!

ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮುಂದುವರೆದಿದೆ. ಪದೇ ಪದೇ ಗಡಿ ಭಾಗದಲ್ಲಿ ದಾಳಿ ಮಾಡುವ ಪಾತಕಿಗಳು ಹೊಸ ಪ್ಲ್ಯಾನ್ ಮಾಡಿದ್ದಾರೆ. ಭಯೋತ್ಪಾದಕರು ಬಳಸುವ 5 ಕೆಜಿ ಸ್ಫೋಟಕ ಹೊಂದಿರುವ ಡ್ರೋನ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಸ್ಪೋಟಕ ಹೊತ್ತ ಡ್ರೋನ್ ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ. ಗಡಿಯೊಳಗೆ ಆರು ಕಿಲೋಮೀಟರ್ ದೂರದಲ್ಲಿರುವ ಜಮ್ಮು ಜಿಲ್ಲೆಯ ಕಾನಾ ಚಕ್ ಪ್ರದೇಶದಲ್ಲಿ ಹೆಕ್ಸಾಕೊಪ್ಟರ್ ಡ್ರೋನ್ ಅನ್ನು ಪೊಲೀಸರು ಹೊಡೆದುರುಳಿಸಿದ್ದಾರೆ.

ಡ್ರೋನ್ ಚಟುವಟಿಕೆಯ ಹಿಂದೆ ಭಯೋತ್ಪಾದಕ ಸಜ್ಜು ಲಷ್ಕರ್-ಎ-ತೈಬಾ (ಎಲ್‌ಇಟಿ) ಇದೆಯೇ ಮತ್ತು ಹಿಂದಿನ ಪ್ರಕರಣಗಳಂತೆ ಭಯೋತ್ಪಾದಕ ದಾಳಿಗೆ ಈ ಡ್ರೋನ್ ಬಳಸುತ್ತಿದೆಯೇ ಎಂದು ಏಜೆನ್ಸಿಗಳು ತನಿಖೆ ನಡೆಸುತ್ತಿವೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ಡ್ರೋನ್ ಸುಮಾರು 5 ಕೆಜಿ ಸ್ಪೋಟಕಗಳನ್ನು ಸಾಗಿಸುತ್ತಿತ್ತು. ಜೂನ್ 27 ರಂದು ಜಮ್ಮು ವಾಯುನೆಲೆಯಲ್ಲಿ ನಡೆದ ಅವಳಿ ಸ್ಪೋಟದ ನಂತರ ಹಲವಾರು ಡ್ರೋನ್ ಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಕಂಡು ಬಂದಿವೆ.

ಇದೀಗ ಮತ್ತೆ ಡ್ರೋನ್ ಪತ್ತೆಯಾಗಿರುವುದು ಭದ್ರತೆಯ ಕುರಿತು ಆತಂಕ ಸೃಷ್ಟಿಸಿದೆ. ಆ.15ರಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿಯಲ್ಲಿ ಉಗ್ರ ಸಂಘಟನೆಗಳು ಡ್ರೋನ್ ಬಳಸಿ ದಾಳಿ ನಡೆಸುವುದು ಸಾಧ್ಯತೆ ಇದೆ ಎಂದು ದುಪ್ರಚರ ಸಂಸ್ಥೆಗಳು ಮುನ್ನೆಚ್ಚರಿಕೆ ನೀಡಿವೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights