ಅಂಕಲಗಿ ಮಾರಾಮಾರಿ ಪ್ರಕರಣ: ರಮೇಶ್ ಜಾರಕಿಹೊಳಿ ಆಪ್ತ ಸೇರಿ 07 ಜನರ ಬಂಧನ!

ಗೋಕಾಕ್‌ ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ಸೋಮವಾರ ಸಂಜೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಯಾಗಿರುವ ರಾಜು ಬಸವಣ್ಣೆಪ್ಪ ತಳವಾರ ಎಂಬಾತ ಸೇರಿದಂತೆ 7 ಮಂದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ರಾಜು ಬಸವಣ್ಣೆಪ್ಪ ತಳವಾರ ಎಂಬಾತ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ಆಪ್ತ ಎನ್ನಲಾಗಿದೆ.

ರಾಜು ಬಸವಣ್ಣೆಪ್ಪ ಅವರ ಮನೆಯ ಮುಂದೆ ಚಿಕ್ಕೂಗೋಳ ಮನೆತನದ ಯುವಕ ದ್ವಿಚಕ್ರವಾಹನವನ್ನು ವೇಗವಾಗಿ ಚಲಾಯಿಸಿದ್ದ. ಈ ಕಾರಣಕ್ಕೆ ಡಿ.14ರಂದು ಚಿಕ್ಕೂಗೋಳ ಮನೆತನಕ್ಕೆ ಸೇರಿದ 7 ಜನರ ಕಣ್ಣಿಗೆ ಖಾರದ ಪುಡಿ ಎರಚಿ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿತ್ತು. ಈ ಘಟನೆಯ ಪ್ರಮುಖ ಆರೋಪಿ ಎಂದು ರಾಜು ತಳವಾರನನ್ನು ಗುರುತಿಸಲಾಗಿತ್ತು. ಅಲ್ಲದೆ, ಇತರ 25 ಜನರ ವಿರುದ್ಧ ಅಂಕಲಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ಬಂಧಿಸುವುದು ವಿಳಂಬವಾಗುತ್ತಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಎದುರು ಹಲವಾರು ಜನರು ಪ್ರತಿಭಟನೆ ನಡೆಸಿದ್ದರು.

ಜನರ ಪ್ರತಿಭಟನೆಯ ನಂತರ, ಶನಿವಾರ ಮುಂಜಾನೆ ಆರೋಪಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆ ವೇಳೆ ₹ 83 ಲಕ್ಷ ನಗದು ಸಿಕ್ಕಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಲಾಂಗು, ಮಚ್ಚು ಮೊದಲಾದ ಮಾರಕಾಸ್ತ್ರಗಳನ್ನು ಕೂಡ ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಜನವರಿ ಒಂದರಿಂದ ಶಾಲಾ-ಕಾಲೇಜ್ ಆರಂಭಕ್ಕೆ ಸಿಎಂ ಗ್ರೀನ್ ಸಿಗ್ನಲ್…!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights