‘ಆನೇಕಲ್ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಗ್ಗೆ ಮಾಹಿತಿ ಇಲ್ಲ’ – ಎಸ್ ಪಿ ಕೆ. ವಂಶಿಕೃಷ್ಣ

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನ ನಿರ್ಜನ ಪ್ರದೇಶದಲ್ಲಿ ಮೊನ್ನೆ ರಾತ್ರಿ 30-40 ಜನರು ರೇವ್‌ ಪಾರ್ಟಿ ಮಾಡಿದ ಪ್ರಕರಣದಲ್ಲಿ ಡ್ರಗ್ಸ್ ಬಗ್ಗೆ ಮಾಹಿತಿ ಇಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಂಶಿಕೃಷ್ಣ ಹೇಳಿಕೆ ನೀಡಿದ್ದಾರೆ.

ಹೌದು..  ಮೊನ್ನೆ ತಡ ರಾತ್ರಿ ಆನೇಕಲ್ ಬಳಿಯ ಖಾಸಗಿ ರೆಸಾರ್ಟ್‌ನ ನಿರ್ಜನ ಪ್ರದೇಶದಲ್ಲಿ 35-40 ಜನ ಪಾರ್ಟಿ ಮಾಡ್ತಾಯಿದ್ದರು. ರೇವ್‌ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರ ದಾಳಿ ನಡೆಸಿದ್ದು ಡ್ರಗ್ಸ್ ನಶೆಯಲ್ಲಿ ತೇಲುತ್ತಿದ್ದ ಯುವಕ, ಯುವತಿಯರು ಪೊಲೀಸರು ದಾಳಿ ಮಾಡುತ್ತಿದ್ದಂತೆ ಪರಾರಿಯಾಗಿದ್ದರು. ಈ ಪೈಕಿ ಸದ್ಯ ನಶೆಯಲ್ಲಿದ್ದ 28 ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಗೂ 16 ದ್ವಿಚಕ್ರ ವಾಹನ, 7 ಕಾರು ಸೀಜ್ ಮಾಡಿದ್ದಾರೆ.

ಇನ್ನು ರೇವ್‌ ಪಾರ್ಟಿಯಲ್ಲಿ ಗಾಂಜಾ, ಮರಿಜುವಾನ ಸೇರಿದಂತೆ ವಿವಿಧ ಡ್ರಗ್ಸ್ಗಳನ್ನು ಬಳಸಲಾಗುತ್ತಿತ್ತಂತೆ. ರೇವ್ ಪಾರ್ಟಿಯ ಡ್ರಗ್ಸ್ ಜಾಲದಲ್ಲಿ ವಿದ್ಯಾರ್ಥಿಗಳು, ಶ್ರೀಮಂತರ ಮಕ್ಕಳು ಭಾಗಿಯಾಗಿದ್ದಾರೆ. ಡ್ರಗ್ಸ್ ಸೇವಿಸಿ ನಾವು ತಪ್ಪೇ ಮಾಡಿಲ್ಲ ಎಂಬಂತೆ ಪೊಲೀಸರ ಮುಂದೆ ನಟಿಸಿದ್ದಾರೆ. ಮ್ಯೂಸಿಕ್ ಕಂಪನಿಯೊಂದು ಈ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿದ್ದವರಲ್ಲಿ ಬಹುತೇಕರು ಹೊರರಾಜ್ಯದವರು ಎಂದು ತಿಳಿದು ಬಂದಿದೆ. ಕೇರಳ, ಉತ್ತರ ಪ್ರದೇಶ ಮೂಲದವರು ಭಾಗಿ ಮಾಹಿತಿ ಸಿಕ್ಕಿದ್ದು ರಾಜ್ಯದ ಕೆಲ ವಿದ್ಯಾರ್ಥಿಗಳು ಸೇರಿದಂತೆ ಕನ್ನಡದ ವಿದ್ಯಾರ್ಥಿಗಳೂ ಕೂಡ ಪಾರ್ಟಿಯಲ್ಲಿ ಭಾಗಿಯಾಗಿದ್ರು ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.

ಡ್ರಗ್ಸ್ ಪೆಡ್ಲರ್‌ಗಳು, ರಷ್ಯಾದಿಂದ ಮಾಡೆಲ್, ಡಿಜೆ ಕರೆಸಿ ಜಂಗಲ್ ಸಫಾರಿ ಹೆಸರಿನಲ್ಲಿ ಈ ರೇವ್ ಪಾರ್ಟಿ ನಡೆಸುತ್ತಿದ್ದರು ಎಂಬುವುದ ತಿಳಿದು ಬಂದಿದೆ. ಮೊದಲು‌ ಇನ್‌ಸ್ಟಾ ಗ್ರಾಂನಲ್ಲಿ ಪಾರ್ಟಿಗೆ ಸದಸ್ಯರ ಆಯ್ಕೆ ಮಾಡಿ ಬಳಿಕ ಎಲ್ಲರೂ ಗೌಪ್ಯವಾಗಿ ಒಂದೆಡೆ ಸೇರಲು ಸ್ಕ್ಯಾನರ್ ಬಳಕೆ ಮಾಡಲಾಗಿದೆ. ಹೆಸರು ನೋಂದಣಿಗೆ 1000, 2000, 5000 ರೂ. ನಿಗದಿ ಮಾಡಿದ್ದಾರೆ. ಸ್ಕ್ಯಾನ್ ಆದರೆ ಮಾತ್ರ ರೇವ್ ಪಾರ್ಟಿ ಒಳಗಡೆ ಪ್ರವೇಶ ನೀಡಲಾಗುತ್ತಿದ್ದು ಒಳಗೆ ಪ್ರವೇಶದ ವೇಳೆ ಬಲಗೈಗೆ ಮ್ಯೂಸಿಕ್ ಕಂಪನಿಯ ಗುರುತಿನ ಸೀಲ್ ಒತ್ತುವ ಮೂಲಕ ಒಳಗಡೆ ಎಂಟ್ರಿ ಕೊಡಲಾಗುತ್ತಿತ್ತು. ಜಂಗಲ್ ಸಫಾರಿ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಡ್ರಗ್ಸ್ ಪೆಡ್ಲರ್‌ಗಳಿಂದ ನೇರವಾಗಿ ಡ್ರಗ್ಸ್ ಖರೀದಿಸಿ ಮೋಜು ಮಸ್ತಿ ಮಾಡಲಾಗುತ್ತಿತ್ತು.

ಆದರೆ ಪಾರ್ಟಿಯಲ್ಲಿದ್ದವರು ಡ್ರಗ್ಸ್ ಸೇವನೆ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಕೆ ವಂಶಿಕೃಷ್ಣ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights