ತಮಿಳುನಾಡು: 2021ರ ಚುನಾವಣೆಗೆ BJP ಮತ್ತು AIADMK ಮೈತ್ರಿಗೆ ಅಮಿತ್‌ ಶಾ ಒಪ್ಪಿಗೆ!

2021ರ ತಮಿಳುನಾಡು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಭೇಟಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಭೇಟಿ ನೀಡಿದ್ದಾರೆ. ತಮಿಳುನಾಡಿನಲ್ಲಿ ಈ ಬಾರಿ ತನ್ನ ಗೆಲುವಿನ ಖಾತೆ ತೆರೆಯಲು ಯತ್ನಿಸುತ್ತಿರುವ ಬಿಜೆಪಿ ಸಾಕಷ್ಟು ಕಸರತ್ತು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಪಕ್ಷ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತರ ಕಜಗಂ (AIADMK) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿನ್ನೆ ಅಮಿತ್ ಶಾ ಒಪ್ಪಿಗೆ ನೀಡಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಎಐಎಡಿಎಂಕೆ ಮೈತ್ರಿ ಮಾಡಿಕೊಂಡಿತ್ತು. ಆ ಮೈತ್ರಿ ವಿಧಾನಸಭಾ ಚುನಾವಣೆಗೂ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

ಅಭಿವೃದ್ಧಿಯ ಬಗ್ಗೆ ಬಿಜೆಪಿ ಮಾತ್ರ ತುಂಬಾ ಉತ್ಸುಕವಾಗಿದೆ. ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಕೊರೊನಾ ನಿರ್ವವಣೆ, ನೀರು, ಮೋದಿ ಸರ್ಕಾರದ ಕೃಷಿ ಮಸೂದೆಗೆ ಬಂಬಲ, ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಅನುಗುಣವಾಗಿ ಸಾಕಷ್ಟು ಕಲ್ಯಾಣ ಕ್ರಮಗಳನ್ನು ಜಾರಿಗೆ ತರಲು ಎಐಡಿಎಂಕೆ ಮತ್ತು ಬಿಜೆಪಿ ಒಟ್ಟಾಗಿ ಶ್ರಮಿಸಲಿವೆ ಎಂದು ಅವರು ಹೇಳಿದ್ದಾರೆ.

“ಕೇಂದ್ರವು ತಮಿಳುನಾಡಿಗೆ ಅನ್ಯಾಯ ಮಾಡಿದೆ ಎಂದು ಡಿಎಂಕೆ ದೂರುತ್ತಲೇ ಇದೆ. ಮೋದಿ ಸರ್ಕಾರ ತಮಿಳುನಾಡಿಗೆ ಏನು ಮಾಡಿದೆ ಎಂದು ನಾನು ಪಟ್ಟಿ ಮಾಡಿದ್ದೇನೆ. ಯುಪಿಎ ಸರ್ಕಾರ ತನ್ನ ಹತ್ತು ವರ್ಷಗಳಲ್ಲಿ ತಮಿಳುನಾಡುಗಾಗಿ ಏನು ಮಾಡಿದೆ ಎಂದು ಡಿಎಂಕೆ ನಮಗೆ ಹೇಳಬಹುದೇ? ದೇಶದ ಜನರು ರಾಜವಂಶದ ರಾಜಕೀಯವನ್ನು ಚುನಾವಣೆಯ ನಂತರ ಸ್ಥಿರವಾಗಿ ತಿರಸ್ಕರಿಸುತ್ತಿದ್ದಾರೆ. “ತಮಿಳುನಾಡಿನ ಜನರು ಕೂಡ ಶೀಘ್ರದಲ್ಲೇ ಕುಟುಂಬ ರಾಜಕಾರಣವನ್ನು ತಿರಸ್ಕರಿಸುತ್ತಾರೆ. 2ಜಿ ಹಗರಣವನ್ನು ತಲೆಮೇಲೆ ಇರಿಸಿಕೊಂಡಿರುವ ಡಿಎಂಕೆಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ” ಎಂದು ಪಳನಿಸ್ವಾಮಿ ಹೇಳಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಅವರ “ವೆಲ್” ಯಾತ್ರೆಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿ, ಅನುಮತಿ ನಿರಾಕರಿಸಿತ್ತು. ಆದರೂ ಈಗ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಸಿದೆ. ಇದು ಬಿಜೆಪಿ ತಮಿಳುನಾಡಿನಲ್ಲಿ ಕಾಲೂರಲು ಎಐಎಡಿಎಂಕೆ ನೆರವಾಗುತ್ತಿದೆ. ಇದರ ಪೆಟ್ಟು ಎಐಎಡಿಎಂಕೆಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ಚುನಾವಣೆಗೆ ಎಐಎಡಿಎಂಕೆ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದು ರಜನಿಕಾಂತ್‌ ಅವರ ರಾಜಕೀಯ ಪ್ರವೇಶಕ್ಕೆ ತಡೆಯಾಗಲಿದೆ ಎಂದು ಹೇಳಲಾಗಿದೆ. ರಜನಿಕಾಂತ್‌ ಅವರು ರಾಜಕೀಯವಾಗಿ ತಮಿಳುನಾಡಿನಲ್ಲಿ ಪ್ರಭಾವ ಭೀರಲು ಸಾಕಷ್ಟು ಪ್ರಯತ್ನಿಸಿದರೂ ಅದು ಯಶಸ್ವಿಯಾಗಿಲ್ಲ. ಹೀಗಾಗಿ ಬಿಜೆಪಿಯೊಂದಿಗೆ ಅವರ ಸಂಬಂಧವನ್ನು ಕಡಿತಗೊಂಡಿದೆ ಎನ್ನಲಾಗಿದೆ. ಹಾಗಾಗಿ ರಜನಿಕಾಂತ್‌ ಅವರು ರಾಜಕೀಯ ಅಖಾಡಕ್ಕೆ ಇಳಿಯುವುದು ಅನುಮಾನಾಸ್ಪದವಾಗಿದೆ.

ಡಿಎಂಕೆ ಮೇಲಿನ ಗೃಹ ಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಡಿಎಂಕೆ ನಾಯಕ ಮೇಲೆ ಇಡಿ ದಾಳಿಗಳನ್ನು ಸೂಚಿಸುತ್ತಿದೆ. ಅಲ್ಲದೆ, ಈಗಾಗಲೇ ಸಿಬಿಐನಿಂದ ತನಿಖೆ ಎದುರಿಸುತ್ತಿರುವ ಪಕ್ಷದ ಕೆಲವು ಹಿರಿಯ ನಾಯಕರ ಮೇಲೆ ಕೇಂದ್ರವು ಮತ್ತುಷ್ಟು ಪರಿಣಾಮಗಳನ್ನು ಬೀರುವುದನ್ನು ಸೂಚಿಸುತ್ತದೆ.


ಇದನ್ನೂ ಓದಿ: ವೆಟ್ರಿ ವೆಲ್‌ ಯಾತ್ರೆ ನಡೆಸಲು ಮುಂದಾಗಿದ್ದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಬಂಧನ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights