ಭಾರೀ ಕುಸಿತ ಕಂಡ ಅಂಬಾನಿ ಆಸ್ತಿ ಮೌಲ್ಯ; ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಿಂದ ಅಂಬಾನಿ ಔಟ್!
ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಮುಖೇಶ್ ಅಂಬಾನಿ, ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದರು. ಆದರೆ, ಇದೀಗ ಅವರ ಆಸ್ತಿಯ ಮೌಲ್ಯದಲ್ಲಿ ಕುಸಿತ ಕಂಡಿದ್ದು, ಟಾಪ್ 10 ಶ್ರೀಮಂತರ ಪಟ್ಟಿಯಿಂದಲೂ ಅಂಬಾನಿ ಹೊರ ಉಳಿದ್ದಿದ್ದಾರೆ. ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಫೇಸ್ಬುಕ್ ಮತ್ತು ಗೂಗಲ್ ಕಂಪನಿಗಳು ಅಂಬಾನಿ ಒಡೆತನದ ರಿಲಯನ್ಸ್ ಕಂಪನಿ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದವು. ಇದರಿಂದಾಗಿ ಅಂಬಾನಿ ಆಸ್ತಿ ಮೌಲ್ಯ ಗಣನೀಯವಾಗಿ ಏರಿಕೆ ಕಂಡು 4ನೇ ಸ್ಥಾನಕ್ಕೆ ಜಿಗಿದಿದ್ದರು. ಕಳೆದ ತಿಂಗಳಿಂದ ಅವರ ಆಸ್ತಿ ಮೌಲ್ಯ ಕುಸಿತ ಕಂಡಿದೆ.
ಅಂಬಾನಿಯವರ ಮೌಲ್ಯ 6.62 ಲಕ್ಷ ಕೋಟಿ ರೂಪಾಯಿಯಿಂದ 5.63 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ರಿಲಯನ್ಸ್ ಷೇರುಗಳ ತಿದ್ದುಪಡಿಯಿಂದಾಗಿ ಈ ಕುಸಿತ ಕಂಡುಬಂದಿದೆ. ಷೇರುಗಳ ಮೌಲ್ಯದ ಸಾರ್ವಕಾಲಿಕ ಗರಿಷ್ಠ ಮಟ್ಟ 2,369.35ರೂಗಳಿಂದ 1,994.15 ರೂಗಳಿಗೆ ಕುಸಿದಿದ್ದು, ಶೇ. 16 ರಷ್ಟು ಕುಸಿತ ಕಂಡಿದೆ.
ಈ ನಡುವೆ, ಕೇಂದ್ರ ಸರ್ಕಾರ ಕೃಷಿ ನೀತಿಗಳು ಅಂಬಾನಿ-ಅದಾನಿಗಳ ಕಾನೂನುಗಳು ಎಂದು ಹೇಳಿರುವ ರೈತರು ಅಂಬಾನಿ ಒಡೆತನದ ರಿಲಯನ್ಸ್-ಜಿಯೋ ಉತ್ಪನ್ನಗಳನ್ನು ಬಾಯ್ಕಾಟ್ ಮಾಡಲು ಕರೆಕೊಟ್ಟಿದ್ದಾರೆ.
ಇದನ್ನೂ ಓದಿ: ಡಿ. 27ಕ್ಕೆ ಮೋದಿ ಮನ್-ಕೀ-ಬಾತ್: ‘ಅಂಬಾನಿ ಮೊಮ್ಮಗನಿಗೆ ಹೆಸರು ಸೂಚಿಸಿ’ ಪೋಸ್ಟ್ ವೈರಲ್!