ವಂಚನೆ ಆರೋಪ: ಮಿಂಚಿನ ಓಟಗಾರ್ತಿ ಪಿ.ಟಿ ಉಷಾ ವಿರುದ್ದ ಪ್ರಕರಣ ದಾಖಲು!

ವಂಚನೆ ಆರೋಪದಲ್ಲಿ ಒಲಿಂಪಿಯನ್, ಓಟಗಾರ್ತಿ ಪಿ.ಟಿ ಉಷಾ ಮತ್ತು ಇತರ ಆರು ಮಂದಿ ವಿರುದ್ಧ ಕೇರಳದ ವೆಲ್ಲಾಯಿಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಜಿ ಅಂತರಾಷ್ಟ್ರೀಯ ಅಥ್ಲೀಟ್ ಜೆಮ್ಮಾ ಜೋಸೆಫ್ ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆ (ಐಪಿಸಿ)ಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಶಿಕ್ಷೆ) ಅಡಿಯಲ್ಲಿ ಪಿಟಿ ಉಷಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೇರಳದ ಕೊಯಿಕ್ಕೋಡ್‌ ನಗರದ ಖಾಸಗಿ ನಿರ್ಮಾಣ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದ ಪಿಟಿ ಉಷಾ ಮತ್ತು ಇತರ ಆರೋಪಿಗಳ ಗ್ಯಾರಂಟಿ ಮೇರೆಗೆ 46 ಲಕ್ಷ ರೂ. ಪಾವತಿಸಿ 1,012 ಚದರ ಅಡಿ ಫ್ಲಾಟ್ ಅನ್ನು ಖರೀಸಿದ್ದೇನೆ. ಆದರೆ, ಈಗ ಬಿಲ್ಡರ್‌ ತಮ್ಮಗೆ ಫ್ಲಾಟ್‌ಅನ್ನು ಹಸ್ತಾಂತರಿಸುತ್ತಿಲ್ಲ. ತಮ್ಮ ಹೆಸರಿಗೆ ಫ್ಲಾಟ್‌ನ ನೊಂದಣಿಯನ್ನೂ ಮಾಡಿಕೊಡುತ್ತಿಲ್ಲ ಎಂದು ಜೋಸೆಫ್‌ ಆರೋಪಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಉಷಾ ಅವರು ತಮಗೆ ಸಂಬಂಧಿಸಿದ ಯೋಜನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಿದ್ದರು. ಅವರ ಭರವಸೆಯ ಮೇರೆಗೆ ಹಣವನ್ನು ಬಿಲ್ಡರ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

ಒಪ್ಪಂದದಂತೆ ಆರೋಪಿಗಳು ನಡೆದುಕೊಳ್ಳದ ಕಾರಣ, ಅವರು ಪಾವತಿಸಿದ ಮೊತ್ತವನ್ನು ಮರಳಿ ಪಡೆಯಲು ಪ್ರಯತ್ನಿಸಿದ್ದಾರೆ. ಆದರೆ, ಆರೋಪಿಗಳು ಅದಕ್ಕೆ ಸಹಕರಿಸದ ಕಾರಣ ಅವರ ಪ್ರಯತ್ನ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೋಸೆಫ್‌ ಅವರ ದೂರು ಮತ್ತು ಪ್ರಕರಣದ ಬಗ್ಗೆ ವಿಸ್ತೃತ ತನಿಖೆಗಾಗಿ ಜಿಲ್ಲಾ ಪೊಲೀಸ್ ಮುಖ್ಯಸ್ಥ (ಕೋಝಿಕೋಡ್ ನಗರ) ಎ.ವಿ. ಜಾರ್ಜ್ ಅವರು ವೆಳ್ಳಾಯಿಲ್ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.

ಖಾಸಗಿ ಬಿಲ್ಡರ್‌ಗಳ ವಿರುದ್ಧ ಕ್ರಮಕ್ಕಾಗಿ ಮತ್ತು ಹೂಡಿಕೆ ಮಾಡಿದ ಮೊತ್ತವನ್ನು ಮರಳಿ ಪಡೆಯಲು ದೂರುದಾರರು ಕೇರಳ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವನ್ನು ಸಂಪರ್ಕಿಸಿದ್ದಾರೆ.

ಇದನ್ನೂ ಓದಿ: ವಿಡಿಯೋ: ಹೆಚ್ಚಿನ ವರದಕ್ಷಿಣೆಗೆ ಬೇಡಿಕೆ ಇಟ್ಟ ವರನಿಗೆ ಮಂಟಪದಲ್ಲೇ ಹಿಗ್ಗಾಮುಗ್ಗ ಥಳಿಸಿದ ಜನರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights