ಬಂಗಾಳದ ಎಲ್ಲ 77 ಬಿಜೆಪಿ ಶಾಸಕರಿಗೆ ಕೇಂದ್ರೀಯ ಭದ್ರತಾ ಪಡೆಗಳ ರಕ್ಷಣೆ!

ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಚುನಾಯಿತರಾದ 77 ಬಿಜೆಪಿ ಶಾಸಕರಿಗೆ ಸಂಭಾವ್ಯ ಬೆದರಿಕೆಯ ದೃಷ್ಟಿಯಿಂದ ಕೇಂದ್ರೀಯ ಭದ್ರತಾ ಪಡೆಗಳ ರಕ್ಷಣೆಯನ್ನು ಒದಗಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಶಾಸಕಾಂಗದ ಸದಸ್ಯರನ್ನು ಸಿಐಎಸ್ಎಫ್ ಮತ್ತು ಸಿಆರ್ಪಿಎಫ್ನ ಸಶಸ್ತ್ರ ಕಮಾಂಡೋಗಳು ಭದ್ರತೆಯಲ್ಲಿ ನೋಡಿಕೊಳ್ಳಲಾಗುತ್ತಿದೆ.

ಬಿಜೆಪಿ ಕಾರ್ಯಕರ್ತರ ವಿರುದ್ಧ ಮತದಾನೋತ್ತರ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಸಚಿವಾಲಯವು ರಾಜ್ಯಕ್ಕೆ ಕಳುಹಿಸಿದ ುನ್ನತ ಮಟ್ಟದ ಻ಧಿಕಾರಿಗಳು, ಕೇಂದ್ರ ರಕ್ಷಣಾ ಸಂಸ್ಥೆಗಲು ಸಲ್ಲಿಸಿದ ವರದಿಯ ನಂತರ ಕೇಂದ್ರ ಗೃಹ ಸಚಿವಾಲಯ ಭದ್ರತೆಗೆ ಅನುಮೋದನೆ ನೀಡಿದೆ ಎಂದು ತಿಳಿಸುಬಂದಿದೆ.

61 ಶಾಸಕರಿಗೆ ಅತ್ಯಂತ ಕಡಿಮೆ ‘ಎಕ್ಸ್’ವರ್ಗದ ಭದ್ರತೆಗೆ ಒಳಪಡಿಸಲಾಗುವುದು ಹಾಗೂ ಕೇಂದ್ರ ಗೃಹ ಸಚಿವಾಲಯದ ಹೊಸ ಆದೇಶದ ಪ್ರಕಾರ ಕಮಾಂಡೋಗಳನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿಂದ ಕರೆಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಇನ್ನುಳಿದ ಶಾಸಕರು ಉನ್ನತ ಭದ್ರತಾ ವರ್ಗ’ವೈ’ಅಡಿಯಲ್ಲಿ ಒಳಗೊಳ್ಳುತ್ತಾರೆ. ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ಈಗಾಗಲೇ ಕೇಂದ್ರ ಮೀಸಲು ಪೊಲೀಸ್ ಪಡೆಯ ‘ಝಡ್’ ವಿಭಾಗದಿಂದ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights