ಅಧಿಕಾರಕ್ಕಾಗಿ BJP-JDS ನಡುವೆ ಒಪ್ಪಂದ; ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ!

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವನೆಯ ನಂತರ, ಅಧ್ಯಕ್ಷ ಸ್ಥಾನಗಳಿಗೆ ಲಾಬಿ-ಒಪ್ಪಂದಗಳು ನಡೆಯುತ್ತಿವೆ. ಅಂತೆಯೇ ಚಾಮರಾಜನಗರದಲ್ಲಿಯೂ ಅಧ್ಯಕ್ಷ ಸ್ಥಾನಕ್ಕಾಗಿ ಆಣೆ-ಪ್ರಮಾಣಗಳು ಗರಿಗೆದರಿವೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಪಂಯ ಅಧಿಕಾರಕ್ಕಾಗಿ ಮತ್ತು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಹಂಚಿಕೆಗಾಗಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಒಪ್ಪಂದ ಮಾಡಿಕೊಂಡಿವೆ.

ಅದಕ್ಕಾಗಿ, ಧರ್ಮಸ್ಥಳದಲ್ಲಿ ಪರಸ್ಥರ ಆಣೆ-ಪ್ರಮಾಣ ಮಾಡಿಕೊಂಡಿದ್ದಾರೆ. ನುಡಿದಂತೆ ನಡೆಯದಿದ್ದರೆ ಮನೆ ಹಾಳಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದೆ. ಎರಡು ಪಕ್ಷಗಳ ಬೆಂಬಲಿತರು ಆಣೆ-ಪ್ರಮಾಣ ಮಾಡಿರುವ ವಿಡಿಯೋ ವೈರಲ್‌ ಆಗಿದೆ.

ಧರ್ಮಸ್ಥಳದ ಮಂಜುನಾಥ ದೇವಸ್ಥಾನದಲ್ಲಿ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದು, ಅಧ್ಯಕ್ಷ ಸ್ಥಾನ ಮೊದಲ ಅವಧಿ 10 ತಿಂಗಳು ಜೆಡಿಎಸ್‌ ಬೆಂಬಲಿತರಿಗೆ, ಎರಡನೇ ಅವಧಿಗೆ ಬಿಜೆಪಿ ಬೆಂಬಲಿತರಿಗೆ ನೀಡಲು ಒಪ್ಪಂದ ನಡೆದಿದೆ.

ಉಪಾಧ್ಯಕ್ಷ ಸ್ಥಾನ ಮೊದಲ 10 ತಿಂಗಳು ಬಿಜೆಪಿ ಬೆಂಬಲಿತರಿಗೆ, ಎರಡನೇ ಅವಧಿಗೆ ಜೆಡಿಎಸ್‌ ಬೆಂಬಲಿತರಿಗೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ.

ಒಟ್ಟು 15 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ 5, ಜೆಡಿಎಸ್‌ ಬೆಂಬಲಿತ 5 ಕಾಂಗ್ರೆಸ್‌ ಬೆಂಬಲಿತ 5 ದೊರಕಿತ್ತು. ಇದೀಗ ಒಪ್ಪಂದದ ಮೂಲಕ ಅಧಿಕಾರಕ್ಕೇರಲು ಜೆಡಿಎಸ್‌- ಬಿಜೆಪಿ ಸಜ್ಜಾಗಿವೆ.

ಇದನ್ನೂ ಓದಿ: BJPಯಿಂದ ಇಡೀ ದೇಶವೇ ನಿರುದ್ಯೋಗಿಯಾಗಿದೆ; ಇದಕ್ಕೆ ಪ್ರತಿಪಕ್ಷ ಹೊರತಲ್ಲ: ಅಶೋಕ್‌ಗೆ ಡಿಕೆಶಿ ತಿರುಗೇಟು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights