BSYಗೆ ವಯಸ್ಸಾಗಿದೆ; ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ: ಸಿಎಂ ಬದಲಾಯಿಸಿ ಬೇರೊಬ್ಬರಿಗೆ ಅವಕಾಶ ಕೊಡಿ: ಹಳ್ಳಿಹಕ್ಕಿ ವಿಶ್ವನಾಥ್‌

ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರಗಳು ಹೆಚ್ಚಾಗಿವೆ. ಯಡಿಯೂರಪ್ಪನವರಿಗೆ ವಯಸ್ಸಾಗಿದೆ. ಅವರಿಗೆ ಮೊದಲಿದ್ದ ಉತ್ಸಾಹ, ಶಕ್ತಿ ಇಲ್ಲ. ಅವರಿಗೆ ಆಡಳಿತ ನಡೆಸಲು ಸಾಧ್ಯವಿಲ್ಲ. ಹಾಗಾಗಿ ನಾಯಕತ್ವವನ್ನು ಬದಲಾಯಿಸಬೇಕು. ಬೇರೊಬ್ಬರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಅರುಣ್‌ ಸಿಂಗ್‌ ಅವರಿಗೆ ಎಂಎಲ್‌ಸಿ ವಿಶ್ವನಾಥ್‌ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಪಕ್ಷದ ಕಚೇರಿಯಲ್ಲಿ ಅರುಣ್‌ ಸಿಂಗ್‌ ಅವರನ್ನು ಭೇಟಿ ಮಾಡಿರುವ ಹಳ್ಳಿಹಕ್ಕಿ ವಿಶ್ವನಾಥ್‌, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಪಣತೊಟ್ಟಿದ್ದ ಯಡಿಯೂರಪ್ಪನವರ ಅಂದಿನ ಉತ್ಸಾಹ, ಶಕ್ತಿ ಅವರಿಗೆ ಈಗ ಇಲ್ಲ. ಅವರ ಆರೋಗ್ಯವೂ ಸರಿಯಿಲ್ಲ. ರಾಜ್ಯದ ಹಿತದೃಷ್ಟಿಯಿಂದ ಬಿಎಸ್‌ವೈ ಸಿಎಂ ಕುರ್ಚಿಯಿಂದ ಕೆಳಗಿಳಿಯಬೇಕು. ಸಾಮಾನ್ಯ ಜ್ಞಾನ ಇರುವವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕೆಂಬುದು ಕೆಲವರ ಒತ್ತಾಸೆಯಾಗಿದೆ. ಕೆಲವರು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡಲು ಸಿದ್ದ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿದ್ದಾರೆ. ಹೀಗಾಗಿ, ಅವರು ರಾಜೀನಾಮೆ ನೀಡುವುದು ಒಳ್ಳೆಯದು. ಅವರನ್ನು ಮಾರ್ಗದರ್ಶನ ಮಂಡಿಳಿಗೆ ಸೇರಿಸಬೇಕು ಎಂದು ವಿಶ್ವನಾಥ್‌ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಸ್ತಾಪ ನಿಜ ಎಂದು ಒಪ್ಪಿಕೊಂಡ ಸಚಿವ ಈಶ್ವರಪ್ಪ!

ಜೆಡಿಎಸ್‌ನಲ್ಲಿ ಏನು ನಡೆಯುತ್ತಿತ್ತೋ, ಅದು ಬಿಜೆಪಿಯಲ್ಲೂ ನಡೆಯುತ್ತಿದೆ. ಪಕ್ಷದಲ್ಲಿ ರಾಕ್ಷಸ ರಾಜಕಾರಣವಿದೆ. ಕುಟುಂಬ ರಾಜಕಾರಣ ಹೆಚ್ಚಾಗುತ್ತಿದೆ. ಯಡಿಯೂರಪ್ಪನವರ ಕುಟುಂಬ ಎಲ್ಲಾ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಎಲ್ಲಾ ಇಲಾಖೆಗಳನ್ನು ತಾವೇ ನಿಯಂತ್ರಿಸಲು ಅವರ ಕುಟುಂಬ ಪ್ರಯತ್ನಿಸುತ್ತಿದೆ ಎಂದು ಅರುಣ್‌ ಸಿಂಗ್‌ ಅವರ ಮುಂದೆ ವಿಶ್ವನಾಥ್‌ ಆರೋಪಿಸಿದ್ದಾರೆ.

ಯಡಿಯೂರಪ್ಪನವರ ಬಗ್ಗೆ ಎಲ್ಲರೂ ಗೌರವಿಂದ ಮಾತನಾಡುತ್ತಾರೆ. ಆದರೆ ಅವರಿಗೆ ಸರ್ಕಾರ ಮುನ್ನೆಡೆಸುವ ಶಕ್ತಿ ಕುಂದಿದೆ. ಕೇವಲ ಲಿಂಗಾಯಿತರಿಗೆ ಮಾತ್ರ ಮುಖ್ಯಮಂತ್ರಿ ಸ್ಥಾನ ಕೊಡಿ ಎಂದು ಹೇಳುವುದು ಸರಿಯಲ್ಲ. ಈಗಾಗಲೇ ಆ ಸಮುದಾಯದ 8 ಮಂದಿ ಸಿಎಂ ಆಗಿದ್ದಾರೆ. ಪಂಚಮಸಾಲಿ ಅವರಿಗೂ ಅವಕಾಶ ಕೊಡಲಿ ಎಂದು ವಿಶ್ವನಾಥ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ; ಯಡಿಯೂರಪ್ಪನವರೇ ಮುಂದಿನ ದಿನಗಳಲ್ಲೂ ಸಿಎಂ: ಅರುಣ್‌ ಸಿಂಗ್‌ ಸ್ಪಷ್ಟನೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights