ನಟ ಸೋನು ಸೂದ್ ವಿರುದ್ಧ 20 ಕೋಟಿಗೂ ಅಧಿಕ ತೆರಿಗೆ ವಂಚನೆ ಆರೋಪ..!

ಕೊರೊನಾ ಬೆಂಬಿಡದೆ ಜನರನ್ನು ಕಾಡುತ್ತಿರುವ ಸಂದರ್ಭದಲ್ಲಿ ಜನಸಾಮಾನ್ಯರ ಬೆನ್ನಿಗೆ ನಿಂತು ಸಹಾಯ ಮಾಡಿ ರಿಯಲ್ ಹೀರೋ ಎಂದು ಕರೆಸಿಕೊಂಡ ನಟ ಸೋನು ಸೂದ್ ಬೆನ್ನಿಗೆ ಸದ್ಯ ಆದಾಯ ಇಲಾಖೆ ಅಧಿಕಾರಿಗಳು ಬಿದ್ದಾರೆ. ಕಳೆದ ಮೂರು ದಿನಗಳಿಂದ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ರ ಮುಂಬೈ ನಿವಾಸದಲ್ಲಿ ದಾಳಿ ನಡೆಸಿದ್ದಾರೆ. ಮಾತ್ರವಲ್ಲದೇ 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ಹಣವನ್ನು ಸೋನು ಸೂದ್ ವಂಚನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.

ದೆಹಲಿಯ ಅರವಿಂದ್ ಕೇಜ್ರಿವಾಲ್ ಸರ್ಕಾರದ ‘ದೇಶ್ ಕಾ ಮೆಂಟರ್ಸ್’ ಯೋಜನೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಬೆನ್ನಲ್ಲೆ ಸೋನು ಸೂದ್ ನಿವಾಸದ ಮೇಲೆ ಈ ಐಟಿ ದಾಳಿ ನಡೆದಿದೆ.

ಸೋನು ಸೂದ್ ವಿದೇಶಿ ಕೊಡುಗೆ ಕಾಯ್ದೆಯನ್ನು ಉಲ್ಲಂಘಿಸಿ ಸಾಗರೋತ್ತರ ದಾನಿಗಳಿಂದ 2.1 ಕೋಟಿ ರೂಪಾಯಿಗಳನ್ನು ಸೋನು ಸೂದ್ ರ ಲಾಭರಹಿತ ಸಂಸ್ಥೆಯು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ನಟನಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ನಡೆಸಲಾದ ದಾಳಿಯಲ್ಲಿ ಸೋನು ಸೂದ್ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ.

ಅಸುರಕ್ಷಿತ ಸಾಲದ ರೂಪದಲ್ಲಿ ಹಣವನ್ನು ಸಾಗಿಸುವ ಮೂಲಕ ನಟ ತೆರಿಗೆ ವಂಚನೆ ಮಾಡಲು ಯತ್ನಿಸಿದ್ದಾರೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಮಾಹಿತಿ ನೀಡಿದೆ.

ಇದುವರೆಗೆ ದೊರಕಿರುವ ಮಾಹಿತಿಯ ಪ್ರಕಾರ ನಟ ಸೋನು ಸೂದ್ 20 ಕೋಟಿ ರೂ. ಅಧಿಕ ತೆರಿಗೆ ವಂಚನೆ ಮಾಡಿರುವುದು ಕಂಡುಬಂದಿದೆ. ತೆರಿಗೆ ತಪ್ಪಿಸುವ ಉದ್ದೇಶದಿಂದ ಸಾಲವನ್ನು ತೋರಿಸಲಾಗಿದೆ. ಹೂಡಿಕೆ ಮಾಡಲು ಹಾಗೂ ಆಸ್ತಿ ಖರೀದಿಸಲು ಈ ನಕಲಿ ಸಾಲಗಳನ್ನು ಬಳಿಕೆ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights