ಅಫಘಾನ್ ಹಾಸ್ಯನಟನ ಕ್ರೂರ ಕೊಲೆ : ತಾಲಿಬಾನ್ನನ್ನು ದೂಷಿಸಿದ ಕುಟುಂಬ!

ಅಫಘಾನ್ ಹಾಸ್ಯನಟನ ಕ್ರೂರ ಕೊಲೆ ಪ್ರಪಂಚದಾದ್ಯಂತ ಆಘಾತವನ್ನುಂಟು ಮಾಡಿದೆ. ಹಾಸ್ಯನಟನ ಕುಟುಂಬ ಇದಕ್ಕೆ ತಾಲಿಬಾನ್ ಕಾರಣ ಎಂದು ದೂರಿದೆ.

ಅಫ್ಘಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ಖಶಾ ಜ್ವಾನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಹಾಸ್ಯನಟ ನಜರ್ ಮೊಹಮ್ಮದ್ ಅವರ ಹತ್ಯೆ ವಿಶ್ವದಾದ್ಯಂತ ಆಘಾತ ಸಂದೇಶ ರವಾನಿಸಿದೆ.

ಈ ಹಿಂದೆ ಕಂದಹಾರ್ ಪೊಲೀಸರಲ್ಲಿ ಸೇವೆ ಸಲ್ಲಿಸಿದ್ದ ಹಾಸ್ಯನಟನನ್ನು ಗುರುವಾರ ರಾತ್ರಿ ತನ್ನ ಮನೆಯಿಂದ ಹೊರಗೆ ಕರೆದೊಯ್ದು ಅಪರಿಚಿತ ಬಂದೂಕುಧಾರಿಗಳಿಂದ ಕೊಲ್ಲಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹಾಸ್ಯನಟನ ಕುಟುಂಬ ಈ ದಾಳಿಗೆ ತಾಲಿಬಾನ್ ಕಾರಣ ಎಂದು ದೂಷಿಸಿದೆ. ಆದರೆ ಇದನ್ನು ತಾಲಿಬಾನ್ ನಿರಾಕರಿಸಿದೆ.

ಅಫ್ಘಾನ್ ಭದ್ರತಾ ಪಡೆಗಳ ವಿರುದ್ಧ ತಾಲಿಬಾನ್ ದಾಳಿ ತೀವ್ರಗೊಳಿಸಿದ್ದು ಸುಮಾರು 70 ಪ್ರತಿಶತದಷ್ಟು ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದೆ. ಇದರಿಂದ ಕುಟುಂಬಗಳು ಕಂಧರ್ ಪ್ರಾಂತ್ಯದಲ್ಲಿ ಯುದ್ಧ ಪೀಡಿತ ಪ್ರದೇಶಗಳಿಂದ ಪಲಾಯನ ಮಾಡುತ್ತಿದ್ದು, ಅಫಘಾನ್ ಸರ್ಕಾರ ಸ್ಥಾಪಿಸಿದ ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಈದ್ ಆಚರಣೆಯ ನಂತರ, ಇಡೀ ಕಂಧರ್ ಪ್ರಾಂತ್ಯದಲ್ಲಿ ಅಫ್ಘಾನ್ ಪಡೆಗಳ ಮೇಲೆ ತಾಲಿಬಾನ್ ದಾಳಿ ತೀವ್ರಗೊಳಿಸಿದೆ. ಸುರಕ್ಷತೆಗಾಗಿ ಪಲಾಯನ ಮಾಡಿದ ಜನರು ಹಸಿವಿನ ಅಂಚಿನಲ್ಲಿದ್ದಾರೆ ಎಂದು ಕಂಧರ್ ಸಂಸತ್ ಸದಸ್ಯ ಸೈಯದ್ ಅಹ್ಮದ್ ಸೈಲಾಬ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಆದಾಗ್ಯೂ, ಅವರಿಗೆ ಕಂಧರ್ ಬಳಿಯ ವಲಸೆ ಶಿಬಿರವೊಂದರಲ್ಲಿ ಆಹಾರ ಮತ್ತು ವೈದ್ಯಕೀಯ ಆರೈಕೆ ನೀಡಲಾಗುತ್ತಿದೆ.

ಹೀಗಾಗಿ ಹಾಸ್ಯನಟನ ಕುಟುಂಬ ಈ ದಾಳಿಗೆ ತಾಲಿಬಾನ್ ಕಾರಣ ಎಂದು ದೂಷಿಸಿದೆ. ಆದರೆ ಇದನ್ನು ತಾಲಿಬಾನ್ ನಿರಾಕರಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights