ಕೊರೊನಾ ಲಸಿಕೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…!

ಕೊರೊನಾ ಲಸಿಕೆಗೆ ಇಂದು ಚಾಲನೆ ಸಿಕ್ಕ ಬೆನ್ನಲ್ಲೆ ಧ್ರುವ ಸರ್ಜಾ ಸಂತಸ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಆ್ಯಕ್ಷನ್ ಪ್ರಿನ್ಸ್, ಕೊರೊನಾದಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸುವಂತಾಯಿತು. ಆದರೀಗ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಯಾವುದೇ ಭಯವಿಲ್ಲದೇ ಲಸಿಕೆ ಪಡೆಯಬೇಕು ಆರೋಗ್ಯವಾಗಿರಬೇಕು ಎಂದು ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಮುಖ್ಯವಾಗಿ ಕೊರೊನಾ ಲಸಿಕೆ ಬಂದಿರುವುದು ಶಾಲೆಗೆ ಹೋಗುವ ಮಕ್ಕಳಿಗೆ ಉಪಯುಕ್ತವಾಗಿದೆ. ಅವರು ಈಗ ಧೈರ್ಯವಾಗಿ ಶಾಲೆಗಳಿಗೆ ಹೋಗಬಹುದು. ಎಷ್ಟೋ ಜನ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ನಿಂದಾಗಿ ಕಲಿಕೆ ಪೂರ್ಣಗೊಳ್ಳುತ್ತಿರಲಿಲ್ಲ. ಶಾಲೆಯಲ್ಲಿ ಎಲ್ಲರೊಂದಿಗೆ ಕುಳಿತು ಪಾಠ ಕಲಿತರೆನೇ ಜ್ಞಾನಾರ್ಜನೆ ಚೆನ್ನಾಗಿ ಆಗುತ್ತದೆ. ಹೀಗಾಗಿ ಇದು ಶಾಲೆಗೋಗುವ ಮಕ್ಕಳಿಗೆ ತುಂಬಾನೇ ಧೈರ್ಯ ತಂದಿದೆ ಎಂದಿದ್ದಾರೆ.

ಈ ಹಿಂದೆ ಕೊರೊನಾ ಗೆದ್ದು ಬಂದ ಧ್ರುವ ಸರ್ಜಾಗೆ ಕೊಂಚ ಮಟ್ಟಗೆ ಆರೋಗ್ಯದಲ್ಲಿ ಏರುಪೇರಾಗಿತ್ತು. ಚಿಕಿತ್ಸೆ ಬಳಿಕ ಕ್ರಮೇಣ ಅವರು ಸುಧಾರಿಸಿಕೊಂಡಿದ್ದರು.

ದೇಶದಲ್ಲಿ ಮೊದಲು 3 ಕೋಟಿ ಕೊರೊನಾ ವಾರಿಯಾರ್ಸ್ ಗೆ ಕೊರೊನಾ ಲಸಿಕೆ ನೀಡಲು ನಿರ್ಧರಿಸಲಾಗಿದ್ದು, ಆಸ್ಪತ್ರೆ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರು, ಅರೆವೈದ್ಯಕೀಯ, ಪೊಲೀಸ್ ಇಲಾಖೆ, ಸಶಸ್ತ್ರ ಪಡೆ, ದಾದಿಗಳು, ಮೇಲ್ವಿಚಾರಕರು, ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು, ನಾಗರಿಕ ರಕ್ಷಣ ಸಿಬ್ಬಂದಿ, ಪೌರ ಕಾರ್ಮಿಕರು, ಜೈಲು ಸಿಬ್ಬಂದಿಗೆ 50ರಿಂದ60 ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ, ಗಂಭೀರವಾಗಿ ರೋಗಗಳಿಗೆ ತುತ್ತಾಗಿರುವವರಿಗೆ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights