ಬಿಜೆಪಿ ಶಾಸಕರ ಕಾರು-ಬೈಕ್ ನಡುವೆ ಅಪಘಾತ : ಸವಾರರಿಬ್ಬರು ದುರ್ಮರಣ!

ಮುಂಬೈನ ಟಿಟ್ವಾಲಾ ಬಳಿ ಮುರ್ಬಾದ್ ಕ್ಷೇತ್ರದಿಂದ ಚುನಾಯಿತರಾದ ಬಿಜೆಪಿ ಶಾಸಕರ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸಾವಾರರು ಮೃತಪಟ್ಟಿದ್ದಾರೆ.

ಮೃತರಿಬ್ಬರೂ ಕಲ್ಯಾಣ ನಿವಾಸಿಗಳಾಗಿದ್ದು, ಅಮಿತ್ ಸಿಂಗ್ (22) ಮತ್ತು ಸಿಮ್ರಾನ್ ಸಿಂಗ್ (18) ಎಂದು ಗುರುತಿಸಲಾಗಿದೆ.

ಅಪಘಾತಕ್ಕೊಳಗಾದ ಕಾರಿನಲ್ಲಿ ಬಿಜೆಪಿ ಶಾಸಕ ಕಿಶನ್ ಕ್ಯಾಥೋರ್ ಅವರಿದ್ದು ಯಾವುದೇ ತೊಂದರೆಗಳಾಗಿಲ್ಲ. ಆದರೆ ಬೈಕ್ ಚಲಿಸುತ್ತಿದ್ದ ಅಮಿತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿಂಬದಿ ಕುಳಿತಿದ್ದ ಸಿಮ್ರಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಇನ್ನೂ ಶಾಸಕರ ಕಾರ್ ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿವೆ.

ಟ್ವಿಟಾಲ್ ಬಳಿ ಈ ಘಟನೆ ಸಂಭವಿಸಿದ್ದು ಪೊಲೀಸರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗದ ಹಿನ್ನೆಲೆಯಲ್ಲಿ ಯಾರನ್ನೂ ಕೂಡ ಬಂಧಿಸಲಾಗಿಲ್ಲ ಎಂದು ಟಿಟ್ವಾಲಾ ಪೊಲೀಸ್ ಠಾಣೆಯ ಉಸ್ತುವಾರಿ ರಾಜು ವಂಜಾರಿ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights