ACB ದಾಳಿ: ಮನೆಯ ಪೈಪ್‌ನಲ್ಲಿ ನೋಟಿನ ಕಂತೆ ಇಟ್ಟು ಜೈಲು ಸೇರಿದ ಸರ್ಕಾರಿ ಎಂಜಿನಿಯರ್‌!

ರಾಜ್ಯದ ವಿವಿಧ ಇಲಾಖೆಗಳ 15 ಅಧಿಕಾರಿಗಳು ಮತ್ತು ಕಿರಿಯ ಅಧಿಕಾರಿಗಳ ನಿವಾಸ, ಕಚೇರಿ ಮೇಲೆ ಎಸಿಬಿ (ACB) ದಾಳಿ ನಡೆಸಿದ್ದು, ಹಲವು ಸ್ಥಳಗಳಲ್ಲಿ ಹಣ, ಚಿನ್ನಗಳು ಸೇರಿದಂತೆ ಮೌಲ್ಯಯುವ ವಸ್ತುಗಳನ್ನು ವಶಪಡಿಸಿಕೊಂಡಿದೆ.

400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ರಾಜ್ಯಾದ್ಯಂತ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿದೆ. ಈ ವೇಳೆ, ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜೇವರ್ಗಿ ಉಪ ವಿಭಾಗದ ಕಿರಿಯ ಎಂಜಿನಿಯರ್ ಶಾಂತಗೌಡ ಎಂ ಬಿರಾದಾರ್ ಅವರ ಮನೆಯಲ್ಲಿಯೂ ಶೋಧ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಅವರ ಮನೆಯ ಪೈಪ್ ಲೈನ್ ಒಳಗೆ 500 ರೂ.ಗಳ ನೋಟಿನ ಕಂತೆಗಳನ್ನು ಹುದುಗಿಸಿಟ್ಟಿದ್ದದ್ದು ಪತ್ತೆಯಾಗಿತ್ತು.

ಈ ಅಕ್ರಮ ಸಂಪತ್ತಿಗೆ ಸಂಬಂಧಿಸಿದಂತೆ ಮೂಲವನ್ನು ಹುಡುಕಿದ ಎಸಿಬಿ ಅಧಿಕಾರಿಗಳಿಗೆ, ಈ ಅಕ್ರಮ ಸಂಪತ್ತಿನ ಹಿಂದೆ ಶಾಂತಗೌಡ ಎಂ ಬಿರಾದಾರ್ ಮತ್ತು ಗದಗದ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾಗಿರುವ ಟಿ ಎಸ್. ರುದ್ರೇಶಪ್ಪ ಅವರ ಕೈವಾಡವಿರುವುದು ಗೊತ್ತಾಗಿದೆ.

ಈ ಇಬ್ಬರನ್ನೂ ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಶಾಂತಗೌಡ ಬಿರಾದರ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಇದ್ದು ಇಂದು ಬೆಳಗ್ಗೆ ಅಸೌಖ್ಯವಾದ ಹಿನ್ನೆಲೆಯಲ್ಲಿ ತಪಾಸಣೆ ಮತ್ತು ಚಿಕಿತ್ಸೆಗೆಂದು ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.

ನಿನ್ನೆ ಎಸಿಬಿ ಅಧಿಕಾರಿಗಳು ಮನೆಗೆ ಬಂದಾಗ ಹತ್ತು ನಿಮಿಷ ಬಾಗಿಲು ತಗೆಯದೇ ಶಾಂತಗೌಡ ಸತಾಯಿಸಿದ್ದಲ್ಲದೆ ತನಿಖೆಗೂ ಸರಿಯಾಗಿ ಸ್ಪಂದಿಸಿರಲಿಲ್ಲ. ಸಿಬ್ಬಂದಿಗೆ ಸಹಕರಿಸಿರಲಿಲ್ಲ. ಹಣವನ್ನು ಬಚ್ಚಿಡುವ ವಿಶೇಷ ತಂತ್ರ ಮಾಡಿದ್ದ ಕಾರಣ ಹಿರಿಯ ಅಧಿಕಾರಿಗಳು ಶಾಂತಗೌಡ ಬಿರಾದರ್ ಬಂಧನಕ್ಕೆ ಸೂಚನೆ ನೀಡಿದರು. ಅದರಂತೆಯೇ ಕಳೆದ ರಾತ್ರಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಮುರುಡೇಶ್ವರ ಪ್ರತಿಮೆ ವಿರೂಪ: ಟಾರ್ಗೆಟ್‌ ಮಾಡಿದ್ದು ಉಗ್ರರಲ್ಲ; ಚುನಾವಣೆಗೆ ಕೋಮುವಾದಿಗಳ ಹುನ್ನಾರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights