ಜೀವನ ಪ್ರಮಾಣಪತ್ರಕ್ಕೆ ಆಧಾರ್ ಕಾರ್ಡ್‌ ಕಡ್ಡಾಯವಲ್ಲ: ಕೇಂದ್ರ ಸರ್ಕಾರ

ಆಧಾರ್‌ ಕಾರ್ಡ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಪ್ರಕಾರ, ಜೀವನ ಪ್ರಮಾಣ ಪತ್ರ ಪಡೆಯಲು, ವಯಸ್ಸಾದ ಪಿಂಚಣಿದಾರರು ತಮ್ಮ ಬದುಕಿನ ಮಗ್ಗೆ ಪುರಾವೆಗಳನ್ನು ಸಲ್ಲಿಸಲು ಆಧಾರ್ ಕಾರ್ಡ್‌ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸರ್ಕಾರಿ ಕಚೇರಿಗಳ ಬಯೋಮೆಟ್ರಿಕ್ಸ್ ಹಾಜರಾತಿ ವ್ಯವಸ್ಥೆಯಲ್ಲಿಯೂ ಆಧಾರ್ ಸಂಖ್ಯೆಯ ಮೂಲಾಂಶವನ್ನು ಮೆಸೇಂಜಿಂಗ್ ಸೊಲ್ಯೂಷನ್ ಮೆಸೆಜ್ (ಸ್ಯಾಂಡಸ್) ನಲ್ಲಿ ತೆಗೆದುಹಾಕಲಾಗಿದೆ. ಜೀವನ ಪ್ರಮಾಣ ಪತ್ರ ಆಧಾರ ಅಗತ್ಯ ಎನ್ನುವ ಮೂಲಾಂಶವನ್ನು ತೆಗೆದುಹಾಕಲಾಗಿದೆ. ಇದರನ್ವಯ ಪಿಂಚಣಿದಾರರು ಬಯಸಿದರೆ ಮಾತ್ರ ಅವರು ಆಧಾರ್ ಬಗ್ಗೆ ಮಾಹಿತಿ ನೀಡಬಹುದು ಎಂದು ಹೇಳಲಾಗಿದೆ.

ಸಂದೇಶ್‌ ಅಪ್ಲಕೇಷನ್‌ಗೆ ಆಧಾರ್ ಅಗತ್ಯವಿಲ್ಲ..!

ರಾಷ್ಟ್ರೀಯ ಮಾಹಿತಿ ಕೇಂದ್ರ-ಅಭಿವೃದ್ಧಿಪಡಿಸಿರುವ ರಿತ ಸಂದೇಶ ಅಪ್ಲಿಕೇಶನ್‌ಗೂ ಆಧಾರ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.  ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಿಗಾಗಿ ಈ ಅಪ್ಲಿಕೇಶನ್‌ಅನ್ನು ವಿನ್ಯಾಸಗೊಳಿಸಲಾಗಿದ್ದು, ಸರ್ಕಾರಿ ನೌಕರರು ಈ ಮೂಲಕವೇ ತಮ್ಮ ಹಾಜರಾತಿಯನ್ನು ಖಾತ್ರಿ ಪಡಿಸಬೇಕು. ಇದಕ್ಕೆ ಆಧಾರ್‌ ಅಗತ್ಯವಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: BJP ಅಸ್ಸಾಂನಲ್ಲಿ ಮಾಫಿಯಾ, ಸಿಂಡಿಕೇಟ್‌ಗಳನ್ನು ನಡೆಸುತ್ತಿರುವಂತೆ ಕಾರ್ಯನಿರ್ವಹಿಸುತ್ತಿದೆ: ಪ್ರಿಯಾಂಕಾ ಗಾಂಧಿ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights