ಯೋಗದ ಮೂಲಕ ಆರೋಗ್ಯ ವೃದ್ಧಿಸಿಕೊಂಡ 70 ವರ್ಷದ ಅಜ್ಜಿ…!

ಯೋಗಾಭ್ಯಾಸದ ಮೂಲಕ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವ ಮಾತಿದೆ. ಇದಕ್ಕೆ ಪೂರಕ ಎಂಬಂತೆ ಇಲ್ಲೊಬ್ಬ ಅಜ್ಜಿ 70 ವರ್ಷದ ಇಳಿ ವಯಸ್ಸಿನಲ್ಲಿ ಯೋಗದ ಮೂಲಕ ಆರೋಗ್ಯ ವೃದ್ಧಿಸಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ 70 ವರ್ಷದ ವೃದ್ಧೆಯೊಬ್ಬರು ಯೋಗಾಭ್ಯಾಸ ಮಾಡುವ ಮೂಲಕ ಯೋಗದ ಮಹತ್ವವನ್ನು ಸಾರಿದ್ದಾರೆ. ಜಿಲ್ಲೆ ಗುಳೇದಗುಡ್ಡ ಪಟ್ಟಣದ ವೃದ್ಧೆ ದ್ರಾಕ್ಷಾಯಿಣಿ ವಡಗೇರಿ ಎಂಬುವರು ನೇಕಾರಿಕೆ ಉದ್ಯೋಗ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಕಾಲು ನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಯೋಗವನ್ನು ರೂಢಿಸಿಕೊಂಡ ಅಜ್ಜಿಗೆ ಇದುವರೆಗೂ ಯಾವ ಅನಾರೋಗ್ಯವೂ ಎದುರಾಗಿಲ್ಲ. ಯೋಗಾಸನದಿಂದಾಗಿ ಅವರ ಕಾಲು ನೋವು ಕೂಡ ಕಡಿಮೆಯಾಗಿದೆಯಂತೆ.

ಪರ್ವತಾಸನ, ಸೂರ್ಯ ನಮಸ್ಕಾರ, ಪವನಮುಕ್ತಾಸನ, ಪಶ್ಚಮೋತ್ತಾಸನ, ವಜ್ರಾಸನ, ಅರ್ಧಚಕ್ರಾಸನ, ಶಿರಸಾಸನ ಸೇರಿದಂತೆ ಮುಂತಾದ ಆಸನಗಳನ್ನ ಅಜ್ಜಿ ರೂಢಿಸಿಕೊಂಡಿದ್ದಾರೆ.

ಯಾರ ಸಹಾಯವಿಲ್ಲದೆ ಲೀಲಾಜಾಲವಾಗಿ ಯೋಗವನ್ನು ಮಾಡುವ ಅಜ್ಜಿ ನೋಡುಗರನ್ನು ಬೆರಗುಗೊಳಿಸಿದ್ದಾರೆ. ಪ್ರತಿನಿತ್ಯ ಬೆಳಗಿನ ಜಾವ ಎದ್ದು ವಿಹಾರಕ್ಕೆ ತೆರಳುವ ಇವರು ಒಂದು ಗಂಟೆ ಸಮಯವನ್ನು ಯೋಗಾಸನಕ್ಕೆ ಮೀಸಲಿಟ್ಟಿರುತ್ತಾರೆ.

ಒಟ್ಟಿನಲ್ಲಿ ಕಠಿಣ ಯೋಗಾಸನಗಳನ್ನು ತುಂಬಾ ಸುಲಭವಾಗಿ ಮಾಡುವ ಈ ಅಜ್ಜಿ ಎಲ್ಲರಿಗೂ ಮಾದರಿಯಾಗಿದ್ದಾರೆ.

bagalakote 70 years old woman doing yoga for her long life

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights